ಹಾಂಗ್‌ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಬಾಂಗ್ಲಾದೇಶದ ವಿರುದ್ಧದ ಸೆಮಿಫೈನಲ್ ಕ್ರಿಕೆಟ್ ಪಂದ್ಯದಲ್ಲಿ 8 ವಿಕೆಟ್‌ಗಳ ಗೆಲುವು ದಾಖಲಿಸಿದ ಭಾರತದ ಮಹಿಳಾ ತಂಡ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 17.5 ಓವರ್‌ಗಳಲ್ಲಿ 51 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಮಾರಕ ಬೌಲಿಂಗ್ ದಾಳಿ ಎದುರು ಬಾಂಗ್ಲಾ ಬ್ಯಾಟರ್‌ಗಳು ರನ್ ಗಳಿಸಿ ಪರದಾಡಿದರು. 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಉರುಳಿಸಿದ ಬಲಗೈ ವೇಗಿ ಪೂಜಾ ವಸ್ತ್ರಾಕರ್ ಬಾಂಗ್ಲಾಗೆ ದುಃಸ್ವಪ್ನವಾದರು.
ಬಲಗೈ ವೇಗಿ ಪೂಜಾ ವಸ್ತ್ರಾಕರ್ ಬಾಂಗ್ಲಾದೇಶವನ್ನು 51 ರನ್‌ಗೆ ನಿರ್ಬಂಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಜೆಮಿಮಾ ರಾಡ್ರಿಗಸ್ (20*) ಮತ್ತು ಶಫಾಲಿ ವರ್ಮಾ(17) ಅವರ ಜವಾಬ್ದಾರಿಯುತ ಆಟ ನೆರವಾಯಿತು.
8.2 ಓವರ್‌ಗಳಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.