ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಹಸ್ತಕ್ಷೇಪ, ಪ್ರಭಾವ ಮತ್ತು ವಶೀಲಿಬಾಜಿಯಿಂದ ಮುಕ್ತಗೊಳಿಸುವ ಉದ್ದೇಶ `ಪಕ್ಷಾತೀತವಾಗಿ' ನಮ್ಮ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಇಲ್ಲ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ. ರಾಜ್ಯ ವಿಧಾನಮಂಡಲದ ಎರಡೂ ಸದನಗಳಲ್ಲಿ ಅಂಗೀಕಾರವಾದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ ಈ ಮಾತನ್ನು ಪುಷ್ಟೀಕರಿಸುತ್ತದೆ. ಮಸೂದೆ ರಾಜ್ಯಪಾಲರ ಒಪ್ಪಿಗೆ ಪಡೆದು ಕಾನೂನಾದರೆ ಕಾನ್ಸ್ಟೆಬಲ್ನಿಂದ ಹಿಡಿದು ಡಿಜಿಪಿ ದರ್ಜೆ ವರೆಗಿನ ಅಧಿಕಾರಿಗಳ ಬಡ್ತಿ ಮತ್ತು ವರ್ಗಾವಣೆಯ ಪರಮಾಧಿಕಾರ ಪುನಃ ರಾಜ್ಯ ಸರ್ಕಾರದ ಕೈಗೆ ಬರುತ್ತದೆ. ಅಂದರೆ ಕೆಳಹಂತದ ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಮತ್ತೆ ಮಂತ್ರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳ ಮರ್ಜಿ ಕಾಯುವ ಸ್ಥಿತಿ ಉದ್ಭವವಾಗಲಿದೆ. ಪೊಲೀಸ್ ವ್ಯವಸ್ಥೆ ವೃತ್ತಿಪರವಾಗಿರಬೇಕು, ರಾಜಕೀಯ ಒತ್ತಡಗಳಿಂದ ಪೂರ್ಣ ಮುಕ್ತವಾಗಿರಬೇಕು ಎಂಬ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ 2006ರಲ್ಲಿ ಪ್ರಕಾಶ್ಸಿಂಗ್ ಪ್ರಕರಣದಲ್ಲಿ `ಪೊಲೀಸ್ ಸಿಬ್ಬಂದಿ ಮಂಡಳಿ' ರಚಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.'ಡಿಜಿಪಿ ಅಧ್ಯಕ್ಷತೆಯ ಈ ಮಂಡಳಿಯಲ್ಲಿ ಇಲಾಖೆಯ ನಾಲ್ವರು ಹಿರಿಯ ಅಧಿಕಾರಿಗಳು ಇರಬೇಕು; ಡಿಎಸ್ಪಿಗಿಂತ ಕೆಳ ಹಂತದ ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ ವಿಷಯವನ್ನು ಇದು ತೀರ್ಮಾನಿಸಬೇಕು; ಹೆಚ್ಚುವರಿ ಎಸ್ಪಿಗಿಂತ ಮೇಲಿನ ಹುದ್ದೆಗಳ ವರ್ಗಾವಣೆ ಹಾಗೂ ಬಡ್ತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು; ಅತ್ಯಂತ ಅಪರೂಪದ ಪ್ರಕರಣದಲ್ಲಿ ಮಾತ್ರ ಸಮರ್ಥನೀಯ ಕಾರಣ ನೀಡಿ ಮಂಡಳಿಯ ಶಿಫಾರಸ್ಸನ್ನು ಸರ್ಕಾರ ಮಾರ್ಪಾಡು ಮಾಡಬಹುದು; ಉಳಿದಂತೆ ಮಂಡಳಿಯ ಸಲಹೆಗೇ ಮನ್ನಣೆ ಕೊಡಬೇಕು; ಡಿಜಿಪಿ ಕನಿಷ್ಠ 2 ವರ್ಷ ಅದೇ ಹುದ್ದೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು' ಎಂದು ಕೋರ್ಟ್ ಸೂಚಿಸಿತ್ತು.

