ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 11–6–1970

Last Updated 11 ಜೂನ್ 2020, 20:44 IST
ಅಕ್ಷರ ಗಾತ್ರ

ಜನಸಂಘದ ಬಗ್ಗೆ ನನ್ನ ಒಲವಿದೆ ಎಂಬ ಪ್ರಚಾರ ರಷ್ಯಾ ಪ್ರೇರಿತ: ಎಸ್ಸೆನ್‌
ಹುಬ್ಬಳ್ಳಿ, ಜೂನ್‌ 11–
‘ಕಮ್ಯುನಿಸಂ ಮತ್ತು ಕೋಮುವಾದವನ್ನು ನಾನು ವಿರೋಧಿಸುತ್ತೇನೆ. ಜನಸಂಘದ ಬಗ್ಗೆ ನನಗೆ ಒಲವಿದೆ ಎಂಬ ಮಾತು ರಷ್ಯಾ ಮೂಲಗಳಿಂದ ಪ್ರೇರಿತವಾದುದು. ಈ ಅಪವಾದ ಅಪ್ಪಟವಾದ ಸುಳ್ಳು’ ಎಂದು ಭಾರತ ಸಂಸ್ಥಾ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್‌.ನಿಜಲಿಂಗಪ್ಪನವರು ಇಂದು ಇಲ್ಲಿಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾತಂತ್ರ, ಸಮಾಜವಾದ, ಜಾತ್ಯತೀತ ರಾಜ್ಯ ತತ್ವಗಳನ್ನು ಅಂಗೀಕರಿಸಿರುವ ಪಿ.ಎಸ್‌.ಪಿ., ಎಸ್‌.ಎಸ್‌.ಪಿ. ಮುಂತಾದ ಪಕ್ಷಗಳನ್ನು ಗೌರವಿಸುವುದು ಅಗತ್ಯವೆಂದ ಶ್ರೀ ನಿಜಲಿಂಗಪ್ಪನವರು,ಡಿ.ಎಂ.ಕೆ. ಮುಂತಾದ ಪ್ರಾದೇಶಿಕ ಪಕ್ಷಗಳನ್ನು ಪ್ರೋತ್ಸಾಹಿಸುವುದಕ್ಕೆ ತಮ್ಮ ವಿರೋಧವಿದೆ ಎಂದರು.

‘ಕದನವಿರಾಮ ರೇಖೆ ಕಾಶ್ಮೀರದಲ್ಲಿ ಕಾಯಂ ಗಡಿಯಾಗಿ ಉಳಿಯಲಿ’
ಶ್ರೀನಗರ, ಜೂನ್‌ 11–
ಕಾಶ್ಮೀರದಲ್ಲಿನ ಕದನವಿರಾಮ ರೇಖೆಯನ್ನೇ ಕಾಯಂ ಗಡಿಯಾಗಿ ಪರಿವರ್ತಿಸಬೇಕೆಂಬ ಸೂಚನೆಯೊಂದರ ಬಗ್ಗೆ ಇಲ್ಲಿನ ಜನತಾ ಸಮ್ಮೇಳನದಲ್ಲಿ ಭಾಗವಹಿಸಿರುವ ಪ್ರಮುಖ ಕಾಶ್ಮೀರಿ ಪ್ರತಿನಿಧಿಗಳು ಇಂದು ವಿವರಗಳನ್ನು ಸ್ಪಷ್ಟೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT