ಸೋಮವಾರ, ಜೂನ್ 1, 2020
27 °C

ಮಂಗಳವಾರ, 7–4–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಥಶಾಖೆಯಲ್ಲಿ ಪ್ರಧಾನಿಗೆ ಚಿನ್ನದ ತಾಯತ ನೀಡಿದರೆ?

ನವದೆಹಲಿ, ಏ. 6– ಅಕ್ರಮ ಸಾಗಾಣಿಕೆ ಸಂಬಂಧದಲ್ಲಿ ಹಣಕಾಸು ಶಾಖೆಯಲ್ಲಿರುವ ಹಿಂದಿ ಅಧಿಕಾರಿ ವಿರುದ್ಧ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸುವುದಾಗಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ಲೋಕಸಭೆಗೆ ತಿಳಿಸಿದರು.

ಪ್ರಧಾನಿಗೆ ಈ ಅಧಿಕಾರಿಯು ಚಿನ್ನದ ತಾಯತವೊಂದನ್ನು ಕೊಟ್ಟಿದ್ದಾರೆ. ಹೀಗಾಗಿ, ಅಕ್ರಮ ಸಾಗಾಣಿಕೆ ಸಂಬಂಧದಲ್ಲಿ ವಿದೇಶಿಯನೊಬ್ಬನೊಡನೆ ಸಂಪರ್ಕ ಹೊಂದಿರುವ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಂಡಿಲ್ಲವೆಂಬ ಆರೋಪವನ್ನು ಹಣಕಾಸು ಶಾಖೆಯ ಸ್ಟೇಟ್‌ ಸಚಿವ ಶ್ರೀ ಪಿ.ಸಿ.ಸೇಠಿ ನಿರಾಕರಿಸಿದರು.

ಸಚಿವರಾರಿಗೂ ಅವರು ಯಾವುದೇ ತಾಯತ ಕೊಟ್ಟಿಲ್ಲವೆಂದು ತಿಳಿಸಿದರು.

ನಿರುದ್ಯೋಗದ ವಿರುದ್ಧ ಎಸ್ಸೆಸ್ಪಿ ಪ್ರದರ್ಶನ: ಹಲವರಿಗೆ ಪೆಟ್ಟು

ನವದೆಹಲಿ, ಏ. 6– ಸಾಲುಗಟ್ಟಿ ನಿಂತಿದ್ದ ಪೊಲೀಸರ ವ್ಯೂಹ ಭೇದಿಸಿಕೊಂಡು ಸಂಸತ್‌ ಭವನದತ್ತ ನುಗ್ಗಲು ಪ್ರಯತ್ನಿಸಿದ ಸಂಯುಕ್ತ ಸಮಾಜವಾದಿ ಪಕ್ಷದ ಉದ್ರಿಕ್ತ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಇಂದು ಇಲ್ಲಿ ಲಾಠಿಪ್ರಹಾರ ಮಾಡಿ ನಂತರ ಸುಮಾರು ಇಪ್ಪತ್ನಾಲ್ಕು ಅಶ್ರುವಾಯು ಷೆಲ್‌ಗಳನ್ನು ಹಾರಿಸಿದರು.

ಬೆತ್ತದ ಪ್ರಹಾರ ಮಾಡಿದಾಗ ಸಂಯುಕ್ತ ಸೋಷಲಿಸ್ಟ್‌ ನಾಯಕ, ಸಂಸತ್‌ ಸದಸ್ಯರಾದ ಜಾರ್ಜ್‌ ಫರ್ನಾಂಡಿಸ್‌, ಮಧುಲಿಮಯೆ, ಎಸ್ಸೆಸ್ಪಿ ಅಧ್ಯಕ್ಷ ಕರ್ಪೂರಿ ಠಾಕೂರ್‌ ಅವರೂ ಸೇರಿ ಐವತ್ತು ಜನಕ್ಕೆ ಗಾಯವಾಯಿತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.