ಇದೆಲ್ಲವೂ ಜನಪ್ರತಿನಿಧಿಗಳಿಗೆ ಅಪಥ್ಯದ ಸಂಗತಿ. ತಮ್ಮ ಮಾತು ಕೇಳುವ ಪೊಲೀಸ್ ಅಧಿಕಾರಿಯನ್ನು ತಮಗೆ ಬೇಕಾದ ಕಡೆ ಹಾಕಿಸಿಕೊಳ್ಳುವ, ವರ್ಗಾವಣೆ ದಂಧೆಯಲ್ಲಿ ಖುಷಿಪಡುವ ರಾಜಕಾರಣಿಗಳು ವರ್ಗಾವರ್ಗಿ ಅಧಿಕಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳ ಮಂಡಳಿಗೆ ಒಪ್ಪಿಸಲು ಸಿದ್ಧರಾಗುತ್ತಾರೆಯೇ? ಅದಕ್ಕಾಗೇ ಪೊಲೀಸ್ ಸಿಬ್ಬಂದಿ ಮಂಡಳಿಯ ಅಧಿಕಾರವನ್ನೆಲ್ಲ ಕಸಿದು ಹೆಸರಿಗಷ್ಟೇ ಅಸ್ತಿತ್ವದಲ್ಲಿ ಇಡುವ ಮಸೂದೆ ಅಂಗೀಕಾರವಾಗಿದೆ. ಇದರ ಪ್ರಕಾರ ಮಂಡಳಿಯ ಶಿಫಾರಸ್ಸಿಗೆ ಸರ್ಕಾರ ಬದ್ಧವಾಗಬೇಕಿಲ್ಲ. ಮಂಡಳಿಗೆ ನಾಲ್ವರು `ಹಿರಿಯ' ಎಡಿಜಿಪಿಗಳ ಬದಲು ತನಗೆ ಬೇಕಾದ ಎಡಿಜಿಪಿಗಳನ್ನು ನೇಮಕ ಮಾಡಬಹುದು. ದುರ್ನಡತೆ, ಕರ್ತವ್ಯಲೋಪದ ಕಾರಣ ಕೊಟ್ಟು ಯಾರನ್ನು ಯಾವಾಗ ಬೇಕಾದರೂ ವರ್ಗ ಮಾಡಬಹುದು. ಹೀಗಾದಾಗ ದಕ್ಷತೆ, ಕರ್ತವ್ಯ ನಿಷ್ಠೆಗೆ ಏಟು ಬೀಳುತ್ತದೆ. ರಾಜಕಾರಣಿಯ ಕೈಕಾಲು ಹಿಡಿದು ವರ್ಗವಾಗಿ ಬರುವ ಪೊಲೀಸ್ ಅಧಿಕಾರಿ ನ್ಯಾಯ ನಿಷ್ಠೆಯಿಂದ, ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುವಂತಿಲ್ಲ. ಅಲ್ಲದೆ ಕೋರ್ಟ್ನ ಆಶಯಕ್ಕೂ ಇದು ವಿರುದ್ಧ. ಇಂಥ ಸನ್ನಿವೇಶದಲ್ಲಿ, ಮಸೂದೆಗೆ ಸಹಿ ಹಾಕಬೇಕಾದ ರಾಜ್ಯಪಾಲರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿ. ಏಕೆಂದರೆ ಹಿಂದೆ ಅನೇಕ ಸಲ ಕೋರ್ಟ್, ಕಾನೂನಿಗೆ ವಿರುದ್ಧ ಎಂದು ಅನೇಕ ಮಸೂದೆಗಳನ್ನು ಅವರು ತಿರಸ್ಕರಿಸಿದ ಉದಾಹರಣೆ ನಮ್ಮ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.