ಭಾನುವಾರ, ಜೂನ್ 20, 2021
23 °C

ಒಳನೋಟ: ತೋಟದಲ್ಲೂ ಕೊಳೆಯಲಿಲ್ಲ, ರಸ್ತೆಗೂ ಚೆಲ್ಲಲಿಲ್ಲ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕಳೆದ ವರ್ಷದಂತೆ ಈ ಬಾರಿ ದ್ರಾಕ್ಷಿ ಬೆಳೆ ತೋಟದಲ್ಲೇ ಕೊಳೆಯಲಿಲ್ಲ, ರಸ್ತೆಗೂ ಚೆಲ್ಲಲಿಲ್ಲ. ಈಗಿನ ಲಾಕ್‌ಡೌನ್‌ ಜಾರಿಗೂ ಮುನ್ನವೇ ಬಹುತೇಕ ದ್ರಾಕ್ಷಿ ಮಾರುಕಟ್ಟೆ ಸೇರಿತ್ತು.

‘ಲಾಕ್‌ಡೌನ್‌ಗೂ ಮುನ್ನವೇ ಶೇ 75ರಷ್ಟು ಹಣ್ಣು ತೋಟದಿಂದ ಖಾಲಿಯಾಗಿತ್ತು. ಇನ್ನೇನು ಕೊನೆಯ ಹಂತದ ದ್ರಾಕ್ಷಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಯಿತು. ಗ್ರಾಹಕರಿಗೆ ಸಂಜೆಯವರೆಗೆ ಖರೀದಿಸಲು ಅನುಮತಿ ನೀಡದೆ ಇರುವುದರಿಂದ ದ್ರಾಕ್ಷಿಗೆ ದ್ರಾಕ್ಷಿ ಬೆಳೆಗಾರರಿಗೆ ಪೆಟ್ಟು ಬಿದ್ದಿದೆ’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದ್ರಾಕ್ಷಿ ಬೆಳೆಗಾರ ಮುನಿಶಾಮಪ್ಪ.

‘ಈ ಬಾರಿ 500 ಟನ್ ದ್ರಾಕ್ಷಿ ವಹಿವಾಟು ನಡೆಸುವ ಗುರಿ ಇತ್ತು. ಆದರೆ, ತೀವ್ರಗೊಂಡ ಎರಡನೇ ಅಲೆಯಲ್ಲೂ ಈವರೆಗೆ 160 ಟನ್ ದ್ರಾಕ್ಷಿ ಮಾರಾಟವಾಗಿದೆ’ ಎಂದು ಕರ್ನಾಟಕ ರಾಜ್ಯ ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಮ್ಸ್‌) ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಎಸ್.ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು