ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 21–8–1970

Last Updated 20 ಆಗಸ್ಟ್ 2020, 15:10 IST
ಅಕ್ಷರ ಗಾತ್ರ

ಚಳ್ಳಕೆರೆ ಬಳಿ ಭಾರಿ ಕುರಿ ಅಭಿವೃದ್ಧಿ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ
ಬೆಂಗಳೂರು, ಆ. 20–
ಚಳ್ಳಕೆರೆ ತಾಲ್ಲೂಕಿನ ಒರವು–ಕುದಾಪುರ ಪ್ರದೇಶದಲ್ಲಿ ಕುರಿ ತಳಿ ಅಭಿವೃದ್ಧಿಯ ಬೃಹತ್‌ ಕ್ಷೇತ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅಂತಿಮ ಒಪ್ಪಿಗೆ ನೀಡಿದೆ.

ಈ ವಿಷಯವನ್ನು ಇಂದು ವರಿದಿಗಾರರಿಗೆ ತಿಳಿಸಿದ ಪಶುಸಂಗೋಪನಾ ಸ್ಟೇಟ್‌ ಸಚಿವ ಜಿ.ಬಿ. ಶಂಕರರಾವ್‌ರವರು 28 ಲಕ್ಷ 70 ಸಾವಿರ ರೂ ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ 9,791 ಎಕರೆ ಜಮೀನನ್ನು ಬಿಡುಗಡೆ ಮಾಡಿದೆಯೆಂದು ತಿಳಿಸಿದರು.

ಕೇಂದ್ರ ಸರ್ಕಾರವು ಇಂತಹ ಕ್ಷೇತ್ರಗಳನ್ನು ಏಳು ರಾಜ್ಯಗಳಲ್ಲಿ ಸ್ಥಾಪಿಸಲಿದೆ.

ಸನ್ಯಾಲ್‌ ಬಂಧನಕ್ಕೆ ನಕ್ಸಲೀಯರ ಕೋಪ: ಟ್ರ್ಯಾಮ್‌, ಬಸ್‌ಗಳಿಗೆ ಅಗ್ನಿಸ್ಪರ್ಶ
ಕಲ್ಕತ್ತ, ಆ. 20–
ಮಧ್ಯ ಕಲ್ಕತ್ತಾದಲ್ಲಿ ನಕ್ಸಲೀಯರು ಇಂದು ಬೆಳಿಗ್ಗೆ ಟ್ರ್ಯಾಮ್‌ ಒಂದಕ್ಕೆ ಬೆಂಕಿ ಹಾಕಿದರು.

ನಕ್ಸಲೀಯ ನಾಯಕ ಕಾನು ಸನ್ಯಾಲ್‌ರನ್ನು ನಿನ್ನೆ ಸಿಲಿಗುರಿಯಲ್ಲಿ ಬಂಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಈ ಘಟನೆಗಳು ಜರುಗಿದುವೆಂದು ನಂಬಲಾಗಿದೆ.‌ ಶಾಂಪುಕುರ್ ‌ಪ್ರದೇಶದಲ್ಲಿ 2 ಮಹಡಿ ಬಸ್‌ಗಳಿಗೆ ನಕ್ಸಲೀಯರು ಬೆಂಕಿ ಹಚ್ಚಿ ಜಖಂಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT