ದೇಶದ ವಿವಿಧೆಡೆಗಳಿಂದ ಕೋವಿಡ್ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಆದರೆ, ವರದಿಯಾಗಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ, ಸೋಂಕಿನ ಪರಿಣಾಮವು ಮಂದವಾಗಿದೆ. ಹದಿನೈದು ದಿನಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಈ ಪ್ರಕರಣಗಳು ಹೆಚ್ಚಾಗಿವೆ. ಇದು, ತುಸು ಕಳವಳ ಮೂಡಿಸುವಂತಿದೆ. ಕರ್ನಾಟಕದಲ್ಲಿ 100 ಸಕ್ರಿಯ ಪ್ರಕರಣಗಳು ಇವೆ. ಕೋವಿಡ್ ಸೋಂಕಿತರು ಮೃತಪಟ್ಟ ವರದಿಗಳೂ ಇವೆ. ಆದರೆ ಅವರ ಸಾವಿಗೆ ಕೋವಿಡ್ ಕಾರಣ ಎಂದು ಹೇಳಿಲ್ಲ. ಕೋವಿಡ್ ಪರೀಕ್ಷಾ ಕಿಟ್ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ, ಹೃದಯ ಸಂಬಂಧಿ ಮತ್ತು ಉಸಿರಾಟ ಸಂಬಂಧಿ ಸಮಸ್ಯೆಗಳು ಇರುವ ರೋಗಿಗಳನ್ನು ತಪಾಸಣೆಗೆ ಒಳಪಡಿಸುವಂತೆ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರವು ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹಾಗೂ ಸೂಚನೆಗಳನ್ನು ಆಸ್ಪತ್ರೆಗಳಿಗೆ ಮತ್ತು ಶಾಲೆಗಳಿಗೆ ಕಳುಹಿಸಲಾಗಿದೆ. ಕೋವಿಡ್ ಹರಡುವುದರ ಮೇಲೆ ನಿಗಾ ಇರಿಸಲು, ಹರಡುವುದನ್ನು ತಡೆಯುವ ಸುರಕ್ಷತಾ ಕ್ರಮಗಳು ಜಾರಿಯಲ್ಲಿ ಇವೆ ಎಂಬುದನ್ನು ಖಾತರಿಪಡಿಸಲು ಇತರ ರಾಜ್ಯಗಳು ಕೂಡ ಇದೇ ಬಗೆಯ ಕ್ರಮಗಳನ್ನು ಕೈಗೊಂಡಿವೆ.

ಹಾಂಗ್ಕಾಂಗ್, ವಿಯೆಟ್ನಾಂ, ಸಿಂಗಪುರ ಮತ್ತು ಥಾಯ್ಲೆಂಡ್ನಲ್ಲಿ ಈಚಿನ ವಾರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಆಗಿದೆ. 2023ರ ಆಗಸ್ಟ್ನಲ್ಲಿ ಮೊದಲು ಪತ್ತೆಯಾಗಿದ್ದ ಜೆಎನ್.1 ತಳಿಯ ಕೊರೊನಾ ವೈರಾಣು ಈ ಹೆಚ್ಚಳಕ್ಕೆ ಕಾರಣ ಎಂದು ಗುರುತಿಸಲಾಗಿದೆ. ಇದು ಒಮಿಕ್ರಾನ್ ತಳಿಯ ರೂಪಾಂತರಿ, ಇದು ಬಹಳ ಬೇಗ ಹರಡುತ್ತದೆ ಯಾದರೂ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಇದು ಉಂಟುಮಾಡುವುದಿಲ್ಲ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್ ಉಪತಳಿಗಳ ಮೂಲ ಇರುವುದು ಜೆಎನ್.1 ತಳಿಯಲ್ಲಿ. ಕೋವಿಡ್ ಪ್ರಕರಣಗಳಲ್ಲಿನ ಹೆಚ್ಚಳಕ್ಕೆ ಹಲವು ಕಾರಣಗಳು ಇದ್ದಿರಬಹುದು. ಲಸಿಕೆಯ ಕಾರಣದಿಂದಾಗಿ ಸಿಕ್ಕಿದ್ದ ರೋಗನಿರೋಧಕ ಶಕ್ತಿ ಹಾಗೂ ರೋಗ ಬಂದಿದ್ದರಿಂದಾಗಿ ಸಮುದಾಯದಲ್ಲಿ ಮೂಡಿದ್ದ ರೋಗನಿರೋಧಕ ಶಕ್ತಿಯು ಕೆಲವರಲ್ಲಿ ಈಗ ಕುಗ್ಗಿರಬಹುದು. ಬೂಸ್ಟರ್ ಲಸಿಕೆಯನ್ನು ಹಾಕಿಸಿ
ಕೊಳ್ಳದೇ ಇರುವುದು ಕೂಡ ಇದಕ್ಕೆ ಒಂದು ಕಾರಣ ಆಗಿರಬಹುದು. ಕೊರೊನಾ ವೈರಾಣು ರೂಪಾಂತರ ಹೊಂದಿ, ಹೊಸ ತಳಿಗಳನ್ನು, ಉಪತಳಿಗಳನ್ನು ಸೃಷ್ಟಿಸಿ ರಬಹುದು, ಇವುಗಳಿಗೆ ಲಸಿಕೆಯು ಹೆಚ್ಚು ಪರಿಣಾಮ ಕಾರಿಯಾಗಿ ಕೆಲಸ ಮಾಡದೇ ಇರಬಹುದು.

