ರಾಜ್ಯ ಸರ್ಕಾರಿ ನೌಕರರ ಕನಿಷ್ಠ ನಿವೃತ್ತಿ ವೇತನ 40 ರೂ.
ಬೆಂಗಳೂರು, ಮಾರ್ಚ್ 13– ರಾಜ್ಯದ ಸರ್ಕಾರಿ ನೌಕರರ ಕನಿಷ್ಠ ನಿವೃತ್ತಿ ವೇತನವನ್ನು ಈಗ ಇರುವ 30 ರೂ.
ನಿಂದ 40 ರೂ.ಗೆ ಹೆಚ್ಚಿಸಲು ತಾವು ನಿರ್ಧರಿಸಿರುವುದಾಗಿ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಕಾವೇರಿ ಬಯಲಿನ ನೀರಾವರಿ ಯೋಜನೆ ಕಾರ್ಯ ನಿಲ್ಲದು: ವೀರೇಂದ್ರ ಪಾಟೀಲ್ ಸ್ಪಷ್ಟನೆ
ಬೆಂಗಳೂರು ಮಾರ್ಚ್ 13– ಕೇಂದ್ರದ ನೆರವು ಬಂದರೂ ಸರಿಯೇ, ಬರದಿದ್ದರೂ ಸರಿಯೇ ಕಾವೇರಿ ಬಯಲಿನಲ್ಲಿ ಆರಂಭ ವಾಗಿರುವ ನೀರಾವರಿ ಯೋಜನೆಗಳನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯಲ್ಲಿ ಮತ್ತೆ ಸ್ಪಷ್ಟಪಡಿಸಿದರು.

ಧಾರವಾಡ, ಬಿದರೆ ಜಿಲ್ಲೆಗಳ ಆದ್ಯಂತ ವ್ಯವಹಾರ ಬಂದ್
ಧಾರವಾಡ/ ಬಿದರೆ, ಮಾರ್ಚ್ 13– ಮೈಸೂರು– ಮಹಾರಾಷ್ಟ್ರ ಗಡಿಪ್ರಶ್ನೆ ಕುರಿತು ಪ್ರಧಾನಮಂತ್ರಿ ಸೂಚಿಸಿರುವ ಇತ್ತೀಚಿನ ಸಲಹೆಗಳಿಗೆ ಪ್ರತಿಭಟನೆ ವ್ಯಕ್ತಪಡಿಸಲು ಇಡೀ ಧಾರಾವಾಡ ಜಿಲ್ಲೆ ಹಾಗೂ ಬಿದರೆ ಜಿಲ್ಲೆಗಳು ಇಂದು ಆಚರಿಸಿದ ಬಂದ್ ಸಂಪೂರ್ಣ ಯಶಸ್ವಿ ಆಗಿತ್ತು. ಎರಡೂ ಜಿಲ್ಲೆಗಳ ಎಲ್ಲ ಪಟ್ಟಣಗಳಲ್ಲೂ ಎಲ್ಲ ವ್ಯವಹಾರವೂ ಸ್ಥಗಿತ ಆಗಿತ್ತು.

ಮೈಸೂರು ಹಾಗೂ ಬಿಜಾಪುರ ನಗರಗಳೂ ಶಾಂತಿಯುತ ಬಂದ್ ಆಚರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.