ಒಬ್ಬ ಶ್ರೀಮಂತ ಇದ್ದ. ಅವನ ಮನೆಯ ಸುತ್ತ ಭದ್ರವಾದ ಕೋಟೆ ಇತ್ತು. ಮನೆಯ ತಿಜೋರಿಯಲ್ಲಿ ಹಣ, ಆಭರಣ ಎಲ್ಲಾ ಇತ್ತು. ಆ ಮನೆಯಲ್ಲಿ ಒಬ್ಬ ಸೇವಕ ಇದ್ದ. ಬಹಳ ಪ್ರಾಮಾಣಿಕವಾಗಿ ಬದುಕಿದ್ದ. ಒಬ್ಬ ಕಳ್ಳ ಆ ಶ್ರೀಮಂತಿಕೆ ಪತ್ತೆ ಹಚ್ಚಿದ. ಹೇಗಾದರೂ ಮಾಡಿ ಈ ಮನೆಯಲ್ಲಿ ಕಳ್ಳತನ ಮಾಡಬೇಕು ಎಂದು ಹೊಂಚು ಹಾಕಿದ. ಹೇಗೆ ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ. ಅದಕ್ಕೆ ಒಂದು ಉಪಾಯ ಮಾಡಿ ಆ ಮನೆಯ ಸೇವಕನ ಸ್ನೇಹ ಸಂಪಾದಿಸಿದ. ಒಂದು ದಿನ ಸೇವಕನಿಗೆ ‘ನಿನ್ನ ಶ್ರೀಮಂತ ನಿನಗೆ ಏನು ಕೊಟ್ಟಿದ್ದಾನೆ. ನೀನು ಇಷ್ಟು ದಿನ ದುಡಿದಿದ್ದೀಯ. ತಿಂಗಳಿಗೆ 2,000 ರೂಪಾಯಿ ಕೊಟ್ಟಿರಬಹುದು, ವರ್ಷಕ್ಕೆ ಒಂದು ಜೊತೆ ಬಟ್ಟೆ ಕೊಟ್ಟಿರಬಹುದು. ಆದರೆ ನೀನು ನನ್ನ ಸ್ನೇಹ ಮಾಡಿದರೆ ನಿನಗೆ ಎರಡು ಲಕ್ಷ ರೂಪಾಯಿ ಕೊಡ್ತೀನಿ’ ಎಂದ. ‘ನಾನು ಏನು ಮಾಡಬೇಕು’ ಎಂದು ಕೇಳಿದ ಸೇವಕ. ಅದಕ್ಕೆ ಕಳ್ಳ ‘ನಿನ್ನ ಶ್ರೀಮಂತನ ಮನೆಯ ಸುತ್ತಲೂ ಇರುವ ಭದ್ರವಾದ ಕೋಟೆಯ ಹಿಂದಿನ ಬಾಗಿಲ ಅಗುಳಿಯನ್ನು ಸ್ವಲ್ಪ ಸರಿಸಿಬಿಡು. ನಿನಗೆ ಎರಡು ಲಕ್ಷ ಕೊಡ್ತೀನಿ’ ಅಂದ. ಸೇವಕನಿಗೂ ಆಸೆ ಆಯಿತು, ಒಪ್ಪಿಕೊಂಡ. ಅದರಂತೆ ಕಳ್ಳ 2 ಲಕ್ಷ ನೀಡಿದ. ಇವ ಹಿಂದಿನ ಬಾಗಿಲ ಚಿಲಕ ಸರಿಸಿದ. ಕಳ್ಳ ಮನೆಯ ಒಳಕ್ಕೆ ಬಂದು ತಿಜೋರಿಯ ಬಾಗಿಲು ತೆಗೆಯಲು ಹೋದ. ಆಗ ಅಲ್ಲಿ ಒಂದು ನಾಯಿ ಇತ್ತು. ಅದು ಕಳ್ಳನನ್ನು ನೋಡಿ ಗುರ್ರ್ ಅಂತು. ಆಗ ಕಳ್ಳ ಒಂದು ಬಿಸ್ಕತ್ ಹಾಕಿದ. ಆದರೂ ನಾಯಿ ಗುರ್ರ್ ಅಂತು. ‘ನಿನಗೆ ಬಿಸ್ಕತ್ ಹಾಕಿದ್ದೇನೆ, ಆದರೂ ಯಾಕೆ ಗುರ್ರ್ ಅಂತಿ’ ಎಂದು ಕಳ್ಳ ಕೇಳಿದ. ಅದಕ್ಕೆ ನಾಯಿ ‘ಹೀಗೆ ಲಂಚ ತೆಗೆದುಕೊಂಡು ಸುಮ್ಮನೆ ಇರಲು ನಾನೇನು ಮನುಷ್ಯನೇ’ ಎಂದು ಕೇಳಿತು. ಅವ ಬ್ರೆಡ್ ಒಗೆದ. ಆಗ ನಾಯಿ ‘ಮನುಷ್ಯನೇ ತಿಳಕೋ, ಅನ್ನ ಉಂಡ ಮನೆಗೆ ಮನುಷ್ಯರು ಕನ್ನ ಹಾಕುತ್ತಾರೆಯೇ ವಿನಾ ನಾಯಿಗಳಲ್ಲ’ ಎಂದಿತು.

ಒಂದು ನಾಯಿ ಹೇಗೆ ಬದುಕುತ್ತದೆ ನೋಡಿ. ಅದಕ್ಕೇ ಮನುಷ್ಯ ಸರಿಯಾಗಿ ಬದುಕುವುದನ್ನು ಕಲಿಯಬೇಕು. ರಾಷ್ಟ್ರೀಯ ಪಕ್ಷಿ ಅಂತ ಇದೆ, ರಾಷ್ಟ್ರೀಯ ಪ್ರಾಣಿ ಅಂತ ಇದೆ. ಒಬ್ಬನನ್ನಾದರೂ ರಾಷ್ಟ್ರೀಯ ಮನುಷ್ಯ ಅಂತ ಮಾಡಿಲ್ಲ ಯಾಕೆ ಅಂತ ಯೋಚನೆ ಮಾಡಬೇಕು. ಈ ಜಗತ್ತಿಗೆ ಬಂದ ಮೇಲೆ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡಿ ಹೋಗುವುದನ್ನು ಕಲಿಯಬೇಕು ಮನುಷ್ಯ. ನಾವು ಹಣ್ಣಾಗದಿದ್ದರೂ ಪರವಾಗಿಲ್ಲ. ಇನ್ನೊಬ್ಬರ ಬದುಕಿಗೆ ಹುಣ್ಣಾಗಬಾರದು. ನಮಗೆ ದೀಪ ಹಚ್ಚುವ ಶಕ್ತಿ, ಮನಸ್ಸು ಇಲ್ಲದಿದ್ದರೂ ಹಚ್ಚಿದ ದೀಪ ಆರಿಸಬಾರದು. ನನಗೆ ಇನ್ನೊಬ್ಬರ ತಟ್ಟೆಯಲ್ಲಿ ಅನ್ನ ಹಾಕಲು ಸಾಧ್ಯವಿಲ್ಲದಿದ್ದರೂ ಇನ್ನೊಬ್ಬರ ಅನ್ನದ ತಟ್ಟೆಗೆ ಮಣ್ಣು ಹಾಕಬಾರದು. ನನಗೆ ಇನ್ನೊಬ್ಬರ ಕಣ್ಣೀರು ಒರೆಸಲು ಸಾಧ್ಯವಿಲ್ಲದಿದ್ದರೂ ಇನ್ನೊಬ್ಬರ ಕಣ್ಣಲ್ಲಿ ನೀರು ಬರಿಸುವ ಕೆಲಸ ಮಾಡಬಾರದು. ಹೀಗೆ ಬದುಕುವುದೇ ನಿಜವಾದ ಜೀವನ. ಕಸದೊಳಗೆ ರಸ ತೆಗೆಯಬೇಕು. ಅದರೊಳಗೆ ನಿಜವಾದ ಅರ್ಥ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.