ಪ್ರಜಾವಾಣಿ | 50 ವರ್ಷಗಳ ಹಿಂದೆ: ಗುರುವಾರ, 17–9–1970

ಸಣ್ಣ ಕಾರು: ಉತ್ಪಾದನೆ ಬೆಲೆ ಮಿತಿಮೀರಿದರೆ ಸರ್ಕಾರದ ನೀತಿ ಪುನರ್ ವಿಮರ್ಶೆ
ನವದೆಹಲಿ, ಸೆ. 16– ವಿದೇಶಿ ಸಹಯೋಗದಿಂದ ತಯಾರಿಸಲಾಗುವ ಕಾರಿನ ಬೆಲೆ ಹದಿನೈದು ಸಾವಿರ ರೂ.ಗಳಿಗೂ ಮೀರುವುದಾದರೆ ಕೇಂದ್ರ ಸರ್ಕಾರವು ಸರ್ಕಾರಿ ರಂಗದಲ್ಲಿ ಕಡಿಮೆ ಬೆಲೆಯ ಕಾರನ್ನು ತಯಾರಿಸುವ ನಿರ್ಧಾರವನ್ನು ಪುನರ್ ವಿಮರ್ಶಿಸುವ ಸಂಭವವಿದೆ.
ಉತ್ಪಾದನಾ ಸಾಮರ್ಥ್ಯವನ್ನು 50 ಸಾವಿರದಿಂದ ಒಂದು ಲಕ್ಷಕ್ಕೆ ಏರಿಸುವುದರಿಂದ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯ ಎಂದು ಕಂಡುಬಂದರೆ ಕೇಂದ್ರವು ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಸಂಭವವೂ ಇದೆ ಎಂದು ಅಧಿಕೃತ ವಲಯಗಳು ತಿಳಿಸಿವೆ.
ಜೋರ್ಡಾನ್‌ನಲ್ಲಿ ಮಿಲಿಟರಿ ಆಡಳಿತ: ಕದನಕ್ಕೆ ಗೆರಿಲ್ಲಾ ಸಜ್ಜು
ಅಮ್ಮಾನ್, ಸೆ. 16– ದೊರೆ ಹುಸೇನ್‌ರು ಇಂದು ಜೋರ್ಡಾನ್ ಆಡಳಿತವನ್ನು ಮಿಲಿಟರಿ ಸರ್ಕಾರದ ವಶಕ್ಕೆ ಒಪ್ಪಿಸಿ ಮಿಲಿಟರಿ ಶಾಸನ ಜಾರಿಗೆ ತಂದ ಕೂಡಲೇ ಅರಬ್ ಗೆರಿಲ್ಲಾಗಳು ಸರ್ಕಾರದ ಆಜ್ಞೆಯನ್ನು ಅಲಕ್ಷಿಸಿ ಅಮ್ಮಾನ್‌ನಲ್ಲಿ ಕದನಕ್ಕೆ ಸಜ್ಜಾಗಿ ನಿಂತರು.
ರಾಜಧಾನಿಯಲ್ಲಿ ಅಂಗಡಿ, ಶಾಲೆಗಳು ಮುಚ್ಚಿದ್ದು ಮತ್ತೊಂದು ಸುತ್ತು ಕದನ ನಡೆಯುವಂತಹ ಆಸ್ಫೋಟಕ ಪರಿಸ್ಥಿತಿ ಇದ್ದು, ‘ಮಧ್ಯಪ್ರವೇಶ ಮಾಡಿ, ಸಂಭವನೀಯ ರಕ್ತಪಾತವನ್ನು ತಡೆಗಟ್ಟಿ’ ಎಂದು ಕಮಾಂಡೊಗಳು ಅರಬ್ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.