ಗುರುವಾರ , ಆಗಸ್ಟ್ 11, 2022
26 °C

ಚುರುಮುರಿ: ಒಗ್ಗರಣೆ ಸುದ್ದಿ!

ಬಿ.ಎನ್. ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ರೀ... ಅರ್ಜೆಂಟ್, ಕೊತ್ತಮರಿ ಸೊಪ್ಪು ಬೇಕಿತ್ತು, ಒಗ್ಗರಣಿ ಮಂಡಕ್ಕಿ ಮೇಲೆ ಉದುರುಸಾಕೆ... ಪಟ್ ಅಂತ ಹೋಗಿ ತರ್ತೀರಾ?’

‘ಇರೆ, ನೀನೊಬ್ಳು... ಟೀವಿಲಿ ಮಹಾರಾಷ್ಟ್ರದ ಬಿಗ್ ಬ್ರೇಕಿಂಗ್ ಬರ್ತಿದೆ...’

‘ಬೆಳಬೆಳಿಗ್ಗೆ ಅದೇನ್ ನ್ಯೂಸ್ ಹಾಕಿದೀರಿ ತೆಲಿನೋವು... ಎದ್ದುಹೋಗಿ ಅರ್ಧ ಲೀಟರ್ ಹಾಲು ತನ್ನಿ, ಇಲ್ಲಾಂದ್ರೆ ಕಾಫಿ ಇಲ್ಲ...’

‘ತಡಿಯೆ, ಬಿಜೆಪಿಯೋರು ಸಂಭ್ರಮ ಆಚರಿಸಿ ಸ್ವೀಟ್ ತಿನ್ನಿಸ್ತಿದಾರೆ...’‌

‘ನಿಮಗೆ ಡಯಾಬಿಟಿಸ್ ಇದೆ, ಸ್ವೀಟ್ ತಿನ್ನಿಸೋದು ನೋಡಿದ್ರೂ ಶುಗರ್ ಜಾಸ್ತಿ ಆಗುತ್ತೆ, ಚಾನೆಲ್ ಚೇಂಜ್ ಮಾಡಿ...’

‘ಚೇಂಜ್ ಮಾಡಿದೆ, ಅಯ್ಯಯ್ಯಪ್ಪ ಇದ್ರಲ್ಲಿ ತಲೆ ಕತ್ತರಿಸಿದ ಸುದ್ದಿ ಬರ್ತಿದೆ. ‘ಕೊಲೆ ಹೇಗೆ ನಡೀತು ಗೊತ್ತಾ’ ಅಂತ ಆ್ಯಂಕರ್ ಕೇಳ್ತಿದಾಳೆ...’

‘ಅವಳ ತಲೆ, ಮೊದ್ಲು ಆ ಚಾನೆಲ್ ಚೇಂಜ್ ಮಾಡಿ, ಅಂಥ ಸುದ್ದಿ ನೋಡಿದ್ರೆ ನಿಮ್ ಬೀಪಿ ಏರಿಬಿಡುತ್ತೆ...’

‘ಆಯ್ತು, ಇದ್ಯಾವುದೋ ಚಾನೆಲ್‌ನೋರು ಕೊರೊನಾ ಪಿಟೀಲು ಕುಯ್ತಿದಾರಪ್ಪ...’

‘ಅದೂ ಬೇಡ, ಬೇರೆ ಹಾಕಿ’

‘ಓಕೆ, ಮ್ಯೂಸಿಕ್ ಚಾನೆಲ್ ಹಾಕ್ತೀನಿ, ಅರೆ ಏನಿದು ಎಕ್ಕಾ ಚಕ್ಕಾ ಹಾಡು... ಯಾರೆ ಇವಳು?’

‘ಥು ನಿಮ್ಮ, ಬಾಯಿ ಮುಚ್ಕೊಂಡು ಬೇರೆ ಹಾಕಿ, ಇಲ್ಲ ಆಫ್ ಮಾಡಿ...’

‘ಅಲ್ಲ ನನ್ನನ್ನೇನು ರಿಮೋಟ್ ಡ್ರೈವರ್ ಅಂದ್ಕಂಡಿದೀಯ? ಒಗ್ಗರಣೆಗೆ ಕೊತ್ತಮರಿ ಬೇಡ್ವಾ?’

‘ಆ ಟೀವಿಯೋರು ಹಾಕೋ ಮಾತಿನ ಒಗ್ಗರಣೆ ಮುಂದೆ ನಂದ್ಯಾವ ಲೆಕ್ಕ ಬಿಡಿ, ಆಗ್ಲೇ ಮಂಡಕ್ಕಿ ರೆಡಿ ಆಯ್ತು...’

‘ಅಲ್ವೇ, ನಾವು ಟೀವಿ ನೋಡದೆ ಇದ್ರೆ ಅವರ ಟಿಆರ್‌ಪಿ ಏರೋದೆಂಗೆ, ಅವರು ಬದುಕೋದೆಂಗೆ?’

‘ಅವರ ಟಿಆರ್‌ಪಿ ಹೆಂಗೋ ಏರುತ್ತೆ, ಆದ್ರೆ ಏರಿದ ನಿಮ್ ಬೀಪಿ ಇಳಿಯಲ್ವಲ್ಲ... ಎದ್ದೋಗಿ ಹಾಲು ತಗಂಡ್ ಬನ್ನಿ...’

ಮಡದಿ ಮಾತು ಮೀರಿ ಉಳಿದೋರುಂಟೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.