ಇತರ ಎಲ್ಲ ಪಕ್ಷಗಳಿಗಿಂತ ವಿಭಿನ್ನ ಎಂದು ಬಿಂಬಿಸಿಕೊಳ್ಳುತ್ತ ಬಂದ ಬಿಜೆಪಿಗೆ ಒಂದು ಅವಕಾಶ ನೀಡಿದ್ದಕ್ಕಾಗಿ ರಾಜ್ಯದ ಜನತೆ ನಾಲ್ಕು ವರ್ಷಗಳಿಂದ ಪರಿತಪಿಸುವಂತಾಗಿದೆ.

ಮೂರು ದಶಕಗಳಿಂದ ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಮೊದಲ ಮೂರು ವರ್ಷಗಳಲ್ಲಿ ರಾಜ್ಯದ ಜನತೆ ಕಂಡದ್ದೆಲ್ಲ ಸ್ವಜನ ಪಕ್ಷಪಾತ ಮತ್ತು ಅಧಿಕಾರ ದುರುಪಯೋಗದ ತರಾವರಿ ಆರೋಪಗಳ ಹಗರಣಗಳು.

ಸಾರ್ವಜನಿಕ ಜೀವನದಲ್ಲಿ ನೈತಿಕತೆಯನ್ನು ಹೇಳಿಕೊಳ್ಳುತ್ತಿರುವ ಆರೆಸ್ಸೆಸ್ ಮೇಲುಸ್ತುವಾರಿಯಲ್ಲಿ ಸರ್ಕಾರದಲ್ಲಿರುವವರು ಭ್ರಷ್ಟಾಚಾರರಹಿತವಾದ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆ ಆರಂಭದ ದಿನದಿಂದಲೇ ಹುಸಿಯಾಗತೊಡಗಿತು.

ಪಕ್ಷಕ್ಕೆ ಸ್ವಂತ ಬಹುಮತ ತಂದುಕೊಳ್ಳಲು ಆರಂಭಿಸಿದ `ಆಪರೇಷನ್ ಕಮಲ~ ಎಂಬ ಪಕ್ಷಾಂತರ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಿದ ಅನೈತಿಕ ರಾಜಕೀಯ ತಂತ್ರವನ್ನು ಆರೆಸ್ಸೆಸ್ ಕೂಡ ಆಕ್ಷೇಪಿಸಲಿಲ್ಲ.

ಬಳ್ಳಾರಿಯ ಗಣಿಧಣಿಗಳು ತಮಗೆ ಹೆಚ್ಚಿನ ರಾಜಕೀಯ ಅಧಿಕಾರ ಬೇಕೆನಿಸಿದಾಗಲೆಲ್ಲ ಅನುಸರಿಸುತ್ತಿದ್ದ, ರೆಸಾರ್ಟ್ಗಳಲ್ಲಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಒತ್ತಡ ತಂತ್ರ ರಾಜ್ಯದ ಜನತೆ ಕಂಡ ಅಸಹ್ಯಕರ ಶಕ್ತಿ ಪ್ರದರ್ಶನಗಳಾಗಿದ್ದವು.

ಭ್ರಷ್ಟಾಚಾರದ ಹಗರಣಗಳು, ಮಾತ್ರವಲ್ಲದೆ, ಅತ್ಯಾಚಾರದ ಆರೋಪ ಹೊತ್ತು ಸಚಿವರು ಜೈಲು ಸೇರುವಂತಾದದ್ದು ಬಿಜೆಪಿ `ಇತರ ಪಕ್ಷಗಳಿಗಿಂತ ಭಿನ್ನತೆ~ಯನ್ನು ಪ್ರದರ್ಶಿಸಿದ ಸಂಗತಿಗಳಾಗಿದ್ದವು.

