ಮಂಗಳವಾರ, ಫೆಬ್ರವರಿ 25, 2020
19 °C

50 ವರ್ಷಗಳ ಹಿಂದೆ | ಮಂಗಳವಾರ, 3–2–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ: ಈಗಿನ ನಿರ್ಧಾರ ಅಂತಿಮವಲ್ಲ ಎಂದು ಬನ್ಸಿಲಾಲ್‌

ಚಂಡೀಗಡ, ಫೆ. 2– ಹರಿಯಾಣದ ಮಟ್ಟಿಗೆ ಹೇಳುವುದಾದರೆ, ಚಂಡೀಗಡ ಇನ್ನೂ ತೆರೆದ ಪ್ರಶ್ನೆಯೇ ಎಂದು ಹರಿಯಾಣ ಮುಖ್ಯಮಂತ್ರಿ ಬನ್ಸಿಲಾಲ್‌ ಇಂದು
ಪತ್ರಕರ್ತರಿಗೆ ತಿಳಿಸಿದರು.

ಚಂಡೀಗಡವು ಹಿಂದಿ ಭಾಷಾ ಪ್ರಾಂತ್ಯವಾಗಿದ್ದು, ಅದು ಹರಿಯಾಣಕ್ಕೆ ದೊರೆಯಬೇಕಾಗಿತ್ತು ಎಂದವರು ನುಡಿದರು.

ಚಂಡೀಗಡವನ್ನು ಪಂಜಾಬಿಗೆ ಕೊಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರ ಹರಿಯಾಣದ ಜನತೆಗೆ ದಿಗ್ಭ್ರಮೆ ಉಂಟು ಮಾಡಿದೆಯೆಂಬ ನಿರ್ಣಯವೊಂದನ್ನು ಅಧಿಕಾರಾರೂಢ ಹರಿಯಾಣ ಕಾಂಗ್ರೆಸ್ ಶಾಸಕರ ಪಕ್ಷದ ಸಭೆ ಸರ್ವಾನುಮತದಿಂದ ಅನುಮೋದಿಸಿತು. 

ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನು

ಬೆಂಗಳೂರು, ಫೆ. 2– ಇನ್ನು ಎರಡು ವರ್ಷಗಳಲ್ಲಿ ಭೂರಹಿತರಿಗೆ ಸರ್ಕಾರಿ ಜಮೀನನ್ನು ಹಂಚಬೇಕೆಂದು ಸರ್ಕಾರ ಉದ್ದೇಶಿಸಿದೆಯೆಂದು ಕಂದಾಯ ಸಚಿವ ಶ್ರೀ ಎಚ್‌.ವಿ.ಕೌಜಲಗಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು. 

ಭೂರಹಿತರಿಗೆ ವಿಲೇ ಮಾಡಲು ರಾಜ್ಯದಲ್ಲಿ 11,95,009 ಎಕರೆ 27 ಗುಂಟೆ ಸರ್ಕಾರಿ ಜಮೀನು ದೊರೆಯುವ ಸಂಭವವಿದೆಯೆಂದು ಸಚಿವರು ಶ್ರೀ ಎಂ.ವಿ.ವೆಂಕಟಪ್ಪ ಅವರ ಪ್ರಶ್ನೆಗೆ ಉತ್ತರವಿತ್ತರು. 

ಸಾಗುವಳಿಗಾಗಿ ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಎಕರೆ ಜಮೀನನ್ನು ಜನ ಅತಿಕ್ರಮ ಮಾಡಿದ್ದಾರೆಂದೂ ಅವರು ತಿಳಿಸಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)