ಲಂಡನ್: ಇಂಗ್ಲೆಂಡ್ ಹಾಗೂ ಭಾರತ ನಡುವಣ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯವು ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಇಂದು ಆರಂಭವಾಗಲಿದೆ.

ರೋಹಿತ್ ಶರ್ಮಾ ವಿದಾಯದ ಬಳಿಕ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿರುವ ಶುಭಮನ್ ಗಿಲ್, ಅನುಭವಿಗಳ ಅನುಪಸ್ಥಿತಿಯಲ್ಲಿ ಆಡುತ್ತಿರುವ ಮೊದಲ ಟೂರ್ನಿಯಲ್ಲೇ ಉತ್ತಮ ನಿರ್ವಹಣೆ ತೋರಿದ್ದಾರೆ. ಬ್ಯಾಟಿಂಗ್ನಲ್ಲೂ ಪರಾಕ್ರಮ ಮೆರೆದಿರುವ ಅವರು, ಕ್ರಿಕೆಟ್ನ 'ದಂತಕಥೆ' ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರ ಹೆಸರಲ್ಲಿರುವ ಅಪರೂಪದ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದ್ದಾರೆ.

ಪ್ರಸ್ತುತ ಟೂರ್ನಿಯಲ್ಲಿ 4 ಪಂದ್ಯಗಳ 8 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಗಿಲ್, ನಾಲ್ಕು ಶತಕ ಸಹಿತ 722 ರನ್ ಗಳಿಸಿದ್ದಾರೆ. ಇದರೊಂದಿಗೆ, ನಾಯಕತ್ವದ ಮೊದಲ ಸರಣಿಯಲ್ಲೇ 4 ಶತಕ ಗಳಿಸಿದ ಮೊದಲಿಗ ಎನಿಸಿಕೊಂಡಿರುವ ಅವರು, ಈ ವಿಚಾರದಲ್ಲಿ ಆಸ್ಟ್ರೇಲಿಯಾದ ವಾರ್ವಿಕ್ ಆರ್ಮ್ಸ್ಟ್ರಾಂಗ್, ಡಾನ್ ಬ್ರಾಡ್ಮನ್, ಗ್ರೇಗ್ ಚಾಪೆಲ್, ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರ ದಾಖಲೆಗಳನ್ನು ಮುರಿದಿದ್ದಾರೆ. ಇವರೆಲ್ಲ, ತಲಾ ಮೂರು ಶತಕಗಳನ್ನು ಬಾರಿಸಿದ್ದೇ ಈವರೆಗೆ ದಾಖಲೆಯಾಗಿತ್ತು.
.ಟೀಕಾಕಾರರ ಬಾಯಿ ಮುಚ್ಚಿಸಿದ ಯುವರಾಜ: ನಾಯಕತ್ವ ಹೊಣೆ ಸಮರ್ಥವಾಗಿ ನಿಭಾಯಿಸಿದ ಗಿಲ್.IND vs ENG | ಕೊನೆ ಟೆಸ್ಟ್ ಇಂದಿನಿಂದ: ಸರಣಿ ಸಮಬಲದತ್ತ ಗಿಲ್ ಪಡೆ ಚಿತ್ತ.
ಜೊತೆಗೆ, ಟೀಂ ಇಂಡಿಯಾ ಪರ ಒಂದೇ ಸರಣಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಗವಾಸ್ಕರ್ ಮತ್ತು ಕೊಹ್ಲಿ ಅವರ ದಾಖಲೆಯನ್ನೂ ಗಿಲ್ ಸರಿಗಟ್ಟಿದ್ದಾರೆ. ಗವಾಸ್ಕರ್ ಅವರು ವೆಸ್ಟ್ ಇಂಡೀಸ್ ವಿರುದ್ಧ 1971 ಹಾಗೂ 1978–79ರಲ್ಲಿ, ಕೊಹ್ಲಿ 2014–15 ಆಸ್ಟ್ರೇಲಿಯಾ ವಿರುದ್ಧ ತಲಾ 4 ಶತಕ ಬಾರಿಸಿದ್ದರು.

ದಾಖಲೆ ಹೊಸ್ತಿಲಲ್ಲಿ...
ನಾಯಕನಾಗಿ ತಂಡ ಮುನ್ನಡೆಸಿದ ಮೊದಲ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯ ಸದ್ಯ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿದೆ. ಅವರು, 1936–37ರಲ್ಲಿ ಇಂಗ್ಲೆಂಡ್ ವಿರುದ್ಧದ 'ಆ್ಯಷಸ್' ಟೂರ್ನಿಯಲ್ಲಿ 810 ರನ್ ಗಳಿಸಿದ್ದರು. ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲು ಗಿಲ್ಗೆ ಇನ್ನು 82 ರನ್ ಬೇಕಿದೆಯಷ್ಟೇ.

ಸರಣಿ ಡ್ರಾ ಮೇಲೆ ಭಾರತ ಕಣ್ಣು
ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ ಈಗಾಗಲೇ 2–1 ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಗೆದ್ದಿದ್ದ ಆಂಗ್ಲರು, ಎರಡನೇ ಟೆಸ್ಟ್ನಲ್ಲಿ ಮುಗ್ಗರಿಸಿದ್ದರು. ಮೂರನೇ ಟೆಸ್ಟ್ನಲ್ಲಿ ಮತ್ತೆ ಇಂಗ್ಲೆಂಡ್ಗೆ ಜಯ ಒಲಿದಿತ್ತು. ನಾಲ್ಕನೇ ಟೆಸ್ಟ್ ರೋಚಕ ಡ್ರಾ ಆಗಿದೆ.

ಹೀಗಾಗಿ, ಸರಣಿ ಜಯಿಸಲು ಈ ಪಂದ್ಯವನ್ನು ಗೆಲ್ಲುವ ಅಥವಾ ಡ್ರಾ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ ಇಂಗ್ಲೆಂಡ್. ಆದರೆ, ಭಾರತ ಈ ಪಂದ್ಯವನ್ನು ಗೆದ್ದೇ ಗೆಲ್ಲುವ ಛಲದಲ್ಲಿದೆ. ಗಿಲ್ ಪಡೆ ಇಲ್ಲಿ ಜಯಿಸಿದರೆ, ಸರಣಿ 2–2 ಅಂತರದಲ್ಲಿ ಡ್ರಾ ಆಗಲಿದೆ.

ಈ ಕ್ರೀಡಾಂಗಣದಲ್ಲಿ ಇದುವರೆಗೆ 15 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಭಾರತ, 1971 ಹಾಗೂ 2021ರಲ್ಲಿ ಮಾತ್ರವೇ ಜಯದ ನಗೆ ಬೀರಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 2ನೇ ಆವೃತ್ತಿಯ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು (2023ರಲ್ಲಿ) ಸೋತದ್ದೂ ಇದೇ ಕ್ರೀಡಾಂಗಣದಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.