ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮುಮ, ಉಮುಮ, ಸೂಮುಮ!

Last Updated 4 ಆಗಸ್ಟ್ 2021, 20:10 IST
ಅಕ್ಷರ ಗಾತ್ರ

‘ಹೈಕಮಾಂಡ್ ಎಂದರೆ ಏನು?’ ಎಂದು ಹೆಂಡತಿ ಕೇಳಿದಳು. ‘ನೀನು ನನ್ನ ಮೇಲೆ ಹತೋಟಿ ಹೊಂದಿದ್ದರೆ ಆಗ ನೀನೇ ನನ್ನ ಹೈಕಮಾಂಡ್’ ಎಂದು ವಿವರಿಸಿದೆ.

‘ಛೆ! ಅದು ಐ ಕಮಾಂಡ್ ಆಗುತ್ತೇರಿ’ ಎಂದಾಗ, ‘ಈ ಕಮಾಂಡ್ ದೆಹಲೀಲಿ ಇರೋ ದ್ರಿಂದ ಅದು ಹೈಕಮಾಂಡ್ ಆಗುತ್ತೆ’ ಎಂದೆ.

‘ಈ ಉಪಮುಖ್ಯಮಂತ್ರಿ ಎಂದರೇನು? ಮಂತ್ರಿಗಿಂತ ಮೇಲೆ ಮುಖ್ಯಮಂತ್ರಿಗಿಂತ ಕೆಳಗೆ ತಾನೆ?’

‘ಹೌದು. ಇಂದಿನ ಶಾಸಕನೇ ನಾಳಿನ ಮಂತ್ರಿ, ಇಂದಿನ ಮಂತ್ರಿಯೇ ನಾಳಿನ ಮುಖ್ಯಮಂತ್ರಿ’ ಎಂದು ನಮ್ಮ ನಾಯಕರ ಸುಪ್ತಬಯಕೆಯ ಪರಿಚಯ ಮಾಡಿಸಿದೆ.

‘ಮತ್ತೆ ಉಪಮುಖ್ಯಮಂತ್ರಿ?’

‘ಎಲ್ಲರೂ ಮುಮ ಆಗುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಉಮುಮನಾದರೂ ಆಗೋಣ ಎಂದು ಆಸೆಪಡ್ತಾರೆ’ ಎಂದೆ.

‘ಈ ಉಮುಮಗಳಿಗೆ ಏನಾದರೂ ಸ್ಪೆಷಲ್ ಗೌರವ, ಭತ್ಯೆ, ಅಧಿಕಾರ ಇದೆಯೇ? ಎಂದಳು.

‘ನೊ ನೊ. ಅದೇ ಬಂಗಲೆ, ಅದೇ ಗೂಟದ ಕಾರು ಎಲ್ಲ ಮಂತ್ರಿ ತರಹಾನೇ’ ಎಂದು ವಿವರಿಸಿದೆ. ‘ಹಾಗಿದ್ದರೆ ಎಲ್ಲರನ್ನೂ ಉಮುಮ ಮಾಡಿಬಿಡಬಹುದಲ್ಲ. ಸಮಸ್ಯೇನೇ ಇರೊಲ್ಲ’ ಎಂದಳು.

‘ಮಾಡಬಹುದು, ಆದರೆ ಟ್ರಾಫಿಕ್ ಪೊಲೀಸ್‍ನೋರು ಖಂಡಿತ ಒಪ್ಪೊಲ್ಲ’ ಎಂದಾಗ ಅವಳಿಗೆ ಅಚ್ಚರಿ.

‘ಇದಾವ ಹೈಕಮಾಂಡ್ ರಿ? ಎಂದಳು.

‘ನೋಡು ಪರಮೇಶ್ವರ್ ಉಮುಮ ಆಗಿದ್ದಾಗ ತಮಗೆ ಝೀರೊ ಟ್ರಾಫಿಕ್ ಇರಬೇಕು ಎಂದು ಒತ್ತಡ ತಂದು ಟ್ರಾಫಿಕ್ ಕಿರಿಕಿರಿ ಮಾಡ್ತಿದ್ದರಂತೆ. ಈಗ ಎಲ್ಲರೂ ಉಮುಮ ಆಗಿ, ನಮಗೂ ಪರಮೇಶ್ವರ್ ಸ್ಟೈಲ್‍ನಲ್ಲಿ ಝೀರೊ ಟ್ರಾಫಿಕ್ ಮಾಡಿ ಎಂದರೆ ಬೆಂಗಳೂರು ಟ್ರಾಫಿಕ್ ಗತಿ ಏನು? ಅದಕ್ಕೆ ಪೊಲೀಸಿನೋರು ಒಪ್ಪೊಲ್ಲ’ ಎಂದೆ. ‘ನಿಜ ನಿಜ’ ಎಂದು ಒಪ್ಪಿದಳು.

‘ಮತ್ತೆ ಸೂಮುಮ ಫ್ಯೂಚರ್ ಏನು? ಎಂದಾಗ ನನಗೆ ಅಚ್ಚರಿ. ಸೂಮುಮ? ‘ಅದೇರಿ ಸೂಪರ್ ಮುಖ್ಯಮಂತ್ರಿ’ ಎಂದಾಗ ಇವಳಿಗೆ ಪಾಲಿಟಿಕ್ಸ್ ಅರ್ಥ ಆಗೇಹೋಯ್ತು ಎನ್ನಿಸಿತು. ಆದರೆ ಅವಳ ಪ್ರಶ್ನೆಗೆ ಉತ್ತರ ನನ್ನ ಬಳಿ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT