ಕಳೆದ ಒಂದು ದಶಕದಲ್ಲಿ ದಮನಿತ ಸಮುದಾಯಗಳು 1818ರ ಜನವರಿ 1ರಂದು ನಡೆದಿದ್ದ ಕೋರೆಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸುತ್ತಿವೆ. ಈ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಪ್ರತಿಮೆಯಂತೆ ಕೋರೆಗಾಂವ್ ವಿಜಯೋತ್ಸವದ ಸ್ತಂಭಗಳು ಸ್ಥಾಪನೆಗೊಳ್ಳುತ್ತಿವೆ. ದಮನಿತರೇ ಈ ಆಚರಣೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ‘ಭೀಮಾ ಕೋರೆಗಾಂವ್ ಯುದ್ಧ’ ಅಸ್ಪೃಶ್ಯ ಸಮುದಾಯಗಳನ್ನು ಏಕೆ ಆಕರ್ಷಿಸುತ್ತಿದೆ? ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ಚರಿತ್ರೆಯನ್ನು ಏಕೆ ಕೆದಕಿದರು? ಇಂಗ್ಲಿಷ್ನಲ್ಲಿ ಅಂಬೇಡ್ಕರ್ ಬಗೆಗೆ ಬರುತ್ತಿರುವ ಹೊಸ ಪುಸ್ತಕಗಳಲ್ಲಿ ‘ಕೋರೆಗಾಂವ್’ ವಿದ್ಯಮಾನವನ್ನು ಸಾಮಾನ್ಯ ಸಂಗತಿಯಂತೆ ಉಲ್ಲೇಖಿಸಿ ಮುಂದೆ ಹೋಗುತ್ತಿರುವುದು ಏಕೆ? ಎನ್ನುವುದನ್ನು ಚರ್ಚಿಸಬೇಕಿದೆ.

ಸರಿಯಾಗಿ 207 ವರ್ಷಗಳ ಹಿಂದೆ ಆಂಗ್ಲೊ ಮರಾಠ ಯುದ್ಧ ಸರಣಿಯ ಅಂತಿಮ ಯುದ್ಧವು ಪುಣೆಯ ಬಳಿಯ ಭೀಮಾ ನದಿಯ ದಡದಲ್ಲಿರುವ ಕೋರೆಗಾಂವ್ ಗ್ರಾಮದಲ್ಲಿ ನಡೆಯಿತು. ಈ ಯುದ್ಧದಲ್ಲಿ ಸಿಕ್ಕ ಗೆಲುವು ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಳ್ಳಲು ನಿರ್ಣಾಯಕವಾಗಿತ್ತು. ಹಾಗಾಗಿ ಬ್ರಿಟಿಷರು ಯುದ್ಧದ ಗೆಲುವಿನ ನೆನಪಿಗೆ 65 ಅಡಿ ಎತ್ತರದ ಒಂದು ಯುದ್ಧಸ್ಮಾರಕ (ಒಬೆಲಿಸ್ಕ್) ನಿರ್ಮಿಸಿದರು. ಅದರಲ್ಲಿ 49 ಹೆಸರುಗಳಿದ್ದು, ‘ನಕ್’ ಪ್ರತ್ಯಯಗಳಿಂದ ಕೊನೆಗೊಳ್ಳುವ 22 ಹೆಸರುಗಳನ್ನು ಮಹಾರ್ಗಳೆಂದು ಗುರುತಿಸಲಾಗಿದೆ. ಹಾಗಾಗಿ, ಈ ಯುದ್ಧವು ಮಹಾರ್ ಸೈನಿಕರ ಶೌರ್ಯ ಸಾಹಸದ ಫಲ ಎನ್ನುವ ವಿಶ್ಲೇಷಣೆ ಮುನ್ನೆಲೆಗೆ ಬಂದಿದೆ.

ಬ್ರಿಟಿಷರು 1893ರಲ್ಲಿ ಸೈನ್ಯದಲ್ಲಿ ಮಹಾರ್ರ ನೇಮಕಾತಿಯನ್ನು ನಿಲ್ಲಿಸಿದಾಗ, ಮಹಾರರ ನೇತಾರರಾಗಿದ್ದ ಗೋಪಾಲ ಬಾಬಾ ವಾಲಂಗ್ಕರ್, ಶಿವರಾಜ ಜನಬಾ ಕಾಂಬ್ಳೆ ಮತ್ತು ಬಿ.ಆರ್. ಅಂಬೇಡ್ಕರ್ ಅವರ ತಂದೆ ರಾಮ್ಜಿ ಸಕ್ಪಾಲ್ ಕೊರೇಗಾಂವ್ ಯುದ್ಧದ ಗೆಲುವನ್ನು ಮುನ್ನೆಲೆಗೆ ತಂದು, ಸೈನ್ಯದಲ್ಲಿ ಮಹಾರರನ್ನು ಸೇರಿಸಿಕೊಳ್ಳಲು ಬ್ರಿಟಿಷರಿಗೆ ಮನವಿ ಮಾಡಿದ್ದರು.

ಕೋರೆಗಾಂವ್ ಯುದ್ಧಕ್ಕೂ ಮೊದಲು ಪೇಶ್ವೆಗಳು ಹಿಂದಿನ ಎರಡು ಆಂಗ್ಲೊ–ಮರಾಠ ಯುದ್ಧಗಳಿಂದ ದುರ್ಬಲಗೊಂಡಿದ್ದರು. ಪೇಶ್ವೆಗಳ ಎರಡನೇ ಬಾಜೀರಾವ್ ಮುಂದಾಳತ್ವದ ಪಡೆ 20 ಸಾವಿರ ಅಶ್ವಸೈನ್ಯ, 8 ಸಾವಿರ ಕಾಲಾಳುಗಳನ್ನು ಒಳಗೊಂಡಿತ್ತು. ಅದರಲ್ಲಿ ಅರಬ್ಬರು ಬಹುಸಂಖ್ಯಾತರಾಗಿದ್ದರು. ಬ್ರಿಟಿಷ್ ಕಂಪನಿಯ ಪಡೆ 834 ಸೈನಿಕರನ್ನು ಒಳಗೊಂಡಿತ್ತು. ಅದರಲ್ಲಿ ಬಾಂಬೆ ಸ್ಥಳೀಯ ಪದಾತಿ ದಳದ 1ನೇ ರೆಜಿಮೆಂಟಿನ 2ನೇ ಬೆಟಾಲಿಯನ್ನ ಸುಮಾರು 500 ಸೈನಿಕರು ಸೇರಿದ್ದರು. ಆ ಪಡೆಯನ್ನು ಮಹಾರ್ ಸೈನಿಕರು ಮುನ್ನಡೆಸುತ್ತಿದ್ದರು. ಯುದ್ಧದಲ್ಲಿ ಎರಡನೇ ಬಾಜೀರಾವ್ ಸೋಲನ್ನಪ್ಪಿದ. ಆ ಯುದ್ಧವನ್ನು ಅಂಬೇಡ್ಕರ್ ಅವರು ಪೇಶ್ವೆಗಳ ಬ್ರಾಹ್ಮಣ ಆಳ್ವಿಕೆಯ ವಿರುದ್ಧದ ಮಹಾರ್ಗಳ ಗೆಲುವೆಂದು, ದಮನಿತರ ಚಳವಳಿ ಕಟ್ಟಲು ಸ್ಫೂರ್ತಿಯ ಕಥೆಯನ್ನಾಗಿ ಬಳಸಿದರು.

ಜನವರಿ 1, 1927ರಲ್ಲಿ ಕೋರೆಗಾಂವ್ ಧ್ವಜಸ್ತಂಭದ ಬಳಿ ಆಯೋಜಿಸಿದ ಸಭೆಯಲ್ಲಿ ಅಂಬೇಡ್ಕರ್ ಭಾಗವಹಿಸಿದ ಫೋಟೊ ಲಭ್ಯವಿದೆ. ಅದರಲ್ಲಿ ಐದಾರು ಚಿಕ್ಕ ಮಕ್ಕಳನ್ನು ಒಳಗೊಂಡಂತೆ 40 ಜನರಿದ್ದಾರೆ. ಆ ದಿನ ಅಂಬೇಡ್ಕರ್ ಭಾಷಣ ಮಾಡುತ್ತಾರೆ. ಅದರಲ್ಲಿ ಪೇಶ್ವೆ ಕಾಲದಲ್ಲಿ ಅಸ್ಪೃಶ್ಯರು ಅನುಭವಿಸಿದ ಶೋಷಣೆಯನ್ನು ನೆನೆದು, ಇದು ಬ್ರಾಹ್ಮಣ್ಯದ ವಿರುದ್ಧದ ಮಹಾರರ ಗೆಲುವು ಎಂದು ಹೇಳಿದ್ದಾರೆ. ಅದಾದ ನಂತರ 1931–32ರ ರೌಂಡ್ ಟೇಬಲ್ ಕಾನ್ಫರೆನ್ಸ್ಗೆ ಹೋದಾಗ ಬರೆದರು ಎನ್ನುವ ‘ಅಸ್ಪೃಶ್ಯರು ಮತ್ತು ಬ್ರಿಟಿಷ್ ಆಳ್ವಿಕೆ’ ಎನ್ನುವ ದೀರ್ಘ ಬರಹದಲ್ಲಿ ಕೋರೆಗಾಂವ್ ಯುದ್ಧದ ಬಗ್ಗೆ ಆಳವಾದ ಅಧ್ಯಯನ ಮಾಡಿ, 1859ರಲ್ಲಿ ನೇಮಕವಾದ ಪೀಲ್ ಕಮಿಷನ್ ವರದಿಯಲ್ಲಿ ಮಾರ್ಕೆಸ್ ಟ್ವೇಡ್ ಡೇಲ್ ಅವರು ಭಾರತದ ಸೈನ್ಯದ ಪುನರ್ ರಚನೆಯ ಸಂದರ್ಭದಲ್ಲಿ ಕೋರೆಗಾಂವ್ ಯುದ್ಧದಲ್ಲಿ ಮಹಾರರ ಕೊಡುಗೆಯನ್ನು ನೆನಪಿಸಿಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ.

