ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 1–5–1970

Last Updated 30 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಗಡಿ ಸಮಸ್ಯೆ ಪರಿಶೀಲಿಸಲು ಸ್ವರಣ್‌, ಅಹಮದ್‌ಗೆ ಪ್ರಧಾನಿ ಅವರ ಸೂಚನೆ
ನವದೆಹಲಿ, ಏ. 30– ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಅಧ್ಯಯಿಸಿ, ಅದನ್ನು ಬಗೆಹರಿಸುವ ಸಲಹೆಗಳನ್ನು ಸೂಚಿಸುವಂತೆ ಕೇಂದ್ರ ಗೃಹ ಸಚಿವ ಸಂಪುಟದ ಇಬ್ಬರು ಹಿರಿಯ ಸಚಿವರುಗಳಾದ ರಕ್ಷಣಾ ಮಂತ್ರಿ ಶ್ರೀ ಸ್ವರಣ್‌ ಸಿಂಗ್‌ ಮತ್ತು ಕೇಂದ್ರ ಕೈಗಾರಿಕಾಭಿವೃದ್ಧಿ ಸಚಿವ ಶ್ರೀ ಫಕ್ರುದ್ದೀನ್‌ ಆಲಿ ಅಹಮದ್‌ ಅವರಿಗೆ ಪ್ರಧಾನಿ ಅವರು ತಿಳಿಸಿದ್ದಾರೆಂದು ತಿಳಿದುಬಂದಿದೆ.

ಈ ಇಬ್ಬರು ಹಿರಿಯ ಸಚಿವರಿಂದ ಪ್ರಧಾನಿ ಅವರಿಗೆ ವರದಿ ಬಂದ ನಂತರವೇ ಈ ಗಡಿ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ಸಂಪುಟದ ಆಂತರಿಕ ವ್ಯವಹಾರ ಸಮಿತಿ ಮತ್ತೆ ಪರಿಶೀಲನೆಯನ್ನು ಆರಂಭಿಸುವ ನಿರೀಕ್ಷೆ ಇದೆ.

ಎಚ್‌.ಎಫ್‌ 24ರ ಶಿಕ್ಷಕ ವಿಮಾನದ ಯಶಸ್ವಿ ಪ್ರಯೋಗ ಹಾರಾಟ
ಬೆಂಗಳೂರು, ಏ. 30– ಇಂದು ಎಚ್‌.ಎಫ್‌ 24– ಮಾರ್ಕ್‌ 1 ಶಿಕ್ಷಕ ವಿಮಾನದ ಯಶಸ್ವಿ ಪ್ರಯೋಗ ಹಾರಾಟ ನಡೆದು ಎಚ್‌ಎಎಲ್‌ನ ಬೆಂಗಳೂರು ವಿಭಾಗ ಮತ್ತೊಂದು ಕೀರ್ತಿ ಕಲಶವನ್ನು ಸ್ಥಾಪಿಸಿತು.

ಈ ವಿಭಾಗದಲ್ಲಿ ಮುಖ್ಯ ಪ್ರಯೋಗ ಚಾಲಕರಾದ ವಿಂಗ್‌ ಕಮಾಂಡರ್‌ ಆರ್‌.ಡಿ.ಸಹಾನಿ ಅವರು ಶಿಕ್ಷಕ ವಿಮಾನದ ಪ್ರಥಮ ಹಾರಾಟವನ್ನು ನಡೆಸಿದರು. ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಹಾಜರಿದ್ದ ಕೆಲಸಗಾರರು ಹರ್ಷೋದ್ಗಾರ ಮಾಡಿ ಸಹಾನಿ ಅವರನ್ನು ಭುಜದ ಮೇಲೆ ಹೊತ್ತು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT