ಗುರುವಾರ , ಅಕ್ಟೋಬರ್ 22, 2020
25 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಗುರುವಾರ, 24-9-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಶಸ್ತಿ ನಿರಾಕರಿಸಿ ಪಂತುಲು ಸ್ಪಷ್ಟನೆ
ಬೆಂಗಳೂರು, ಸೆ. 23–
‘ಶ್ರೀಕೃಷ್ಣ ದೇವರಾಯ’ ಚಿತ್ರದಲ್ಲಿನ ಅಭಿನಯಕ್ಕಾಗಿ ತಮಗೆ ನೀಡಲಾದ ‘ಶ್ರೇಷ್ಠ ನಟ’ ರಾಜ್ಯ ಪ್ರಶಸ್ತಿಯನ್ನು ಶ್ರೀ ಬಿ.ಆರ್‌. ಪಂತುಲು ಅವರು ನಿರಾಕರಿಸಿದ್ದಾರೆ.

ಯಾವುದೇ ರೀತಿಯಲ್ಲಿ ಪರಿಶೀಲನೆ ಮಾಡಿದರೂ ‘ಶ್ರೀಕೃಷ್ಣ ದೇವರಾಯ’ ಚಿತ್ರದಲ್ಲಿನ ಶ್ರೇಷ್ಠ ನಟ ರಾಜ್‌ಕುಮಾರ್‌ ಎಂದು ಶ್ರೀ ಪಂತುಲು ಅವರು, ರಾಜ್ಯ ಸರ್ಕಾರದ ಚಲನಚಿತ್ರ ವಿಭಾಗದ ವಿಶೇಷಾಧಿಕಾರಿಯವರಿಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

ಜೋರ್ಡಾನಿನಿಂದ ಸಿರಿಯಾ ಸೇನೆ ವಾಪಸು?
ಟೆಲ್‌ಅವೀವ್‌, ಸೆ. 23–
ಜೋರ್ಡಾನಿನಿಂದ ಸಿರಿಯಾ ಪಡೆಗಳು ಹಿಮ್ಮೆಟ್ಟಲಾರಂಭಿಸಿವೆಯೆಂದು ನಂಬಲರ್ಹ ಮೂಲಗಳು ಇಂದು ವರದಿ ಮಾಡಿವೆ.

ಈ ಮಧ್ಯೆ ಪ್ಯಾಲೆಸ್ಟೀನ್‌ ಗೆರಿಲ್ಲಾಗಳ ದಂಡನಾಯಕ ಯಾಸರ್‌ ಅರಾಫತ್‌ರವರು ಹೇಳಿಕೆಯೊಂದನ್ನು ನೀಡಿ, ಜೋರ್ಡಾನಿನಲ್ಲಿರುವ ಎಲ್ಲ ವಿದೇಶಿಯರ ಸುರಕ್ಷತೆ ಬಗೆಗೆ ವಿಶೇಷ ಜಾಗರೂಕತೆಯಿಂದಿರುವಂತೆ ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು