ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕವು ಶೇಕಡ 25ರಷ್ಟು ಸುಂಕ ಹೇರಿದೆ. ಅಮೆರಿಕದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಭಾರತವು ಈ ಹಂತದಲ್ಲಿ ಹಿನ್ನಡೆ ಅನುಭವಿಸಿದಂತಿದೆ. ಹೀಗಾಗಿ, ಭಾರತವು ಸುಂಕದ ಪ್ರಹಾರವನ್ನು ಎದುರಿಸಬೇಕಾಗಿದೆ. ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆಗಳು ಆಗದೆ ಇದ್ದರೆ, ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕವು ಶೇಕಡ 25ರಷ್ಟು ಸುಂಕವನ್ನು ವಿಧಿಸಲಿದೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗದು. ಸುಂಕ ಮಾತ್ರವೇ ಅಲ್ಲದೆ, ರಷ್ಯಾದಿಂದ ಶಸ್ತ್ರಾಸ್ತ್ರ ಹಾಗೂ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಮೇಲೆ ದಂಡವನ್ನು ವಿಧಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ. ಸುಂಕ ಹಾಗೂ ದಂಡದ ಪರಿಣಾಮವಾಗಿ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ವಹಿವಾಟು ಕಠಿಣ ಸವಾಲಾಗಿ ಪರಿಣಮಿಸಲಿದೆ.

ವಿಶ್ವದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಅವರು ಬಳಸಿರುವ ಭಾಷೆಯು ಭಾರತವನ್ನು ಬೆದರಿಸುವಂತೆ ಹಾಗೂ ಅವಮಾನಿಸುವಂತೆ ಇತ್ತು. ಭಾರತ ಮಾಡುವ ಎಲ್ಲ ಕೆಲಸಗಳೂ ಪ್ರಯೋಜನಕಾರಿ ಅಲ್ಲ ಎಂದು ಹೇಳಿ, ಈ ಕಾರಣಕ್ಕಾಗಿ ಭಾರತದ ಮೇಲೆ ದಂಡ ಹೇರುವುದು ಸೂಕ್ತವಾಗುತ್ತದೆ ಎಂದು ಟ್ರಂಪ್ ಅವರು ಹೇಳುವುದು ತಮ್ಮನ್ನು ಮೆಚ್ಚಿಸಲು ವಿಶೇಷ ಪ್ರಯತ್ನಗಳನ್ನು ನಡೆಸಿರುವ ಸರ್ಕಾರವೊಂದನ್ನು ಅಣಕಿಸುವುದಕ್ಕೆ ಸಮ. ಟ್ರಂಪ್ ಅವರನ್ನು ಖುಷಿಪಡಿಸಲು ಭಾರತದ ಕಡೆಯಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಯತ್ನಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷಗಳ ಹಿಂದೆ ಗುಜರಾತ್ನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಟ್ರಂಪ್ ಅವರ ಬಗ್ಗೆ ಬಹಳ ಆದರ ತೋರಿಸಿದ್ದರು. ಅಲ್ಲದೆ, ಈ ವರ್ಷದ ಫೆಬ್ರುವರಿಯಲ್ಲಿ ಮೋದಿ ಅವರು ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷವಾಕ್ಯದ ಜೊತೆಗೆ, ‘ಮೇಕ್ ಇಂಡಿಯಾ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯವನ್ನು ಜೋಡಿಸಿ, ಇವೆರಡೂ ಒಟ್ಟಾದರೆ ‘ಮೆಗಾ’ ಪಾಲುದಾರಿಕೆ ಸಾಧ್ಯವಾಗುತ್ತದೆ ಎಂದು ಹೇಳಿದ್ದರು. ಮಧ್ಯಂತರ ವ್ಯಾಪಾರ ಒಪ್ಪಂದವು ಸಾಧ್ಯವಾಗದೆ ಇರುವುದು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಆಗಿರುವ ಸೋಲು ಎನ್ನಬಹುದು. ಅಲ್ಲದೆ, ಮಾತುಕತೆಯ ಹೊತ್ತಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಭಾರತದ ಬಳಿ ಹೆಚ್ಚಿನ ಆಯ್ಕೆಗಳು ಇರುವಂತೆ ಕಾಣುತ್ತಿಲ್ಲ. ಟ್ರಂಪ್ ಅವರು ಭಾರತದ ಬಗ್ಗೆ ಬಳಸಬಾರದ ಭಾಷೆಯನ್ನು ಬಳಸಿದ್ದಾರೆ ಹಾಗೂ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಲು ಯತ್ನಿಸಿದ್ದಾರೆ. ಕೇಂದ್ರ ವಾಣಿಜ್ಯ ಸಚಿವಾಲಯವು ವ್ಯಾಪಾರ ಒಪ್ಪಂದ ಸಾಧ್ಯವಾಗಿಸಲು ತನ್ನಿಂದ ಆದ ಎಲ್ಲ ಯತ್ನಗಳನ್ನೂ ನಡೆಸಿದೆ ಎಂಬುದು ನಿಜ. ಆದರೆ, ಇಲ್ಲಿ ವಿದೇಶಾಂಗ ಸಚಿವಾಲಯದ ಪಾತ್ರದ ಕುರಿತು ಹಾಗೂ ಒಪ್ಪಂದದ ವಿಚಾರವಾಗಿ ನಡೆಸಿದ ಪೂರ್ವಭಾವಿ ಪ್ರಯತ್ನಗಳ ಬಗ್ಗೆ ಅವಲೋಕನ ನಡೆಯಬೇಕಿದೆ.

