ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಬ್ರಿಟಿಷರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ಭಾರತದ ನಿರ್ಧಾರ

ಮಂಗಳವಾರ, 14–7–1970
Last Updated 13 ಜುಲೈ 2020, 16:25 IST
ಅಕ್ಷರ ಗಾತ್ರ

ಬ್ರಿಟಿಷರ ಪ್ರವೇಶಕ್ಕೆ ನಿರ್ಬಂಧ ವಿಧಿಸಲು ಭಾರತದ ನಿರ್ಧಾರ
ನವದೆಹಲಿ, ಜುಲೈ 13–
ಭಾರತಕ್ಕೆ ಬ್ರಿಟಿಷ್‌ ರಾಷ್ಟ್ರೀಯರು ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲು ಕೇಂದ್ರ ಸಂಪುಟದ ಆಂತರಿಕ ವ್ಯವಹಾರ ಸಮಿತಿ ಇಂದು ನಿರ್ಧರಿಸಿತು. ಭಾರತೀಯರು ಬ್ರಿಟನ್ನಿಗೆ ಪ್ರವೇಶಿಸುವುದರ ಮೇಲೆ ಬ್ರಿಟನ್‌ ನಿರ್ಬಂಧಗಳನ್ನು ವಿಧಿಸಿರುವುದರಿಂದ ಭಾರತ ಈ ಪ್ರತಿಕ್ರಮವನ್ನು ಕೈಗೊಳ್ಳಲು ತೀರ್ಮಾನಿಸಿತು.

ಬ್ರಿಟನ್ನಿಗೆ ತೆರಳುವ ವಿಶ್ವಾಸಯೋಗ್ಯ ಪ್ರಯಾಣಿಕರಿಗೂ ಅನಗತ್ಯವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ಭಾರತ ಬಹು ಕಾಲದಿಂದಲೂ ಕಳವಳಗೊಂಡಿತ್ತು. ಬ್ರಿಟನ್ನಿಗೆ ಭೇಟಿ ಕೊಡುವ ಭಾರತೀಯರ ಬಗ್ಗೆ ತೋರಲಾಗುತ್ತಿರುವ ಈ ಪಕ್ಷಪಾತವನ್ನು ಕೊನೆಗೊಳಿಸಬೇಕೆಂದು ಬ್ರಿಟಿಷ್‌ ಸರ್ಕಾರಕ್ಕೆ ಭಾರತ ಅನೇಕ ಬಾರಿ ಮನವಿ ಮಾಡಿಕೊಂಡಿತ್ತು. ಆದರೆ ಬ್ರಿಟಿಷ್‌ ಸರ್ಕಾರ ಈ ಮನವಿಗಳಿಗೆ ಓಗೊಡಲಿಲ್ಲ.

ನವೀನ ರೀತಿಯ ಟಾರ್ಚ್‌: ಎಲ್‌ಆರ್‌ಡಿಇ ಸಾಧನೆ
ಬೆಂಗಳೂರು, ಜುಲೈ 13–
ಪದೇಪದೇ ಬ್ಯಾಟರಿ ಷೆಲ್ಲುಗಳನ್ನು ಬದಲಾಯಿಸುವ ತಾಪತ್ರಯವಿಲ್ಲದ ಟಾರ್ಚನ್ನು ನಗರದಲ್ಲಿರುವ ಎಲ್‌ಆರ್‌ಡಿಇಸಂಸ್ಥೆಯು ಭಾರತದಲ್ಲಿಯೇ ಪ್ರಥಮವಾಗಿ ತಯಾರಿಸಿದೆ. ಇದಕ್ಕೆ ಉಪಯೋಗವಾಗಿರುವ ವಸ್ತುಗಳು ನೂರಕ್ಕೆ ನೂರರಷ್ಟು ಸ್ವದೇಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT