‘ಲೇಯ್ ಗುದ್ಲಿಂಗ, ನೀನೊಂದು ಡಾಕ್ಟರೇಟ್ ತಗಂಬುಡಕಿಲ್ವಾ?’ ಎಂದು ಹರಟೆಕಟ್ಟೆಯಲ್ಲಿ ಛೇಡಿಸಿದ ಮಾಲಿಂಗ.

‘ಸುಮ್ಕಿರ್ಲಾ, ನಾವು ಡಾಕ್ಟರ್ಗೋಳ ಹತ್ರ ಹೋಗಿ ದುಡ್ ಪೀಕಿದ್ದೇ ಆಯ್ತು... ಡಾಕ್ಟರೇಟು ಎಂಗ್ಲಾ ತಗಳಕ್ಕಾಯ್ತದೆ?’ ಎಂದ ಗುದ್ಲಿಂಗ.

‘ಲೇಯ್, ಪಿಎಚ್ಡಿಗೆ ಬೆಲೇನೆ ಇಲ್ಲ, ಥೀಸೀಸ್ ಪೇಪರ್ ರದ್ದಿ ಪೇಪರ್ ಆಗೋಗದೆ ಅಂತ ನಮ್ ಸಾಹಿತಿಗಳು, ಕಲಾವಿದ್ರು ಬೇಜಾರ್ ಮಾಡ್ಕಂಡವ್ರೆ. ನಾಕು ಜನರ್ದಿರೋ ಥೀಸೀಸು ನಾಕ್ ನಾಕ್ ಸಾಲು ಎತ್ತಾಕ್ಕಂಡು ನಂದೇ ಒಂದು ಪ್ರಬಂಧ ಅಂತ ಕೊಟ್ರೆ. ಡಾಕ್ಟರೇಟ್ ಒದ್ಕಂಡು ಬತ್ತದೆ’.

‘ಅಲ್ಲಪ್ಪ, ನಾವು ಹುಡುಗ್ರಿದ್ದಾಗ ಸಣ್ ಪುಟ್ ಕಾಪಿಚಟ್ ಮಾಡ್ತಿದ್ವಿ... ದೊಡ್ ದೊಡ್ಡೋರೂ ಇಂಗ್ ಮಾಡ್ತಾರಾ? ಕಾಲ ಕೆಟ್ ಓಯ್ತು ಕಣಪ್ಪ’ ಎಂದ ಕಲ್ಲೇಶಿ.

‘ಊ ಕಣ್ಲಾ? ಒಂದಲ್ಲ ಎಲ್ಡಲ್ಲ, 143 ಪ್ರಬಂಧನ ಇಂಗೇ ಕಾಫಿಚಟ್ ಮಾಡವ್ರೆ ಅಂತ ಗೊತ್ತಾಗದೆ. ಇವ್ರೆಲ್ಲಾ ಆಚಾರ್ಯ ಎಂಗಾದಾರು? ಡಾ. ಕೃತಿಚೌರ್ಯ ಅಂತ ಕರೀಬೇಕಷ್ಟೇ’.

‘ಎಲ್ಲಾ ಥೀಸೀಸ್ ಗುಡ್ಡೆ ಆಕಿ ವಿಷ್ಯ ಕಾಲಿ ಆಗದೆ! ಅದಕ್ಕೇ ಅಲ್ಲಿಷ್ಟು ಇಲ್ಲಿಷ್ಟು ಗೆಬರಿ ನಮ್ದು ಹೆಸರಾಕ್ಕಂಡವ್ರೆ. ಸಂಪಾದನೆ ಮಾಡವ್ರೆ ಕಣ್ಲಾ, ಕೃತಿಚೌರ್ಯ ಅನ್ಬಾರ್ದು’.

‘ಅಲ್ಲ ಕಣ್ರೋ! ವಿಷ್ಯ ಕಾಲಿ ಆಯ್ತು ಅಂತ ಅವರಿವರದ್ದು ಹಾರಿಸ್ಬಿಡೋದಾ? ಹೈಕ್ಳಿಗೆ ಪುಡಿ ನೋಟ್ಸು ಅಂತ ಜೆರಾಕ್ಸ್ ಹಾಳೆ ಹಂಚಿ ತಾವು ಮಾತ್ರ ಯುಜಿಸಿ ಗ್ರಾಂಟ್ ಗೆರ್ಕಂಡು ಕಂತೆ ಕಂತೆ ನೋಟು ಮಡಿಕ್ಕಳಾದು’.

‘ಗೂಗಲ್ಲಲ್ಲಿ ಇಲ್ದಿರಾದು, ತಾಳೆಗರಿಲೋ, ನವಿಲು ಗರಿಲೋ ಇರೋ ವಿಷಯ ಉಡಿಕ್ಕಂಡು ಸಾಚಾ ಥೀಸೀಸ್ ಬರೆಯೋದೇ ಒಳ್ಳೇದು. ಇಲ್ಲ ಅಂದ್ರೆ ಅದೆಂತದೋ ಸಾಫ್ಟ್ವೇರ್ ಕಂಡು ಹಿಡ್ದವ್ರಂತೆ... ಅದು ಇಂಗ್ ಕಾಫಿ ಒಡ್ದ ಥೀಸೀಸ್ನೆಲ್ಲಾ ಲಬಕ್ ಅಂತ ಇಡಿದು ಆಕ್ದದಂತೆ’.

‘ಅಯ್ಯೋ! ಅದಕ್ಕೂ ಚೀನಾದವರಿಂದ ಒಂದು ವೈರಸ್ ಕೊಂಡ್ಕಂಡು ಕಂಪ್ಯೂಟರ್ ಒಳಕ್ಕೆ ತೂರಿಸ್ತಾರೆ’.

‘ಕಾಪಿಚಟ್ ಪತ್ತೆ ಮಾಡುವ ಸಾಫ್ಟ್ವೇರ್ ಕೆಡಿಸುವುದು ಹೇಗೆ?’ ಅಂತಲೇ ಥೀಸೀಸ್ ಬರ್ದು ಡಾಕ್ಟರೇಟ್ ಗಿಟ್ಟಿಸ್ತಾರೆ’ ಎಂದು ಟವಲ್ ಕೊಡವಿ ಮೇಲೆದ್ದ ಪರ್ಮೇಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.