‘ಲೇ ತೆಪರ, ಈ ಗುಟೇಶನ್ ಪುಲ್ಗೆ ಅಂದ್ರೆ ಏನ್ಲೆ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಏನು? ಪುಲ್ಗೆನಾ? ಯಾವ ಭಾಷೆ ಅದು?’ ತೆಪರೇಸಿ ತಲೆ ಕೆರೆದುಕೊಂಡ.

‘ನಿನ್ತೆಲಿ, ಕನ್ನಡ ಕಣಲೆ, ಕೆಪಿಎಸ್ಸಿ ಪರೀಕ್ಷೇಲಿ ಕೇಳಿದಾರೆ’.

‘ಹೌದಾ? ನಾನು ಸಿರಿಗನ್ನಡಂ ಗೆಲ್ಗೆ, ಬಾಳ್ಗೆ ಅಂತ ಕೇಳಿದ್ನೆಪ, ಇದ್ಯಾವುದು ಪುಲ್ಗೆ?’

‘ಇಂಗ್ಲೀಷಲ್ಲಿ ಪುಲ್ ಅಂದ್ರೆ ಎಳಿಯೋದು, ಪುಶ್ ಅಂದ್ರೆ ತಳ್ಳೋದು. ಅದೇನರೆ ಕೇಳಿದ್ರಾ ಅಂತ’ ಗುಡ್ಡೆ ತನ್ನ ಪಾಂಡಿತ್ಯ ಪ್ರದರ್ಶಿಸಿದ.

‘ಲೇಯ್, ತಳ್ಳೋದು, ಎಳಿಯೋದು ಎಲ್ಲ ಕೆಲ್ಸ ಸಿಕ್ಕ ಮೇಲೆ. ಈಗ ಪರೀಕ್ಷೇಲೇ ಹಿಂಗೆ ಕೇಳಿದ್ರೆ ಹೆಂಗೆ? ಆ ಪ್ರಶ್ನೆಪತ್ರಿಕೆ ರೆಡಿ ಮಾಡಿದೋನಿಗೆ ‘ಪುಲ್ಗೆ ಕನ್ನಡ ಪ್ರಶಸ್ತಿ’ ಅಂತ ಒಂದು ಪ್ರಶಸ್ತಿ ಕೊಡಬೇಕು ನೋಡು’ ದುಬ್ಬೀರ ನಕ್ಕ.

‘ಇಂಥವು ಬಾಳ ತಪ್ಪದಾವಂತೆ, ಕಾಪಿ ಹೊಡೆದ್ರೂ ನಮ್ಮುಡುಗ್ರು ಪಾಸಾಗಲ್ಲ’.

‘ಏನೋ ಸಣ್ಣ ಪುಟ್ಟ ತಪ್ಪಾಗಿರ್ತಾವೆ ಬಿಡ್ರಲೆ, ವೈಟ್ನರ್ ಹಚ್ಚಿ ಸರಿ ಮಾಡಿದ್ರಾತು’ ಗುಡ್ಡೆ ಕಿಸಕ್ಕೆಂದ.

‘ಹಂಗಾದ್ರೆ ಇಡೀ ಕ್ವಶ್ಚನ್ ಪೇಪರ್‌ಗೇ ವೈಟ್ನರ್ ಹಚ್ಚಬೇಕಾಗ್ತತಿ. ಅದ್ರ ಬದ್ಲು ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿದ್ರೆ ನಮ್ಮುಡುಗ್ರು ಗ್ರೇಸಾಫೀಸರ್‌ಗಳಾದ್ರು ಆಗ್ತಾರೆ’ ಕೊಟ್ರೇಶಿ ಹೋಲ್‌ಸೇಲ್ ಮಾತಾಡಿದ.

‘ಅದು ಬಿಡ್ರಲೆ ಅತ್ಲಾಗೆ, ಈ ರಾಜಕೀಯದ್ದು ಏನ್ಕತೆ?’ ತೆಪರೇಸಿ ಮಾತು ಬದಲಾಯಿಸಿದ.

‘ರಾಜಕೀಯದ್ದಾ? ಮೊನ್ನೆ ನಮ್ ಸಿಎಂ ಸಾಹೇಬ್ರು ಯಾವುದೋ ಫೈಲ್ ನೋಡೋವಾಗ ಗುಂಡುಪಿನ್ ಚುಚ್ಚಿ ಬೆರಳಿಗೆ ಗಾಯ ಆತಂತಪ’ ದುಬ್ಬೀರ ಹೇಳಿದ.

‘ಹೌದಾ? ಮೋಸ್ಟ್‌ಲೀ ಅದು ಮುಡಾ ಫೈಲೇ ಇರ್ಬೇಕು’ ಕೊಟ್ರೇಶಿ ನಕ್ಕ.

‘ಅಥ್ವಾ ಆ ಗುಂಡುಪಿನ್ನು ಎಚ್‌ಡಿಕೆ ಬ್ರಾಂಡ್‌ದು ಇರಬೋದಾ?’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.