ಇದು ಆರೋಪಗಳನ್ನು ಮಾಡುತ್ತಾ ಕೂರಬೇಕಾದ ಸಂದರ್ಭ ಅಲ್ಲ. ಟ್ರಂಪ್ ಅವರು ಮುಂದಿರಿಸಿದ ಕೆಲವು ಕಠಿಣ ಬೇಡಿಕೆಗಳನ್ನು ಈಡೇರಿಸದೆ ಇದ್ದ ಕಾರಣಕ್ಕೆ ಹಾಗೂ ಹೈನು ಉತ್ಪನ್ನಗಳು ಮತ್ತು ಕೃಷಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತವಾಗಿಸಲು ಒಪ್ಪದೆ ಇದ್ದ ಕಾರಣಕ್ಕೆ ಒಪ್ಪಂದ ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಈ ವಿಚಾರಗಳಲ್ಲಿ ಭಾರತವು ಹೊಂದಾಣಿಕೆಗೆ ಒಪ್ಪಿಗೆ ಸೂಚಿಸಿದ್ದರೆ ಒಪ್ಪಂದ ಸಾಧ್ಯವಾಗುತ್ತಿತ್ತು ಎನ್ನುವುದಾದರೆ, ಒಪ್ಪಂದ ಮುರಿದುಬೀಳುವಂತೆ ಮಾಡುವುದನ್ನು ಹೊರತುಪಡಿಸಿ ಭಾರತದ ಎದುರು ಬೇರೆ ಆಯ್ಕೆಗಳೇ ಇರಲಿಲ್ಲ ಎಂದು ಹೇಳಬಹುದು. ಭಾರತವು ಈಗ ಎದುರಾಗಿರುವ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ ಹಾಗೂ ಕಠಿಣ ಸವಾಲನ್ನು ಜಾಣ್ಮೆಯಿಂದ ನಿಭಾಯಿಸಬೇಕಿದೆ. ಗಂಭೀರ ಸ್ವರೂಪದ ಪರಿಣಾಮಗಳನ್ನು ಉಂಟುಮಾಡುವ ಯಾವುದೇ ಕೆಲಸವನ್ನು ಭಾರತ ಮಾಡುವುದಿಲ್ಲ ಎಂಬ ಸಂದೇಶ ರವಾನೆ ಆಗಬೇಕಿದೆ. ಮತ್ತೆ ಮತ್ತೆ ವಿದೇಶಗಳಿಗೆ ಭೇಟಿ ನೀಡುವುದು ಹಾಗೂ ಕ್ಯಾಮೆರಾ ಮುಂದೆ ನಿಲ್ಲುವುದು ರಾಜತಾಂತ್ರಿಕ ಮಟ್ಟದಲ್ಲಿ ನಡೆಯುವ ಕಠಿಣ ಪರಿಶ್ರಮದ ಕೆಲಸಗಳಿಗೆ ಪರ್ಯಾಯ ಅಲ್ಲ ಎನ್ನುವ ಪಾಠವನ್ನೂ ನಾವು ಕಲಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.