ಕೆಲವು ದೇಶಗಳಲ್ಲಿ ವಾರ್ಷಿಕ ಕೋವಿಡ್ ಬೂಸ್ಟರ್ ಲಸಿಕೆ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ, ಕೋವಿಡ್ನಿಂದಾಗಿ ಹೆಚ್ಚಿನ ಅಪಾಯ ಎದುರಿಸುವ ಸಾಧ್ಯತೆ ಇರುವವರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತದಲ್ಲಿಯೂ ಈ ಬಗ್ಗೆ ಆಲೋಚಿಸಬಹುದು. ವೈರಾಣುವಿನ ಬಗ್ಗೆ, ಸಮುದಾಯದಲ್ಲಿ ಅದು ಹರಡುವ ಬಗೆಯ ಕುರಿತು, ಲಸಿಕೆಗಳು ಅದೆಷ್ಟು ಪರಿಣಾಮಕಾರಿ ಎಂಬ ಕುರಿತು ನಿರಂತರವಾಗಿ ಸಂಶೋಧನೆ ನಡೆಯಬೇಕು. ಲಸಿಕೆಗಳನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸಬೇಕು. ಹಿರಿಯ ನಾಗರಿಕರು, ಕೋವಿಡ್ಗೆ ಸುಲಭವಾಗಿ ತುತ್ತಾಗುವವರನ್ನು ಗಮನದಲ್ಲಿ ಇರಿಸಿಕೊಂಡು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆದುಕೊಳ್ಳುವುದು ಕೋವಿಡ್ನಿಂದ ರಕ್ಷಣೆಗೆ ಇರುವ ಮಾರ್ಗೋಪಾಯಗಳ ಪೈಕಿ ಕೆಲವು. ಇಂತಹ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಆಗಬೇಕು. ಕೋವಿಡ್ ಈಗ ನಿರ್ದಿಷ್ಟ ಪ್ರದೇಶಗಳಲ್ಲಿ ಶಾಶ್ವತವಾಗಿ ಕಂಡುಬರುವ ಒಂದು ಆರೋಗ್ಯ ಸಮಸ್ಯೆಯಾಗಿ ಪರಿವರ್ತನೆ ಕಂಡಿದೆ. ಅದು ಈಗ ಮೊದಲಿನಷ್ಟು ಅಪಾಯಕಾರಿ ಆಗಿಲ್ಲದಿರಬಹುದು. ಆದರೆ ವೈರಾಣು ರೂಪಾಂತರ ಹೊಂದಿ ಅಪಾಯಕಾರಿ ಕೂಡ ಆಗಬಲ್ಲದು. ಸರ್ಕಾರಗಳು, ವೈದ್ಯಕೀಯ ವ್ಯವಸ್ಥೆ ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಇಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ನೇತೃತ್ವದಲ್ಲಿ ವಿವಿಧ ದೇಶಗಳು ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದರಿಂದಾಗಿ ಇಂತಹ ಸಮಸ್ಯೆಗಳನ್ನು ಎದುರಿಸಲು ಜಗತ್ತು ಈಗ ಹೆಚ್ಚು ಪರಿಣಾಮಕಾರಿಯಾಗಿ ಸಜ್ಜಾಗಿದೆ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.