7

ಶಾ‍ಪಗ್ರಸ್ತ ಪಾವಗಡ

Published:
Updated:

ದೇಶದ ಬಹುಪಾಲು ಕಡೆ ಹೆಚ್ಚಿನ ಮಳೆ ಆಗಿದೆ. ಆದರೆ ಪಾವಗಡ ತಾಲ್ಲೂಕಿನಲ್ಲಿ ಅದೂ ನಾಗಲಮಡಿಕೆ ಹೋಬಳಿಯಲ್ಲಿ ಇದುವರೆಗೂ ಒಂದು ಪೂರ್ಣ ಹದ ಮಳೆ ಆಗಿಲ್ಲ. ಇದು ಹೊಸದೇನಲ್ಲ. ಈ ತಾಲ್ಲೂಕಿನಲ್ಲಿ ಯಾವ ವರ್ಷವೂ ಬೆಳೆಗೆ ಸಾಕಾಗುವಷ್ಟು ಮಳೆ ಬರುವುದಿಲ್ಲ. ಕೆರೆ ಕುಂಟೆಗಳಲ್ಲಿ ಗುಬ್ಬಚ್ಚಿಗೂ ನೀರಿಲ್ಲ. ಆಂಧ್ರಪ್ರದೇಶದಲ್ಲಿ ನದಿ–ಹಳ್ಳಗಳಿಂದ ನೀರು ತಂದು ಕೆರೆಗಳನ್ನು ತುಂಬಿಸುತ್ತಿದ್ದಾರೆ. ಆದರೆ ಆ ಭಾಗ್ಯ ನಮಗಿಲ್ಲ.

ಈ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿದರೆ ಮಾತ್ರ ವ್ಯವಸಾಯ ಸಾಧ್ಯವಾಗುತ್ತದೆ. ಅದಿಲ್ಲದ ಕಾರಣ, ರೈತರು ಜೀವನೋಪಾಯಕ್ಕಾಗಿ ಬೆಂಗಳೂರು ಸೇರಿದ್ದಾರೆ. ಈ ತಾಲ್ಲೂಕಿನಲ್ಲಿ 50 ಎಕರೆ ಜಮೀನು ಇರುವುದೂ ಒಂದೇ, ಬೇರೆ ಕಡೆ ನಾಲ್ಕು ಎಕರೆ ಇರುವುದೂ ಒಂದೇ. ಎಕರೆಗಳ ಲೆಕ್ಕದಲ್ಲಿ ದೊಡ್ಡ ರೈತರು, ಸಣ್ಣ ರೈತರು ಎಂದು ವಿಭಜಿಸುವುದು ಈ ತಾಲ್ಲೂಕಿನ ಮಟ್ಟಿಗಂತೂ ಅಪ್ರಸ್ತುತ. ಹಾಗೆ ನೋಡಿದರೆ ಅತಿಹೆಚ್ಚು ನಷ್ಟ ಅನುಭವಿಸುವವರು ದೊಡ್ಡ ರೈತರೇ. ಏಕೆಂದರೆ ಅವರ ಮೇಲೆ ಹೆಚ್ಚಿನ ಸಾಲದ ಹೊರೆ ಇರುತ್ತದೆ. ಕೆರೆಗಳಿಗೆ ನೀರು ಹರಿಸಿದರೆ ಮಾತ್ರ ಇಲ್ಲಿ ವ್ಯವಸಾಯ ಸಾಧ್ಯ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ.

–ಜಿ. ನಾಗರಾಜಾರಾವ್, ಗ್ಯಾದಿಗುಂಟೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !