‘ಸಿನಿಮಾದವ್ರೆಲ್ಲ ಡ್ರಗ್ಸ್ ತಗಂದು ಪಾರ್ಟಿ ಮಾಡ್ತದಾರಂತ ಯಾರೋ ಇಂದ್ರಕರ್ತ ಹೇಳ್ತದಾರೆ. ಇನ್ನೊಬ್ಬ ಹಿರಿಯ ಶತ್ರುಕರ್ತರು, ಇದೆಲ್ಲ ಸುಳ್ಳು, ಕೊರೊನಾ ಬಂದಾಗ ಎಣ್ಣೆ ಸಿಗ್ತುದ್ದುಲ್ಲಾಂತ ಕಲಾವಿದ್ರಿಗೆ ಕಳವಳ ಆಗೇತಿ ಅಂತಂದದಾರೆ. ಒಟ್ಟು ಇದೇನಂತ ತಿಳೀವಲ್ದಲೇ’ ಅಂದ ರುದ್ರೇಶಿ.

ಆಗ ಚಂಬಸ್ಯ, ‘ಬಿಡಪ್ಪಜ್ಜಿ, ಆ ಇಂದ್ರಕರ್ತರು ಬರೇ ಬಟ್ಟಿ ಹಾವಾಡಸ್ತಾರೆ. ತನಗೆ ಗೊತ್ತುದ್ಮೇಲೆ ಇಂತಿಂಥವ್ರು ಅಂತ ಯೆಸ್ರು ಯೇಳದ್ಬಿಟ್ಬಿಟ್ಟು,
ನಾನು ಅಧಿಕಾರಿಗಳಿಗ್ಹೇಳಿದೀನಿ, ಅವ್ರೇ ಬಹಿರಂಗ ಪಡುಸ್ತಾರೆ ಅಂದ್ರೆ ಯೆಂಗೆ?’ ಅಂದ.

‘ಅಂಗಂತಿಯಾ? ಮತ್ತಿಪ್ಪಟ್ಟು ಫೇಮಸ್ ನಟಿ ನಶೇಲಿ ಡ್ಯಾನ್ಸ್ ಮಾಡ್ತಿರೋ ಫೋಟೊ ಬೇರೆ ಅಧಿಕಾರಿಗಳಿಗೆ ಕೊಟ್ಟದಾರಂತವ್ರು..?’

‘ಅಕಿ ಮೊದ್ಲೇ ಮಾದಕ ನಟಿ ಇರ್ತಾಳೆ! ನಾನು ನಶೇಲಿರೋ ಥರ ಪೋಜ್ ಕೊಟ್ಟದನಿ. ಕೇವಲ ನನ್ ಎಕ್ಸ್ಪ್ರೆಷನ್ ನೋಡಿ ನಾನು ಮಾದಕ ದ್ರವ್ಯ ಸೇವಿಸಿದಿನಿ ಅಂತ ಹೆಂಗ್ಹೇಳ್ತಿರ ನೀವು ಅಂತ ಲಾ ಪಾಯಿಂಟ್ ಹಾಕ್ತಾಳೆ. ಅಲ್ಲಿಗೆ ಆ ವಿಷ್ಯನೂ ಹಳ್ಳ ಹಿಡಿತತಿ’.

‘ಅಂಗರೆ ಇದೇನಾಕ್ಕತಿ ಅಂತನಿಲೇ ಬಸ್ಸಿ? ನಾಡಿನಾದ್ಯಂತ ವಿವಿಧ ನಟರ ಅಭಿಮಾನಿಗಳು, ಎಲ್ಲಿ ತಮ್ಮ ಹೀರೊ ಯೆಸ್ರು ಇನ್ವೆಸ್ಟಿಗೇಸನ್ನ್ಯಾಗ್ ಹೈಲೈಟ್ ಆಕ್ಕತೋ ಅಂತ ಟೆನ್ಶನ್ ಮಾಡ್ಕ್ಯಂದ್ ಕುಂತದಾರೆ. ಇದ್ದೋರ್ ಮೂರು ಮಂದೀಲಿ ಕದ್ದೋರ್ಯಾರು ಅನ್ನೊ ಹಂಗೆ ಇದೊಳ್ಳೆ ಮಾದಕ ರಹಸ್ಯ ಆಗಿ ತಲಿ ಕೊರಿತೈತಿಲೇ’.

‘ತನಿಖೆ ಅಂತೂ ಆಗೇ ಆಕ್ಕತಿ. ಒಂದಿಬ್ರು ನಟರ ಯೆಸ್ರು ಹೊರಗೆ ಬಂದ್ರೂ ಬಂದಾತು. ಆಗ ಅವ್ರು ನನ್ನ ಚಾರಿತ್ರ್ಯವಧೆ ಮಾಡಲು ದೊಡ್ಡ ಷಡ್ಯಂತ್ರ ನಡೆದಿದೆ ಅಂತ ತಿಪ್ಪೆ ಸಾರುಸ್ತಾರೆ. ಆ ನಟರವೇ ಪಿಚ್ಚರ್ ರಿಲೀಸ್ ಆದ್ಮೇಲೆ ಮತ್ತೆ ಅಭಿಮಾನಿಗಳು ಕಟೌಟ್ಗೆ ಹಾಲಿನಭಿಷೇಕ ಮಾಡ್ತಾರೆ. ಅಲ್ಲಿಗೆ ಇದು ಶುಭಂ ಆಕ್ಕತಿ’ ಎಂದು ಚಂಬಸ್ಯ ನಕ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.