ಭಾನುವಾರ, ಜನವರಿ 19, 2020
23 °C
1969

ಪ್ರಜಾವಾಣಿ 50 ವರ್ಷಗಳ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ನೇತೃತ್ವದ ಸರ್ಕಾರ ಉರುಳಿಸುವ ಎಸ್ಸೆಸ್ಪಿ ನೀತಿ ಬದಲಾಗಿಲ್ಲ

ಬೆಂಗಳೂರು, ಡಿ. 13– ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ವಿರೋಧಿಸಿ ಅದನ್ನು ಉರುಳಿಸುವ ಎಸ್ಸೆಸ್ಪಿ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ರಾಜ್ಯದ ಎಸ್ಸೆಸ್ಪಿ ನಾಯಕ ಶ್ರೀ ಎಸ್. ಗೋಪಾಲಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಈ ನೀತಿಯನ್ನನುಸರಿಸಿ ರಾಜ್ಯದಲ್ಲಿ ಶ್ರೀ ವೀರೇಂದ್ರ ಪಾಟೀಲರ ಸರ್ಕಾರವನ್ನು ಪದಚ್ಯುತಗೊಳಿಸುವ ಯಾರ ಪ‍್ರಯತ್ನಕ್ಕೇ ಆಗಲಿ ತಮ್ಮ ಪಕ್ಷದ ಬೆಂಬಲವಿದೆ ಎಂದರು. ವಿಧಾನಸಭೆಯಲ್ಲಿ ಇತರ ಕಾಂಗ್ರೆಸ್ ವಿರೋಧಿ ಪಕ್ಷಗಳೊಡನೆ ತಮ್ಮ ಪ‍ಕ್ಷ ಸಹಕರಿಸುವುದು, ಆ ಪಕ್ಷಗಳ ಹೊಂದಾಣಿಕೆ ಸಾಧ್ಯತೆಗಳನ್ನು ಅವಲಂಬಿಸಿದೆಯೆಂದು ವರದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಐಕ್ಯ ಅಸಾಧ್ಯ ಎಂದ ಅಧ್ಯಕ್ಷರು

ಬೆಂಗಳೂರು, ಡಿ. 13– ಕಾಂಗ್ರೆಸ್ಸಿನ ಎರಡು ಬಣಗಳ ನಡುವೆ ಮತ್ತೆ ಏಕತೆ ಅಸಾಧ್ಯವೆಂದು ಎರಡೂ ಗುಂಪಿನ
ಅಧ್ಯಕ್ಷರುಗಳು ಮತ್ತೆ ಸ್ಪಷ್ಟಪಡಿಸಿದ್ದಾರೆ.

‘ನನ್ನ ಪ್ರಯತ್ನಗಳಿಗೆ ಸಾಕಷ್ಟು ತಿರಸ್ಕಾರ, ಮುಖಭಂಗಗಳಾಗಿವೆ. ಏಕತೆ ಸಾಧಿಸಲು ಹೊಸ ಪ್ರಯತ್ನ ಮಾಡಲೊಲ್ಲೆ’ ಎಂದು ಎಸ್‌.ನಿಜಲಿಂಗಪ್ಪ ಮತ್ತು ಸಿ.ಸುಬ್ರಹ್ಮಣ್ಯಂ ಅವರು ಸ್ಪಷ್ಟಪಡಿಸಿದರು.

ಬೆನಗಲ್ ರಾಮರಾವ್ ಅವರು ನಿಧನ

ಮುಂಬೈ, ಡಿ. 13– ರಿಸರ್ವ್ ಬ್ಯಾಂಕಿನ ಮಾಜಿ ಗೌರ್ನರ್ ಶ್ರೀ ಬೆನಗಲ್ ರಾಮರಾವ್ ಅವರು ಇಂದು ಇಲ್ಲಿ ನಿಧನರಾದರು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಅವರಿಗೆ 80 ವರ್ಷವಾಗಿತ್ತು.

ಪ್ರತಿಕ್ರಿಯಿಸಿ (+)