ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮತ್ತು- ಆಪತ್ತು...

Last Updated 8 ಮಾರ್ಚ್ 2023, 19:45 IST
ಅಕ್ಷರ ಗಾತ್ರ

‘ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡಾ ಮುಟ್ಟಿದ್ ಕೈನಾ’... ರಿಂಗ್ ಟೋನ್ ನಿಲ್ಲುತ್ತಿದ್ದಂತೇ ಹಿರಿಯೂರ ಹಿರಿಯಣ್ಣ ‘ಹಲೋ... ನಮಸ್ಕಾರ, ನಿಮ್ಮ ರಿಂಗ್ ಟೋನ್ ಸಖತ್ತಾಗಿದೆ ಸಾರ್’.

‘ರಾಜರತ್ನಂ ಸಾಹಿತ್ಯ, ಕಾಳಿಂಗರಾಯರ ಕೋಗಿಲೆ ಕಂಠ... ಓಲ್ಡ್ ಈಸ್ ಗೋಲ್ಡ್ ಅಲ್ವೇ?’

‘ನೀವು ಓಲ್ಡ್ ಅಂತಾಯಿದೀರಿ, ನನಗೆ ಯಂಗ್ ಜನರೇಶನ್ ಚಿಂತೆ ಆಗಿದೆ, ನೋಡಿಲ್ಲವಾ ಪೇಪರ್‍ರು’.

‘ಮದ್ಯ ಖರೀದಿ ಮತ್ತು ಮಾರಾಟಕ್ಕೆ ಇರೋ ವಯೋಮಿತಿಯನ್ನ 18ಕ್ಕೆ ಇಳಿಸೋಕೆ ಸಿದ್ಧತೆ ನಡೆದಿದೆಯಂತೆ, ನೋಡಿಲ್ವಾ?’

‘ಮುಗದೋಯ್ತು... ಈಗ್ಲೇ ಮದ್ಯದ ಅಮಲಿನಲ್ಲಿ ಏನೇನೊ ಅವಾಂತರಗಳು. ವಿಮಾನದಲ್ಲೋಡಾಡೊ ಮಾನವಂತರಿಗೇ ಶೌಚಾಲಯ ಯಾವುದು ಸೀಟು ಯಾವುದು ಅಂತ ವ್ಯತ್ಯಾಸ ಗೊತ್ತಾಗ್ತಾಯಿಲ್ಲ. ಇನ್ನು ಹದಿಹರೆಯದ ಹೈಕ್ಳು ಬಾಟ್ಲು ಎತ್ತೋಕೆ ಶುರು ಮಾಡಿಬಿಟ್ಟರೆ?’

‘ಹುಚ್ಚು ಖೋಡಿ ಮನಸು, ಹದಿನಾರರ ವಯಸು’ ಅಂತ ಎಚ್ಎಸ್‌ವಿ ಅವರ ಫೇಮಸ್ ಭಾವಗೀತೇನೆ ಇದೆಯಲ್ಲ, ಹದಿನಾರಕ್ಕೇ ಹಂಗಾ
ದರೆ ಇನ್ನು ಹದಿನೆಂಟಕ್ಕೆ ಹ್ಯಾಂಗ್‌ಹ್ಯಾಂಗೋ?!’

‘ಚುನಾವಣೆ ಬಂತು. ಗುಂಡು ಪಾರ್ಟಿ, ಆಮಿಷಗಳು. ಮೊದಲೇ ಕೋತಿ, ಒಂದಷ್ಟು ಹೆಂಡ ಕುಡಿಸಿ, ಬಾಲಕ್ಕೆ ಚೇಳು ಕಚ್ಚಿಸಿಬಿಟ್ಟರೆ ‘ಒಳಗೆ ಸೇರಿದರೆ ಗುಂಡು’ ಅಂತ ತೂರಾಡಿಕೊಂಡು ಯುವಜನತೆ ಹಾಳಾಗೋಲ್ವೆ?!

‘ಪಾನನಿರೋಧ ಅಂತ ಹೋರಾಡಿದ ಗಾಂಧಿ, ಮೊರಾರ್ಜಿ ಅವರಂತಹ ಮಹಾತ್ಮರೆಲ್ಲ ಸಮಾಧಿಯಲ್ಲೇ ಹೊರಳಾಡಬೇಕಷ್ಟೆ’.

‘ಬೊಕ್ಕಸಕ್ಕೆ ಅಪಾರ ಹಣ ಬರುತ್ತೆ ಅಂತ ಕುಡಿತಕ್ಕೆ ಕುಮ್ಮಕ್ಕು ಕೊಡೋದು, ಇನ್ನೊಂದು ಕಡೆ ಮದ್ಯಪಾನ ಸಂಯಮ ಮಂಡಳಿನೂ ಸರ್ಕಾರಾನೇ ನಡೆಸೋದು. ಒಂಥರಾ ಚೂಟೊದು ತೊಟ್ಟಿಲು ತೂಗೋದು ಮಾಡಿದಂಗಿದೆಯಲ್ಲವೇ!’

‘ಹೀಗೇ ಕುಡಿತದ ವಯಸ್ಸು ಇಳಿಸ್ತಾ ಬಂದ್ರೆ ಮಕ್ಕಳ ಫೀಡಿಂಗ್ ಬಾಟಲ್‌ಗಳ ಜಾಗದಲ್ಲಿ ಬ್ರಾಂದಿ, ವಿಸ್ಕಿ ಬಾಟಲ್‌ ಬಂದ್ರೂ ಬಂದಾವು’.

‘ಅಷ್ಟೇ ಅಲ್ಲ, ಪಾನ ಕಡ್ಡಾಯ ಶಾಸನಾನೇ ಬಂದುಬಿಟ್ಟರೆ?!’

‘ಹಲೋ... ಹಾಳಾದ್ದು ಕಟ್ಟಾಯ್ತು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT