ಈ ವಿಶ್ವದಲ್ಲಿ ದಾರ್ಶನಿಕರು ಮಾಡಿದ ವ್ಯಾಖ್ಯಾನಗಳು, ವಾಗ್ಗೇಯಕಾರರು, ಉಪನಿಷತ್ಗಳು, ಅವುಗಳನ್ನು ರಚಿಸಿದ ಋಷಿಗಳು, ವಚನಗಳು, ಅವುಗಳನ್ನು ರಚಿಸಿದ ಶರಣರು, ಅನೇಕ ಜನರ, ಶರಣರ, ಸಂತರ ಅನುಭವಾಮೃತಗಳನ್ನು ಅವರೆಲ್ಲಾ ಈ ನೆಲದ ಮಣ್ಣಿನಲ್ಲೇ ಬಿಟ್ಟು ಹೋಗಿದ್ದು ಯಾಕೆ? ಯಾತಕ್ಕಾಗಿ ಇವುಗಳನ್ನು ರಚನೆ ಮಾಡಿದರು? ಅವರೇನು ಹೆಸರಿಗಾಗಿ ರಚನೆ ಮಾಡಿದರೋ? ಯಾತಕ್ಕಾಗಿ ಇವುಗಳನ್ನು ಮನುಕುಲದ ಮಧ್ಯದಲ್ಲಿ ಬಿಟ್ಟುಹೋದರು? ದಾರ್ಶನಿಕರಾಗಲಿ, ಸಂತರಾಗಲಿ, ಶರಣರಾಗಲಿ ಉಪನಿಷತ್, ವಚನ, ಅನುಭವಾಮೃತವನ್ನು ಹೆಸರಿಗಾಗಿಯೂ ಬರೆದಿದ್ದಲ್ಲ, ಪ್ರಶಸ್ತಿಗಾಗಿಯೂ ಬರೆದಿದ್ದಲ್ಲ; ಈ ಜನರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವುದಕ್ಕಾಗಿಯೂ ಅಲ್ಲ. ಬದಲಾಗಿ ಮನುಷ್ಯರು ಬದುಕುವ ಈ ಭೂಮಿ ಸ್ವರ್ಗವಾಗಬೇಕು ಎನ್ನುವುದೇ ಅವರೆಲ್ಲರ ಆಶಯವಾಗಿತ್ತು. ಕಲ್ಪನೆಯ ಸ್ವರ್ಗಕ್ಕಿಂತ ವಾಸ್ತವಿಕ ಬದುಕು ಬಹಳ ಮುಖ್ಯ.

ಈ ಬದುಕು ಎಲ್ಲಿಂದ ಆರಂಭವಾಗುತ್ತದೆ, ಎಲ್ಲಿ ಮುಗಿಯುತ್ತದೆ ಎನ್ನುವುದರ ಬಗ್ಗೆ ಈ ದೇಶದ ದಾರ್ಶನಿಕರು ಬಹಳಷ್ಟು ಸಂಶೋಧನೆ ಮಾಡಿದರು. ಜೀವನದ ಎಳೆಎಳೆಗಳನ್ನು ಬಿಡಿಸಿ ನೋಡಿದರು. ಎಲ್ಲಿಯವರೆಗೆ ಕಣ್ಣು ನೋಡುತ್ತದೆ, ಎಲ್ಲಿಯವರೆಗೆ ಕೈ ಕೆಲಸ ಮಾಡುತ್ತದೆ, ಎಲ್ಲಿಯವರೆಗೆ ಕಾಲು ನಡೆಯುತ್ತದೆ, ಎಲ್ಲಿಯವರೆಗೆ ಬುದ್ಧಿ ವಿಚಾರ ಮಾಡುತ್ತದೆ ಎಂದರೆ ದೇಹದಲ್ಲಿ ಉಸಿರು ಇರುವ ತನಕ ಮಾತ್ರ. ಉಸಿರ ನಿಂತ ತಕ್ಷಣ ಎಲ್ಲವೂ ನಿಂತು ಹೋಗುತ್ತವೆ. ಉಸಿರಿನೊಂದಿಗೆ ಜೀವನವೂ ನಿಂತು ಹೋಗುತ್ತದೆ. ಬದುಕು ಅಂದ್ರೆ ಉಸಿರಿನ ಲೀಲಾವಿಲಾಸ ಅಷ್ಟೇ. ಈ ಬದುಕು ಇಸ್ಪೀಟ್ ಆಟದಂತೆ. ಇಸ್ಪೀಟಿನಲ್ಲಿ ರಾಜ, ರಾಣಿ, ಪ್ರಜಾ ಎಂದೆಲ್ಲ ಇರುತ್ತವೆ. ಆಟ ಮುಗಿದ ಮೇಲೆ ಎಲ್ಲವನ್ನೂ ಒಂದೇ ಪ್ಯಾಕೆಟ್ನಲ್ಲಿ ಇಡಲಾಗುತ್ತದೆ. ಹಾಗೆಯೇ ಜೀವನ ಎಂಬ ಆಟದಲ್ಲಿ ಒಬ್ಬ ಸನ್ಯಾಸಿ, ಒಬ್ಬ ರಾಜಕಾರಣಿ, ಅಧಿಕಾರಿ ಎಲ್ಲಾ ಇರ್ತಾರೆ. ಆದರೆ ಒಮ್ಮೆ ಆಟ ಮುಗೀತು ಅಂದರೆ ಎಲ್ಲರನ್ನೂ ಸ್ಮಶಾನ ಎನ್ನುವ ಪ್ಯಾಕೆಟ್ಗೆ ಕಳುಹಿಸುತ್ತಾರೆ. ತಾಯಿಯ ಗರ್ಭದಿಂದ ಈ ಭೂಮಿಗೆ ಒಬ್ಬ ಬರುವಾಗ ಆತನಿಗೆ ಉಸಿರು ಇತ್ತು, ಆದರೆ ಹೆಸರು ಇರಲಿಲ್ಲ. ಈ ಭೂಮಿಯನ್ನು ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ. ಆದರೆ ಹೆಸರು ಉಳಿಯುವಂತೆ ಮಾಡಬೇಕು. ಅದು ಬದುಕಿನ ಸಾರ್ಥಕತೆ. ಬದುಕು ಅಷ್ಟು ಅದ್ಭುತವಾಗಿದೆ.

ಈ ನಿಸರ್ಗ ದೇವತೆ ಎಲ್ಲರಿಗೂ ಬದುಕು ಕೊಟ್ಟಿದೆ. ಅರಮನೆಯಲ್ಲಿ ಇರುವವನಿಗೂ ಒಂದು ಬದುಕು ಇದೆ. ಗುಡಿಸಿಲಿನಲ್ಲಿ ಇರುವವನಿಗೂ ಒಂದು ಬದುಕು ಇದೆ. ಬದುಕು ಹೇಗೆ ಸುಂದರವಾಗುತ್ತದೆ? ತಾನೂ ಸಂತೋಷವಾಗಿರಬೇಕು, ತನ್ನ ನೆರೆಹೊರೆ ಯವರೂ ಸಂತೋಷವಾಗಿರಬೇಕು, ನಮಗೆ ಆಶ್ರಯ ಕೊಟ್ಟಿರುವ ಜಗತ್ತೂ ಸುಂದರವಾಗಿರಬೇಕಲ್ಲ. ಅಂತಹ ಕಲ್ಪನೆ ಮನುಷ್ಯನ ಬದುಕಿನ ಬಗ್ಗೆ ಬರಬೇಕು. ಮನುಷ್ಯನಿಗೆ ದುಃಖ ಯಾಕೆ? ಅವನು ತಪ್ಪಿದ್ದು ಎಲ್ಲಿ? ಅವನು ತಪ್ಪಿದ್ದು ಈ ಜಗತ್ತನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವಲ್ಲಿ. ಮನುಷ್ಯನ ಅಜ್ಞಾನದಿಂದ ಬದುಕು ಕೆಟ್ಟಿದೆ. ಅದಕ್ಕಾಗಿಯೇ ಜ್ಞಾನಿಗಳು ಜ್ಞಾನವನ್ನು ಹಂಚಲು ಪ್ರಾರಂಭ ಮಾಡಿದರು. ನಾವು 25–30 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಕಟ್ಟುತ್ತೇವೆ. ಆದರೆ ಮನೆ ಉದ್ಘಾಟನೆಯಾಗುವುದು ಒಂದು ರೂಪಾಯಿ ಮೇಣದಬತ್ತಿಯಿಂದ. ಹಾಗಾದರೆ ಬೆಲೆ ಇರುವುದು ಮನೆಗೋ ಬೆಳಕಿಗೋ? ಬೆಲೆ ಇರುವುದು ಮನೆಗಲ್ಲ, ಬೆಳಕಿಗೆ. ಅದಕ್ಕಾಗಿ ಜ್ಞಾನ ದಾಸೋಹ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.