ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಪ್ರತಿ ಮುಂಗಾರಿನಲ್ಲಿ ತಲೆದೋರುವ ರಸಗೊಬ್ಬರದ ಕೊರತೆ ಈ ಬಾರಿಯೂ ಮರುಕಳಿಸಿದೆ; ರೈತರನ್ನು ಕಂಗೆಡಿಸಿದೆ. ಕೆಲವೆಡೆ, ಬಿತ್ತನೆಬೀಜದ ಕೊರತೆಯೂ ಕಾಣಿಸಿಕೊಂಡಿದೆ. ಬಾಗಲಕೋಟೆ, ಕೊಪ್ಪಳ, ದಾವಣಗೆರೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ರಸಗೊಬ್ಬರದ ಕೊರತೆಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯದ ಕಾರಣದಿಂದಾಗಿ ಕೆಲವೆಡೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ರೈತರೊಬ್ಬರು ರಸಗೊಬ್ಬರ ಸಿಗದ ಕಾರಣಕ್ಕೆ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಪರವಾಗಿ ಬಿಜೆಪಿ ನಾಯಕರೂ ದನಿಯೆತ್ತಿದ್ದು, ರಸಗೊಬ್ಬರದ ಸಮರ್ಪಕ ಹಂಚಿಕೆಯಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ರಾಜ್ಯದ ಕೃಷಿ ಇಲಾಖೆ ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದ ಕಾರಣದಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ ಹಾಗೂ ದಾಸ್ತಾನು ಇರುವ ಗೊಬ್ಬರವನ್ನು ಅವಶ್ಯಕತೆ ಆಧಾರದ ಮೇಲೆ ಹಂಚಿಕೆ ಮಾಡುತ್ತಿಲ್ಲ ಎನ್ನುವುದು ಬಿಜೆಪಿ ನಾಯಕರ ಆರೋಪ. ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಣ್ಣ ಮತ್ತು ಅತಿಸಣ್ಣ ರೈತರು ಸರತಿ ಸಾಲಲ್ಲಿ ನಿಂತಿರುವಾಗಲೇ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ನಡೆಯುತ್ತಿದೆ ಎಂದೂ ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ, ರಸಗೊಬ್ಬರದ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣವೆಂದು ರಾಜ್ಯ ಸರ್ಕಾರ ಹೇಳಿದೆ. ಏಪ್ರಿಲ್ನಿಂದ ಜುಲೈವರೆಗಿನ ಅವಧಿಯಲ್ಲಿ ರಾಜ್ಯಕ್ಕೆ 6.80 ಲಕ್ಷ ಟನ್ ಯೂರಿಯಾ ಅಗತ್ಯವಿದೆ; ಅದರಲ್ಲಿ 5.16 ಲಕ್ಷ ಟನ್ ಮಾತ್ರ ಕೇಂದ್ರ ಸರ್ಕಾರದಿಂದ ಪೂರೈಕೆಯಾಗಿದ್ದು, 1.65 ಲಕ್ಷ ಟನ್ ಯೂರಿಯಾ ಪೂರೈಕೆ ಬಾಕಿಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆಯ ರಾಜಕೀಯ ಕೈಬಿಟ್ಟು, ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರ ಕೊಡಿಸಬೇಕು ಎಂದೂ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ರಸಗೊಬ್ಬರದ ಕೊರತೆ ಈ ಮುಂಗಾರಿಗೆ ಸೀಮಿತವಾದ ಸಮಸ್ಯೆಯಲ್ಲ. ಬಿತ್ತನೆಬೀಜ ಮತ್ತು ಗೊಬ್ಬರ ಸಮಯಕ್ಕೆ ಸರಿಯಾಗಿ, ಅಗತ್ಯ ಪ್ರಮಾಣದಲ್ಲಿ ದೊರೆಯದೆ ರೈತರು ಸಮಸ್ಯೆಗೆ ಸಿಲುಕುವುದು ಪ್ರತಿ ಮುಂಗಾರಿನ ವಾರ್ಷಿಕ ವಿದ್ಯಮಾನ ಎನ್ನುವಂತಾಗಿದೆ. ಬೀಜ ಮತ್ತು ಗೊಬ್ಬರ ದೊರೆಯದೆ ಆಕ್ರೋಶಗೊಂಡಿದ್ದ ರೈತರ ಮೇಲೆ 2008ರಲ್ಲಿ ಗೋಲಿಬಾರ್ ನಡೆದು, ಇಬ್ಬರು ರೈತರು ಮೃತಪಟ್ಟ ಘಟನೆ ಹಾವೇರಿಯಲ್ಲಿ ನಡೆದಿತ್ತು. ಆ ರೈತರ ಸಾವಿನಿಂದ ಆಡಳಿತ ಯಂತ್ರ ಪಾಠ ಕಲಿತಂತಿಲ್ಲ. ತಪ್ಪುಗಳನ್ನು ಸರಿಪಡಿಸಿಕೊಂಡು, ಸಮಯಕ್ಕೆ ಸರಿಯಾಗಿ ರೈತರಿಗೆ ಗೊಬ್ಬರ ಒದಗಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿಲ್ಲ. ರೈತರಿಗೆ ರಸಗೊಬ್ಬರ ಒದಗಿಸುವಲ್ಲಿ ಯಾವ ಪಕ್ಷವೂ ಪ್ರಾಮಾಣಿಕತೆಯಿಂದ ವರ್ತಿಸಿಲ್ಲ. ಈಗಲೂ ಆಡಳಿತ ಮತ್ತು ಪ್ರತಿಪಕ್ಷಗಳು ಆರೋಪ ಪ್ರತ್ಯಾರೋಪಗಳ ಶಕ್ತಿ ಪ್ರದರ್ಶನದಲ್ಲಿ ತೊಡಗಿವೆ. ಸಂಕಷ್ಟದ ಸಮಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು, ರೈತರಿಗೆ ರಸಗೊಬ್ಬರ ದೊರಕಿಸಿಕೊಡುವುದು ಆದ್ಯತೆಯ ಕೆಲಸ ಎನ್ನುವುದನ್ನು ಮರೆತಿವೆ.

ಯೂರಿಯಾ ಬಿಕ್ಕಟ್ಟಿಗೆ, ಭ್ರಷ್ಟಾಚಾರ ಹಾಗೂ ರಸಗೊಬ್ಬರ ತಯಾರಿಕಾ ಕಂಪನಿಗಳ ದುರಾಸೆಯೂ ಕಾರಣ ಎಂದು ಹೇಳಲಾಗುತ್ತಿದೆ. ಯೂರಿಯಾ ಜೊತೆಗೆ ಇತರ ಉಪ ಉತ್ಪನ್ನಗಳನ್ನು ಖರೀದಿಸುವಂತೆ ಮಾರಾಟಗಾರರು ರೈತರನ್ನು ಒತ್ತಾಯಿಸುತ್ತಿದ್ದು, ಯೂರಿಯಾ ಒಂದೇ ಬೇಕಾದರೆ ದುಪ್ಪಟ್ಟು ದರ ಕೇಳುತ್ತಿದ್ದಾರೆ ಎನ್ನುವ ವರದಿಗಳಿವೆ. ಯೂರಿಯಾ ಜೊತೆಗೆ ನ್ಯಾನೊ ಯೂರಿಯಾ ಹಾಗೂ ನ್ಯಾನೊ ಡಿಎಪಿ ಖರೀದಿಯನ್ನು ಕೆಲವು ಕಂಪನಿಗಳು ಕಡ್ಡಾಯಪಡಿಸುತ್ತಿವೆ. ಕೃತಕ ಅಭಾವವನ್ನು ಸೃಷ್ಟಿಸಿ, ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಯೂರಿಯಾ ಮಾರಲಾಗುತ್ತಿದೆ ಎನ್ನುವ ದೂರುಗಳೂ ಇವೆ. ರಸಗೊಬ್ಬರದ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ವ್ಯಾಪಾರದ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ರಸಗೊಬ್ಬರ ಕೊರತೆಯ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ಹಸಿರೆಲೆ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವ ಸಾಧ್ಯತೆಗಳ ಕುರಿತು ಸರ್ಕಾರ, ಕೃಷಿ ಇಲಾಖೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಸದ್ಯದ ಸಂದರ್ಭದಲ್ಲಿ ರಸಗೊಬ್ಬರಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸಾಧ್ಯವಿಲ್ಲವಾದರೂ, ಪರ್ಯಾಯಗಳನ್ನು ಕಂಡುಕೊಳ್ಳದೆ ಹೋದರೆ ಮಣ್ಣಿನ ಫಲವತ್ತತೆ ಸಂಪೂರ್ಣ ನಶಿಸುವ ದಿನಗಳು ದೂರವಿಲ್ಲ. ಆ ದುರಂತಕ್ಕೆ ಅವಕಾಶ ಕಲ್ಪಿಸದೆ, ಪ್ರಾಕೃತಿಕವಾಗಿ ಮಣ್ಣನ್ನು ಫಲವತ್ತಾಗಿಸುವ ಸಾಧ್ಯತೆಗಳ ಬಗ್ಗೆ ರೈತ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ ಹಾಗೂ ರಸಗೊಬ್ಬರಗಳ ಕನಿಷ್ಠ ಬಳಕೆಯ ಪ್ರಯತ್ನಗಳನ್ನು ಸರ್ಕಾರ ಉತ್ತೇಜಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.