ಆಡಳಿತದ ಚುಕ್ಕಾಣಿಯನ್ನು ಹಿಡಿದು ಲೋಕಸಭೆಯ ಒಂದು ಅವಧಿಗೆ ದೇಶವನ್ನು ಮುನ್ನಡೆಸಿದ್ದ ಭಾರತೀಯ ಜನತಾ ಪಕ್ಷ, ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಗರಣಗಳ ವಿರುದ್ಧ ಹರಿಹಾಯುತ್ತಿದ್ದರೆ, ಅದೇ ಪಕ್ಷದ ಸಚಿವರು, ಮಾತ್ರವಲ್ಲದೆ ಮುಖ್ಯಮಂತ್ರಿ ಕೂಡ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರುವಂತಾಗಿದ್ದುದನ್ನು ರಾಜ್ಯದ ಜನತೆ ನೋಡಬೇಕಾಯಿತು.

ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸಿ ಆಡಳಿತ ನಡೆಸಲು ರಾಜ್ಯದ ಜನತೆ ನೀಡಿದ ಅವಕಾಶವನ್ನು ಬಿಜೆಪಿ ಕೇಂದ್ರ ನಾಯಕತ್ವ ಅಸಡ್ಡೆಯಿಂದಲೇ ಕಂಡಿರುವುದು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿದೆ.

ಪಕ್ಷಕ್ಕೆ ಸಿಗುತ್ತಿದ್ದ ಕಪ್ಪದ ಮುಲಾಜಿಗಾಗಿ ಬಳ್ಳಾರಿಯ ಗಣಿಧಣಿಗಳು ರಾಜ್ಯದಲ್ಲಿ ನಾಯಕತ್ವದ ವಿರುದ್ಧ ಆರಂಭಿಸಿದ್ದ ರೆಸಾರ್ಟ್ ರಾಜಕೀಯ ತಂತ್ರವನ್ನು ಮೌನವಾಗಿ ಸಮ್ಮತಿಸಿದ್ದ ಕೇಂದ್ರ ನಾಯಕರು ರಾಜಕೀಯ ಪಕ್ಷವಾಗಿ ಶಿಸ್ತಿಗೆ ಬದ್ಧವಾಗಿರುವುದನ್ನು ಯಾವತ್ತೂ ಪಾಲಿಸಲಿಲ್ಲ. ಆರೋಪ ಹೊತ್ತು ಮುಜುಗರ ಸೃಷ್ಟಿಸಿದ ಸಂದರ್ಭದಲ್ಲೂ ಪಕ್ಷದಿಂದ ಅಮಾನತುಗೊಳಿಸುವ ನೈತಿಕ ಬಲ ತಮಗಿದೆ ಎಂದು ಬಿಂಬಿಸಲಿಲ್ಲ.

ಎಲ್ಲ ಬಗೆಯ ದುರಾಡಳಿತದ ಪ್ರಯೋಗಕ್ಕೂ ಕರ್ನಾಟಕವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡ ಬಿಜೆಪಿ ಕೇಂದ್ರ ನಾಯಕತ್ವ, ಇದೀಗ ರೆಸಾರ್ಟ್ ರಾಜಕೀಯದ ಒತ್ತಡ ತಂತ್ರದ ಎದುರು ಅಸಹಾಯಕವಾಗಿದೆ. ರಾಜ್ಯದ ಜನತೆ ಬರಗಾಲದ ತೀವ್ರತೆಯಿಂದ ಬಸವಳಿದಿದ್ದಾರೆ.

ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಮಾರ್ಗಗಳನ್ನು ರೂಪಿಸಬೇಕಿರುವ ವಿಧಾನಮಂಡಲ ಅಧಿವೇಶನಕ್ಕೂ ಗ್ರಹಣ ಹಿಡಿಸುವಂತೆ ಆಡಳಿತ ಪಕ್ಷದಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಆರಂಭವಾಗಿದೆ.

ರಾಜ್ಯದ ಜನತೆಯ ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದಲಾದರೂ ಕೇಂದ್ರ ಬಿಜೆಪಿ ರಾಜ್ಯದಲ್ಲಿ ನಾಯಕತ್ವದ ಗೊಂದಲವನ್ನು ನಿವಾರಿಸಿ ತನ್ನ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.