ಕಾವೇರಿ, ಗಡಿ ಪ್ರಶ್ನೆ ನಿಷ್ಪಕ್ಷಪಾತ ತೀರ್ಮಾನ: ಪ್ರಧಾನಿ ಭರವಸೆ
ಬೆಂಗಳೂರು, ಮಾ. 14– ಗಡಿ ಹಾಗೂ ಕಾವೇರಿ ನೀರು ಸಮಸ್ಯೆಗಳೆರಡನ್ನೂ ಸಹಾನುಭೂತಿಯಿಂದ ಪರಿಶೀಲಿಸಿ ನಿಷ್ಪಕ್ಷಪಾತವಾದ ರೀತಿಯಲ್ಲಿ ತೀರ್ಮಾನಕ್ಕೆ ಬರುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಭರವಸೆ ನೀಡಿದರು.

ದೀರ್ಘಕಾಲದ ಈ ಸಮಸ್ಯೆಯನ್ನು ಶಾಂತಿ ವಾತಾವರಣದಲ್ಲಿ ಯಾರ ಹಿತಕ್ಕೂ ಧಕ್ಕೆ ಬಾರದ ರೀತಿಯಲ್ಲಿ ತೀರ್ಮಾನಿಸಬೇಕಾದುದು ಅಗತ್ಯವೆಂದರು. ವಿಮಾನ ನಿಲ್ದಾಣದಲ್ಲಿ ಆಡಳಿತ ಕಾಂಗ್ರೆಸ್ಸಿನ ಶಾಸಕರು ಹಾಗೂ ಅಡ್ ಹಾಕ್ ಸಮಿತಿಯ ಸದಸ್ಯರು ನೀಡಿದ ಸ್ವಾಗತ ಸಂದರ್ಭದಲ್ಲಿ ಪ್ರಧಾನಿ ಈ ಆಶ್ವಾಸನೆ ನೀಡಿದರು.

ಕಾವೇರಿ ಒಪ್ಪಂದ: 3 ವಾರಗಳಲ್ಲಿ ಮೈಸೂರು ನಿಲುವು ಸ್ಪಷ್ಟನೆ
ಬೆಂಗಳೂರು, ಮಾ. 14: ಕಾವೇರಿ ನೀರು ಬಳಕೆ ಸಂಬಂಧದಲ್ಲಿ 1924ರಲ್ಲಿ ಮೈಸೂರು ಮತ್ತು ಮದರಾಸ್ ಸರ್ಕಾರಗಳ ನಡುವೆ ಆದ ಒಪ್ಪಂದವನ್ನು ‘ದುರ್ದೈವದ ಒಪ್ಪಂದ’ ಎಂದು ಕರೆದ ಮುಖ್ಯಮಂತ್ರಿ ಶ್ರೀವೀರೇಂದ್ರ ಪಾಟೀಲರು ಈ ಒಪ್ಪಂದದ ಬಗ್ಗೆ ಮೈಸೂರು ಸರ್ಕಾರದ ನಿಲುವೇನೆಂಬುದನ್ನು ಇನ್ನು ಎರಡು–ಮೂರು ವಾರಗಳಲ್ಲಿ ಹೇಳುವುದಾಗಿ ಇಂದು ತಿಳಿಸಿದರು. ವಿವಾದದ ಬಗ್ಗೆ ಕೇಂದ್ರದ ಸಚಿವ ಡಾ.ಕೆ.ಎಲ್. ರಾವ್ ಅವರು ಪಾರ್ಲಿಮೆಂಟಿನಲ್ಲಿ ನೀಡಿದ ಹೇಳಿಕೆಯಿಂದ ಉದ್ಭವಿಸಿರುವ ಸ್ಥಿತಿ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ ನೀಡಿ ಈ ವಿಷಯನ್ನು ಸರ್ಕಾರವೂ, ತಜ್ಞರು ಪರಿಶೀಲಿಸುತ್ತಿದ್ದಾರೆಂದರು.

ಗುಜರಾತ್ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಬೆಂಬಲ: ರಾಮ್
ಅಹ್ಮದಾಬಾದ್, ಮಾ. 14–ಗುಜರಾತಿನಲ್ಲಿ ಸ್ವತಂತ್ರ ಪಕ್ಷ ಸರ್ಕಾರ ರಚಿಸಿದಲ್ಲಿ ಆಡಳಿತ ಕಾಂಗ್ರೆಸ್ ಸಂಪುಟದಿಂದ ಹೊರಗಿದ್ದುಕೊಂಡೇ ಅದಕ್ಕೆ ಬೆಂಬಲ ನೀಡುವುದೆಂದು ಆಡಳಿತ ಕಾಂಗ್ರೆಸ್ ಅಧ್ಯಕ್ಷ ಜಗಜೀವನ ರಾಂ ಅವರು ಇಂದು ಇಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.