ಬ್ರಿಟಿಷ್ ಸೈನ್ಯದಲ್ಲಿದ್ದ ಮಹಾರಾಷ್ಟ್ರದ ಮಹಾರ್ಗಳು, ತಮಿಳುನಾಡಿನ ಪರೈಗಳನ್ನು ಒಳಗೊಂಡಂತೆ ಅಸ್ಪೃಶ್ಯರು, ಬ್ರಿಟಿಷರ ಗೆಲುವಿಗೆ ಕಾರಣವಾದದ್ದನ್ನು ಅಂಬೇಡ್ಕರ್ ವಿಶ್ಲೇಷಿಸುತ್ತಾರೆ. ಬ್ರಿಟಿಷರಿಂದ ಅಸ್ಪೃಶ್ಯ ಸಮುದಾಯಗಳಿಗೆ ಅನ್ಯಾಯವಾದಾಗಲೆಲ್ಲ ಕೋರೆಗಾಂವನ್ನು ಮುನ್ನೆಲೆಗೆ ತರುತ್ತಾರೆ. 1938ರಿಂದ 1941ರ ಅವಧಿಯಲ್ಲಿ ಮಾಡಿದ ಮೂರು ಸಾರ್ವಜನಿಕ ಭಾಷಣಗಳಲ್ಲಿ ಕೋರೆಗಾಂವ್ ಕದನವನ್ನು ನೆನೆಯುತ್ತ, ಯಾರಿಗೆ ದೇಶವನ್ನು ದೊರಕಿಸಿ ಕೊಟ್ಟೆವೋ ಅವರೇ ನಮ್ಮನ್ನು ಒದೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಆನಂದ ತೇಲ್ತುಂಬ್ಡೆ ಅವರು ಚಳವಳಿಯನ್ನು ಕಟ್ಟಲು ಅಂಬೇಡ್ಕರ್ ಕೋರೆಗಾಂವ್ ಕದನವನ್ನು ಮುನ್ನೆಲೆಗೆ ತಂದದ್ದನ್ನು ಗೌರವಿಸುತ್ತಲೇ, ‘ಅದು ಜಾತಿ ಶೋಷಣೆಯ ಅರಿವು ಮೂಡದ ಕಾಲದ ಎರಡು ಪ್ರಭುತ್ವಗಳ ವಿರುದ್ಧದ ಹೋರಾಟವಾಗಿತ್ತು. ಹಾಗಾಗಿ, ಕೋರೆಗಾಂವ್ ಕದನದ ನೆಪದಲ್ಲಿ ಹುಟ್ಟಿದ ಆಧಾರರಹಿತ ಮೌಖಿಕ ನಿರೂಪಣೆಗಳನ್ನು ಜಾತಿ ಶ್ರೇಣೀಕರಣ ವಿರುದ್ಧದ ಹೋರಾಟದ ಚಾರಿತ್ರಿಕ ಆಕರವಾಗಿ ಬಳಸುವುದು ತಪ್ಪು’ ಎನ್ನುತ್ತಾರೆ. ಸೂಕ್ಷ್ಮವಾದ ಈ ಎಚ್ಚರವನ್ನು ಇಟ್ಟುಕೊಂಡೇ ಕೋರೆಗಾಂವ್ ನೆನಪನ್ನು ಅಸ್ಪೃಶ್ಯರ ಧೈರ್ಯ, ಕೆಚ್ಚು, ಸಾಹಸದ ಚಾರಿತ್ರಿಕ ಗುರುತಾಗಿ ಕಾಣಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.