ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಪ್ರಣಾಳಿಕೆ– ಡಿಮ್ಯಾಂಡ್‌

Last Updated 27 ಮಾರ್ಚ್ 2023, 20:53 IST
ಅಕ್ಷರ ಗಾತ್ರ

‘ನೋಡೇ ರುಕ್ಮಿಣಿ, ಪೇಪರ್‌ನಲ್ಲಿ ಏನು ಬಂದಿದೆ ಅಂತ. ಯಾವಾಗಲೂ ಹೇಳ್ತಾ ಇರ್ತೀಯಲ್ಲ ಈ ರಾಜಕಾರಣಿಗಳು ಮನೆ ನಡೆಸೋ ನಮ್ಮ ಹತ್ರ ಏನೂ ಕೇಳಲ್ಲ ಅಂತ. ಈಗ ನೋಡು ಅವರ ಪ್ರಣಾಳಿಕೆಗೆ ನಿನ್ನಂಥ ಮಹಿಳಾಮಣಿಗಳ ಸಲಹೆ, ಸೂಚನೆ ಬೇಕಂತೆ. ಬೇಗ ಬೇಗ ಹೇಳು ನಿನ್ನ ಡಿಮ್ಯಾಂಡು...’

‘ಪ್ರಣಾಳಿಕೆ... ಹಾಗಂದ್ರೆ ಏನ್ರೀ ಅದು. ಈ ಪ್ರಣಾಳಶಿಶು ಅಂತಾರಲ್ಲ ಅದುವ... ನಮಗೆ ಈಗ್ಲೇ ಮೂವರು ಮಕ್ಕಳು ಇದ್ದಾವಲ್ಲ ಗಟ್ಟಿಮುಟ್ಟಾಗಿ, ಮತ್ತೆ ಯಾಕೆ ಅವೆಲ್ಲ ಗೋಳು?’

‘ಅಯ್ಯೋ... ಈ ಪ್ರಣಾಳಿಕೆ ಆ ರೀತಿದ್ದಲ್ಲ ಕಣೇ... ಈಗ ಎಲೆಕ್ಷನ್‌ ಆದ್ಮೇಲೆ ಅಧಿಕಾರಕ್ಕೆ ಬರೋ ಪಕ್ಷ ಏನೆಲ್ಲ ನಿಂಗೆ ಕೊಡಬೇಕು, ಅಂದರೆ ಮಹಿಳೆಯರಿಗೆ ಅದೇನೆಲ್ಲ ಬೇಕೂಂತ ಕೇಳೋ ವಿಷಯ ಇದು’.

‘ಓಹೋ... ಹಾಗೋ, ಹಾಗಿದ್ರೆ ಹೇಳ್ತೀನಿ ಕೇಳಿ... ಮೊದಲು ನಮಗೂ ಮನೆಯಲ್ಲಿ ವಾರಕ್ಕೆ ಐದು ದಿನ ಕೆಲಸ ಅಂತ ಆಗಬೇಕು, ಮತ್ತೆ ಪ್ರತೀ ಹಬ್ಬಕ್ಕೂ ರೇಷ್ಮೆ ಸೀರೆ, ವರ್ಷಕ್ಕೆ ಐದು ಪವನ್ ಚಿನ್ನದ ಸರ...’

ಹ್ಹ ಹ್ಹ ಹ್ಹ ‘ಸಾಕು ಸಾಕು ನಿಲ್ಲಿಸು... ನೀನು ಗಂಡನತ್ರ ಅಲ್ಲ ಕಣೇ.. ಸರ್ಕಾರದವ್ರತ್ರ ಕೇಳ್ತಾ ಇರೋದು. ಅಷ್ಟಕ್ಕೂ ಹಳೆ ಕಾಲದ ಹೆಂಗಸರ ಥರ ಚಿನ್ನ, ಸೀರೆ ಅಂತ ಕೂತ್ಕೋಬೇಡ. ಹೊಸದಾಗೆ ಏನಾದರೂ ಡಿಮ್ಯಾಂಡ್‌ ಮಾಡೋದನ್ನ ಕಲಿ’.

‘ಅಯ್ಯೋ ಸರ್ಕಾರನೂ ಒಂಥರ ಗಂಡ ಇದ್ದಂಗೆ ಕಣ್ರೀ... ನಾವೆಲ್ಲ ಜೋರಾಗಿ ಹೇಳಿದ್ರೆ ಕೇಳೇ ಕೇಳುತ್ತೆ. ಹೊಸದಾಗಿ ನಮಗೆಲ್ಲ ಅದೇನ್ರೀ ಅಂಥ ದೊಡ್ಡ ಆಸೆ ಇರುತ್ತೆ... ಹ್ಹಾ... ಬೇಕಾದರೆ ವರ್ಷಕ್ಕೊಮ್ಮೆ ಫಾರಿನ್ ಟೂರ್, ಜತೆಗೆ ಒಂದು ಕಾರು, ಮತ್ತೆ...’

‘ಓಕೆ, ಓಕೆ ಎಲ್ಲ ಬರ್ಕೊಂಡೆ. ನಿನ್ನ ಪಟ್ಟಿ ಇನ್ನೂ ದೊಡ್ಡದಾದರೆ, ಆಮೇಲೆ ಎಲೆಕ್ಷನ್ ಅನ್ನೇ ನಿಲ್ಲಿಸಿಬಿಟ್ಟಾರು. ಈಗ ನಮಗೆ ಹೇಳಿರೋ ಅಕ್ಕಿನೂ ತಪ್ಪಿ ಹೋಗಬಹುದು. ಮೊದಲು ತಿಂಡಿ ರೆಡಿ ಮಾಡು. ನಾನು ಪೇಟೆಗೆ ಹೋಗಿ, ವೋಟರ್ ಲಿಸ್ಟ್‌ನಲ್ಲಿ ನಮ್ಮ ಹೆಸರು ಇದೆಯಾ ಇಲ್ವಾ ಅಂತ ನೋಡ್ಕೊಂಡು ಬರ್ಬೇಕು’!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT