ಸೋಮವಾರ, ಜೂನ್ 1, 2020
27 °C

ಪ್ರಾಣಿ ಪ್ರಿಯರ ಮೇಳ ‘ದಿ ಕೈಂಡ್‌ ಫೆಸ್ಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌ ರೈಸಿಂಗ್ ಸಹಭಾಗಿತ್ವದಲ್ಲಿ ಫೋರಂ ನೇಬರ್‌ಹುಡ್‌ ಮಾಲ್‌ ಇದೇ 31ರಂದು ‘ದಿ ಕೈಂಡ್‌ ಫೆಸ್ಟ್’/ ವೆಗನ್ ಫೆಸ್ಟಿವಲ್‌ ಆಯೋಜಿಸಿದೆ. 

ಪ್ರಾಣಿಗಳ ಉತ್ಪನ್ನಗಳನ್ನು ಬಳಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಉತ್ಸವ ಮಹತ್ವದ ಉದ್ದೇಶ. ಪ್ರಾಣಿಗಳನ್ನು ಹಾಲು, ಮೊಸರು, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ, ಚರ್ಮದಂತಹ ಉತ್ಪನ್ನಗಳ ಸರಕಾಗಿ ಪರಿಗಣಿಸದೆ, ಮಾನವರಂತೆಯೇ ಸಮಾನವಾಗಿ ಜೀವಿಯಂತೆ ನೋಡಬೇಕು ಎನ್ನುವುದು ಉತ್ಸವ ತಿರುಳು. 

ಪ್ರಾಣಿಜನ್ಯ ಉತ್ಪನ್ನಗಳನ್ನು ತ್ಯಜಿಸಲು ಯಾವ ರೀತಿ ಜೀವನಶೈಲಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ವೇಗನ್‌ ಉತ್ಸವ ಜನರಿಗೆ ತಿಳಿಸಿಕೊಡಲಿದೆ.

ಚಾಕೋಲೆಟ್‌, ಚೀಸ್‌, ಹಾಲು, ಕೇಕ್‌, ಸೌಂದರ್ಯವರ್ಧಕ, ಶೂ, ಪಾದರಕ್ಷೆ, ಚೀಲ, ಬಟ್ಟೆ, ಗೃಹಬಳಕೆ ವಸ್ತುಗಳು ಸೇರಿದಂತೆ ಸಸ್ಯಜನ್ಯ ಉತ್ಪನ್ನಗಳ ಮಾರಾಟ ಮಳಿಗೆಗಳಿರುತ್ತವೆ. 

‘ಲೆಟ್ಸ್‌ ಲಿವ್‌ ಟುಗೆದರ್‌’ ಸ್ವಯಂಸೇವಾ ಸಂಸ್ಥೆ ಬೀದಿನಾಯಿ ಮತ್ತು ನಾಯಿಮರಿಗಳನ್ನು ದತ್ತು ನೀಡಲಿದೆ. ತಮ್ಮನ್ನು ದತ್ತು ಪಡೆದು ಸೂರು ನೀಡುವ ಸುರಕ್ಷಿತ ಕೈಗಳಿಗಾಗಿ ಮುದ್ದು ನಾಯಿಮರಿಗಳು ಎದುರು ನೋಡುತ್ತಿವೆ. 

ಸ್ಥಳ: ದಿ ಫೋರಂ ನೇಬರ್‌ಹುಡ್‌ ಮಾಲ್‌, # 62, ವೈಟ್‌ಫೀಲ್ಡ್‌ ಮುಖ್ಯರಸ್ತೆ, ಪ್ರೆಸ್ಟೀಜ್‌ ಓಜೋನ್‌, ವೈಟ್‌ಫೀಲ್ಡ್‌, ಬೆಂಗಳೂರು–66

ದಿನ: 31ನೇ ಮಾರ್ಚ್‌ 2019

ಸಮಯ: ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ

ಸಂಪರ್ಕ ಸಂಖ್ಯೆ:7838604758 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.