ಮಗಳು ಹೋಂ ವರ್ಕ್ ಬರೆಯುತ್ತಿದ್ದಳು. ಶಂಕ್ರಿ, ಹೆಂಡ್ತಿ ಹೇಳುವ ತರಕಾರಿಯ ಪಟ್ಟಿ ಬರೆಯುತ್ತಿದ್ದ.

‘ಮಮ್ಮಿ, ‘ಬೇದಿ’ಗೆ ಹೊಕ್ಕುಳ ಸೀಳಬೇಕಾ?’ ಮಗಳು ಕೇಳಿದಳು.

‘ಥೂ, ಸೀಳಬೇಡ, ಗಲೀಜು’ ಸುಮಿ ಮುಖ ಕಿವುಚಿಕೊಂಡಳು.

‘ಸೀಳಬೇಕು ಪುಟ್ಟಿ. ‘ಬೇ’ಗೆ ಹೊಕ್ಕುಳ ಸೀಳಿದರೆ ಸರಿಯಾದ ‘ಭೇದಿ’ ಆಗುತ್ತದೆ’ ಅಂದ ಶಂಕ್ರಿ.

‘ಸರಿ ಡ್ಯಾಡಿ, ಹೋಂ ವರ್ಕ್ ಮುಗಿಸಿದೆ ನೋಡಿ’ ಮಗಳು ಪುಸ್ತಕ ಕೊಟ್ಟಳು.

ಪರಿಶೀಲಿಸಿದ ಶಂಕ್ರಿ, ‘ಪುಟ್ಟಿ, ‘ಹಸು’ವನ್ನು ‘ಹಸ’ ಅಂತ ಬರೆದಿದ್ದೀಯ, ‘ಕೊಂಬು’ ಕೊಟ್ಟು ‘ಹಸು’ ಮಾಡು’.

‘ಡ್ಯಾಡಿ, ಕೊಂಬು ಕೊಟ್ಟರೆ ಹಸು ಹಾಯೋದಿಲ್ವಾ?!’ ಮಗಳು ಕಿಸಕ್ಕನೆ ನಕ್ಕಳು.

‘ಹಾಯುತ್ತೋ ಬಿಡುತ್ತೋ ಹಸುಗೆ ಕೊಂಬು ಕೊಡಬೇಕು’.

‘ತರಕಾರಿ ಲಿಸ್ಟ್ ಕೊಡ್ರಿ, ನೋಡಿ ಇನ್ನೇನು ಬೇಕು ಅಂತ ಹೇಳ್ತೀನಿ’ ಎಂದು ಪಟ್ಟಿ ಈಸ್ಕೊಂಡ ಸುಮಿ, ‘ಇದೇನ್ರೀ, ಹ್ಯಾಂಡ್ ರೈಟಿಂಗ್ ಇಷ್ಟು ಕೆಟ್ಟದಾಗಿದೆ’ ಎಂದಳು.

‘ಕಂಪ್ಯೂಟರ್ನಲ್ಲಿ ಬರವಣಿಗೆ ಶುರುವಾದ ಮೇಲೆ ಕೈಬರಹದ ಅಭ್ಯಾಸ ತಪ್ಪಿ ಅಕ್ಷರಗಳು ಹಿಡಿತ ತಪ್ಪಿವೆ’.

‘ಮಗಳ ಜೊತೆ ನೀವೂ ಕಾಪಿ ರೈಟಿಂಗ್ ಬರೆದು ಹ್ಯಾಂಡ್ ರೈಟಿಂಗ್ ಇಂಪ್ರೂವ್ ಮಾಡಿಕೊಳ್ಳಿ... ಇದೇನ್ರೀ, ಮೂಲಂಗಿಯನ್ನು ‘ಮೇಲಂಗಿ’ ಅಂತ ಬರೆದಿದ್ದೀರಿ, ಆಲೂಗೆಡ್ಡೆಯನ್ನು ‘ಹಾಲುಗೆಡ್ಡೆ’ ಮಾಡಿದ್ದೀರಿ...’

‘ನಮ್ಮ ಮನೆಗನ್ನಡ ಅಂಗಡಿಯವರಿಗೆ ಅರ್ಥವಾಗುತ್ತೆ, ಮೊನ್ನೆ ನೀನು ತುಪ್ಪವನ್ನು ‘ತಪ್ಪ’ ಅಂತ ಬರೆದಿದ್ದೆ, ಅಂಗಡಿಯವನು ಸರಿಯಾದ ತುಪ್ಪ ಕೊಟ್ಟ. ಡಾಕ್ಟರ್ಗಳ ಪ್ರಿಸ್ಕ್ರಿಪ್ಷನ್ ನಮಗೆ ಅರ್ಥವಾಗದಿದ್ದರೂ ಮೆಡಿಕಲ್ ಸ್ಟೋರ್ನವರಿಗೆ ಅರ್ಥವಾಗುತ್ತದ್ದಲ್ಲ, ಇದೂ ಹಾಗೇ!’

‘ಕನ್ನಡಿಗರಾದ ನಾವೇ ಕನ್ನಡವನ್ನು ತಪ್ಪಾಗಿ ಬರೆಯೋದು ಸರಿಯಲ್ಲ, ಮೊನ್ನೆ ನೀವು ವಾಟ್ಸ್ಆ್ಯಪ್ನಲ್ಲಿ ‘ಸಿರಿಗನ್ನಡಂ ಗೆಲ್ಗೆ’ ಎಂಬುದನ್ನು ‘ಗಲ್ಗೆ’ ಎಂದು ಬರೆದು ಗ್ರೂಪ್ ಗೆಳೆಯರೆದುರು ನಗೆಪಾಟಲಿಗೀಡಾದ್ರಿ, ಇನ್ಮೇಲಾದರೂ ಸರಿಗನ್ನಡ ಬರೆಯಿರಿ...’ ಎಂದಳು ಸುಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.