ರಾಜ್ಯದಲ್ಲಿ ಮುಕ್ಕಾಲು ಪಾಲು ಮುಂಗಾರು ಬೆಳೆ ಹಾಳು
ಬೆಂಗಳೂರು, ಆ. 12– ಮಳೆ ಅಭಾವದ ಕಾರಣ ರಾಜ್ಯದಲ್ಲಿ ಶೇಕಡ 75ರಷ್ಟು ಮುಂಗಾರು ಬೆಳೆ ನಷ್ಟವಾಗುವ ಸಂಭವವಿದೆ.

ಈಗಾಗಲೇ ಮಂಜೂರು ಮಾಡಿರುವ ಕಾಮಗಾರಿಗಳನ್ನು ಅಭಾವ ಪ್ರದೇಶಗಳಲ್ಲಿ ತತ್‌ಕ್ಷಣ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ತೀರ್ಮಾನಿಸಲಾಯಿತು.

ಇಂದು ನಡೆದ ಮಂತ್ರಿಮಂಡಲ ಸಭೆ ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಅನೌಪಚಾರಿಕವಾಗಿ ಚರ್ಚಿಸಿತು.

ರಾಜ್ಯದ ಋತುಮಾನ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರಬೇಕೆಂದು ಈಗ ದೆಹಲಿಯಲ್ಲಿರುವ ಕಂದಾಯ ಇಲಾಖೆಯ ಕಾರ್ಯದರ್ಶಿ ಶ್ರೀ ಸ್ವಾಮಿನಾಥನ್ ಅವರಿಗೆ ತಿಳಿಸಲಾಗಿದೆಯೆಂದು ಕಂದಾಯ ಸಚಿವ ಶ್ರೀ ಎಚ್.ವಿ. ಕೌಜಲಗಿ ಅವರು ವರದಿಗಾರರಿಗೆ ತಿಳಿಸಿದರು.

ರಾಷ್ಟ್ರದಲ್ಲಿ ಏಕರೂಪ ನೀರು ದರ, ಅಭಿವೃದ್ಧಿ ಕಂದಾಯ ಇರಲಿ: ಸಲಹೆ
ಬೆಂಗಳೂರು, ಆ. 12– ನೀರು ದರ ಮತ್ತು ಅಭಿವೃದ್ಧಿ ಕಂದಾಯ ರಾಷ್ಟ್ರದಾದ್ಯಂತ ಏಕರೂಪದ್ದಾಗಿರಬೇಕೆಂದು ಮೈಸುರು ಸರ್ಕಾರವು ನೀರಾವರಿ ಆಯೋಗಕ್ಕೆ ಸಲಹೆ ಮಾಡಿದೆ.

ಕೇಂದ್ರ ಸರ್ಕಾರ ಶ್ರೀ ಎ.ಪಿ. ಜೈನ್‌ರವರ ಅಧ್ಯಕ್ಷತೆಯಲ್ಲಿ ರಚಿಸಿರುವ ನೀರಾವರಿ ಆಯೋಗವು ಇಂದು ರಾಜ್ಯದ ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.