ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 9–6–1970

Last Updated 8 ಜೂನ್ 2020, 19:14 IST
ಅಕ್ಷರ ಗಾತ್ರ

ಒಪ್ಪಂದ ಮುಗಿದರೂ ಪಾಕಿಸ್ತಾನಕ್ಕೆ ರಾವಿ ನದಿ ನೀರು
ಮುಂಬಯಿ, ಜೂನ್‌ 8–
ಕಳೆದ ಮಾರ್ಚಿ 31ಕ್ಕೆ ಸಿಂಧೂ ನದಿ ನೀರಿನ ಒಪ್ಪಂದದ ಕಾಲಾವಧಿ ಮುಗಿದ ನಂತರವೂ ರಾವಿ ನದಿಯ ನೀರು ಪಾಕಿಸ್ತಾನಕ್ಕೆಹರಿದುಹೋಗುತ್ತಿದೆಯೆಂದು ಪಂಜಾಬಿನ ಅರ್ಥಸಚಿವ ಬಲವಂತಸಿಂಗ್‌ ಅವರು ಇಂದು ಇಲ್ಲಿ ತಿಳಿಸಿದರು.

ಸಿಂಧೂ ನದಿ ನೀರು ಒಪ್ಪಂದದ ಕಾಲಾವಧಿ ಮುಗಿದ ಕೂಡಲೇ ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿದುಹೋಗುವುದನ್ನು ನಿಲ್ಲಿಸಲು ಸಾಧ್ಯವಾಗದೇ ಇರುವುದಕ್ಕೆ ಕೇಂದ್ರ ಸರ್ಕಾರದ ಆಲಸ್ಯ ಧೋರಣೆಯೇ ಕಾರಣವೆಂದು ಅವರು ಹೇಳಿದರು.

**

ಭಾಗಶಃ ಸಂಸ್ಕರಿಸಿದ ಕಚ್ಚಾ ಎಣ್ಣೆ ಆಮದು ನಿಲ್ಲಿಸಲು ಎಸ್ಸೊಗೆ ಆಜ್ಞೆ
ನವದೆಹಲಿ, ಜೂನ್‌ 8–
ಮುಂಬಯಿ ತೈಲ ಶುದ್ಧೀಕರಣ ಕೇಂದ್ರದಲ್ಲಿ ಈಗ ಬಳಸಲಾಗುತ್ತಿರುವ ಕಚ್ಚಾ ಎಣ್ಣೆ ಮಿಶ್ರಣದ ಆಮದನ್ನು ಕೂಡಲೇ ನಿಲ್ಲಿಸಬೇಕೆಂದು ವಿದೇಶಿ ಎಣ್ಣೆ ಕಂಪನಿಯಾದ ಎಸ್ಸೊ ಸಂಸ್ಥೆಗೆ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ.

ಶೇ 80ರಷ್ಟು ಹಗುರ (ಲೈಟ್‌) ಅರೇಬಿಯನ್‌ ಕಚ್ಚಾ ಎಣ್ಣೆಯ ಮಿಶ್ರಣವನ್ನು ಮಾತ್ರ ಕಂಪನಿ ಆಮದು ಮಾಡಿಕೊಳ್ಳಬೇಕೆಂದೂ ಬೇರೆ ಯಾವುದೇ ಬಗೆಯ ಕಚ್ಚಾ ಎಣ್ಣೆಯನ್ನು ಆಮದು ಮಾಡಿಕೊಳ್ಳಬಾರದೆಂದೂ ಸರ್ಕಾರ ಕಂಪನಿಗೆ ಸ್ಪಷ್ಟವಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT