ಕಬೀರನಿಗೆ ನೇಕಾರಿಕೆ ತಂದೆಯಿಂದ ಬಂದ ವೃತ್ತಿಯಾಗಿತ್ತು. ಆದರೂ ಅವನಿಗೆ ನೂಲಿಗಿಂತ ಅಧ್ಯಾತ್ಮದ ಕಡೆಗೆ ಒಲವಿತ್ತು. ತನ್ನ ಬಳಿ ಬರುವ ಗಿರಾಕಿಗಳಿಗಿಂತ ದೈವ ಸಾಕ್ಷಾತ್ಕಾರದ ಕುರಿತ ಚಿಂತನೆಯ ಸಾಧುಗಳು ಮುಖ್ಯವಾಗುತ್ತಿದ್ದರು. ದಾರಗಳು ಒಂದರೊಳಗೊಂದು ಹಾಸು ಹೊಕ್ಕು ಬಟ್ಟೆಯಾಗುವ ಅದ್ಭುತವನ್ನು ನೋಡುತ್ತಲೇ ಧ್ಯಾನಾಸಕ್ತನಾಗುತ್ತಿದ್ದ. ಇದ್ದಕ್ಕಿದ್ದಂತೆ ದೇಶ ಪರ್ಯಟನೆ ಹೊರಟುಬಿಡುತ್ತಿದ್ದ. ಅವನೇ ತನ್ನ ಬರಹದಲ್ಲಿ ಒಂದು ಕಡೆ ಹೇಳುತ್ತಾನೆ, ‘ನಾನು ಕಾಬಾಕ್ಕೂ ಹೋಗಿದ್ದೇನೆ. ಹಜ್ಗೆ ಕೂಡಾ’ ಎಂದು. ಅನೇಕ ಗ್ರಂಥಗಳಲ್ಲಿ ಆತ ಗೋಮತೀ ತೀರಕ್ಕೆ, ಪುರಿ ಜಗನ್ನಾಥಕ್ಕೆ ಹೋದ ಉಲ್ಲೇಖಗಳು ದೊರಕುತ್ತವೆ.
ಒಮ್ಮೆ ದೊಡ್ಡ ಗಾಳಿ ಸುದ್ದಿ ಹಬ್ಬುತ್ತದೆ, ‘ಕಬೀರನು ನೇಯುವುದನ್ನು ತ್ಯಜಿಸಿದ್ದಾನೆ. ಅವನ ಮೈಮೇಲೆಲ್ಲಾ ಹರಿಯ ಹೆಸರು ಛಾಪಿಸಿದೆ’ ಎಂದು. ಇದನ್ನು ಕೇಳಿದ ಕೆಲವರಲ್ಲಿ ಕುತೂಹಲವೂ, ಇನ್ನು ಕೆಲವರಲ್ಲಿ ತಿರಸ್ಕಾರವೂ ಮೂಡಿತ್ತು. ಅವನನ್ನು ಅಪಹಾಸ್ಯ ಕೂಡಾ ಮಾಡಿದರು.

ಕರ್ಮಠನಾದ ವ್ಯಕ್ತಿಯೊಬ್ಬ ಕಬೀರನ ಬಳಿಗೆ ಬಂದು, ‘ನೀನು ಅನ್ಯಧರ್ಮೀಯನಾಗಿದ್ದು, ಹರಿಯ ನಾಮವನ್ನು ದೇಹದ ಮೇಲೆ ಹೇಗೆ ಛಾಪಿಸಿಕೊಂಡೆ? ನಿನ್ನ ದೇವರ ಹೆಸರನ್ನು ಬರೆದುಕೊಳ್ಳಬೇಕಿತ್ತು. ಇಂಥಾ ಸುಳ್ಳುಗಳಿಂದ ನೀನು ಏನನ್ನು ಸಾಧಿಸುವೆ’ ಎಂದ. ಕಬೀರ ಆಕಾಶವನ್ನು ನೋಡಿದ. ಮೋಡಗಳು ಹರಡಿ ತೇಲುತ್ತಿದ್ದವು. ಅದನ್ನು ತೋರುತ್ತಾ, ‘ಅದೇನದು ಗಾಳಿ ಬೀಸಿದಾಕ್ಷಣ ಆಕಾರ ಬದಲಿಸುತ್ತಲೇ ಇದೆಯಲ್ಲಾ’ ಎಂದ. ಕರ್ಮಠನು, ‘ಅದು ಮೋಡ. ಆಕಾರ ಬದಲಿಸುವುದು ಅದರ ಗುಣ. ಅದಕ್ಕೂ ದೈವತ್ವಕ್ಕೂ ಸಂಬಂಧ ಏನು?’ ಎಂದ. ಕಬೀರ ಗಹನವಾಗಿ, ‘ನಾನು ಮೋಡದ ಬಗ್ಗೆ ಮಾತ್ರ ಮಾತಾಡುತ್ತಿರುವೆ. ದೈವದ ಬಗ್ಗೆ ಅಲ್ಲ’ ಎಂದ. ಸ್ವಲ್ಪ ಹೊತ್ತು ಗಾಳಿಗೆ ಮೋಡ ಮತ್ತೆ ತನ್ನ ಆಕಾರವನ್ನೇ ಬದಲಿಸಿತು. ಮತ್ತೆ ಕಬೀರ ಮೋಡವನ್ನು ತೋರುತ್ತಾ, ‘ಮತ್ತೆ ಮೋಡ ತನ್ನ ಆಕಾರ ಬದಲಿಸಿತು. ಈಗ ಹೇಳು ಅದು ಮೋಡವೋ ಅಲ್ಲವೋ?’ ಎಂದ. ಅದಕ್ಕೆ ಕರ್ಮಠ ಸ್ವಲ್ಪ ಕೋಪದಿಂದ ‘ಅದು ಮೋಡವೇ, ಆಕಾರ ಬದಲಾದ ತಕ್ಷಣ ಅದರ ಹೆಸರು ಬದಲಾಗಲ್ಲ’ ಎಂದ. ಕಬೀರ ನಗುತ್ತಾ, ‘ನೀನು ಹರಿಯ ಹೆಸರನ್ನು ಹೇಗೆ ಛಾಪಿಸಿಕೊಂಡೆ ಎಂದೆಯಲ್ಲವೇ? ಕಡೆಗೂ ಪರಮಾತ್ಮ ಎನ್ನುವುದು ಒಂದು ಹೆಸರಷ್ಟೇ. ಅದು ಹರಿಯಾದರೂ, ಅಲ್ಲಾನಾದರೂ ಒಂದೇ. ಹೆಸರು ಬೇರೆಯಾದ ತಕ್ಷಣ ಭಾವ ಬೇರೆಯಾಗಲ್ಲ. ಮುಖ್ಯ ಅವನು ಒಳಿತಿನ ರೂಪದಲ್ಲಿ ನಮ್ಮೊಂದಿಗಿರಬೇಕು’ ಎಂದ.

ನಿಜ ಮಡಿಕೆ ಬೇರೆ ಬೇರೆ ಆಕಾರದಲ್ಲಿರಬಹುದು- ಆಗಿರುವುದು ಒಂದೇ ಮಣ್ಣಿನಿಂದ. ಹಸುವಿನ ಬಣ್ಣ ಬೇರೆಯಾಗಿರಬಹುದು ಹಾಲು ಮಾತ್ರ ಬಿಳಿಯೇ. ಹೊಸ್ತಿಲ ಮೇಲಿಟ್ಟ ದೀಪ ಒಳಹೊರಗೂ ಒಂದೇ ಬೆಳಕನ್ನು ಹರಡುವ ಹಾಗೆ ದೈವ. ಬಣ್ಣ, ಆಕಾರ, ಬಟ್ಟೆ ಬೇರೆಯಾದರೂ ಶ್ರದ್ಧೆ ಮಾತ್ರ ಒಂದೇ. ಕಬೀರ ಸಮಾಜವನ್ನು ಕಟ್ಟಿದ್ದು ಎಷ್ಟು ಚಂದ ಅಲ್ಲವೇ! ಇದನ್ನು ಹೇಳಿದ ಕಬೀರನಿಗೆ ಅವನ ಕಾಲದಲ್ಲಿ ಗೌರವ ದೊರಕಲಿಲ್ಲ. ಆದರೆ ಅವನ ಕನಸು ಈಗಲೂ ನಮ್ಮನ್ನು ಹಿಂಬಾಲಿಸುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.