ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಬಿಜೆಪಿ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ’ಯು ಪೊಲೀಸ್ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯಿತು; ಹಿಂದುತ್ವ ಪರವಾದ ಸಾವಿರಾರು ಕಾರ್ಯಕರ್ತರ ಶಕ್ತಿ ಪ್ರದರ್ಶನಕ್ಕೂ ಮೆರವಣಿಗೆ ಸಾಕ್ಷಿಯಾಯಿತು ಎನ್ನುವ ವರದಿ (ಪ್ರ.ವಾ., ಸೆಪ್ಟೆಂಬರ್ 11) ಓದಿದೆ. ತಕ್ಷಣ ನೆನಪಾದುದು: ‘ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು’ ಎನ್ನುವ ಶಿವರಾಮ ಕಾರಂತರ ಮಾತು. ದೇವರು– ಧರ್ಮಗಳ ವಿಷಯದಲ್ಲಿ ನಾವು ತಲಪಿರುವ ಅಧಃಪತನವನ್ನೂ ಮದ್ದೂರಿನ ವಿದ್ಯಮಾನ ಸೂಚಿಸುತ್ತಿರುವಂತಿದೆ.

ಕೌಟುಂಬಿಕ ಹಬ್ಬವಾಗಿದ್ದ ವಿಘ್ನೇಶ್ವರನ ವ್ರತವನ್ನು ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕರು, ಜನರ ಸಂಘಟನೆಯ ಅಸ್ತ್ರವಾಗಿ ಬಳಸಿಕೊಂಡರು. ಗಣೇಶೋತ್ಸವವನ್ನು ಸಾರ್ವಜನಿಕ ಉತ್ಸವವನ್ನಾಗಿ ರೂಪಿಸುವುದರಲ್ಲಿ ತಿಲಕರು ಯಶಸ್ವಿಯೂ ಆದರು. ಸ್ವಾತಂತ್ರ್ಯಾನಂತರವೂ ಆ ಉತ್ಸವ ದೇಶದಾದ್ಯಂತ ವ್ಯಾಪಿಸಿ, ನಮ್ಮ ಸಮಾಜದ ಸಂಭ್ರಮ ಹಾಗೂ ಭಾವೈಕ್ಯತೆಗೆ ಪೂರಕವಾಗಿ ಜನಪ್ರಿಯತೆ ಪಡೆದುಕೊಂಡಿತು. ಆದರೆ, ಇತ್ತೀಚೆಗೆ ಅದು ಸಮಾಜದ ವಿಭಜನೆಗೆ, ಕೋಮುಗಲಭೆಗೆ ಹಾಗೂ ರಾಜಕೀಯ ಹಿತಾಸಕ್ತಿಗಳಿಗೆ ಬಳಕೆಯಾಗುತ್ತಿದೆ. ಈ ಬೆಳವಣಿಗೆ ದುರದೃಷ್ಟಕರ ಹಾಗೂ ಎಲ್ಲರ ಮುದ್ದಿನ ಗಣೇಶನಿಗೆ ಎಸಗುತ್ತಿರುವ ಅವಮಾನ.

ಜನರ ವೈಯಕ್ತಿಕ ಹಾಗೂ ಸಾಮುದಾಯಿಕ ವಿಘ್ನಗಳು ನಿವಾರಣೆಯಾಗಲು, ವಿದ್ಯಾಬುದ್ಧಿಗಳನ್ನು ದಯಪಾಲಿಸಲು ಗಣೇಶನನ್ನು ಭಕ್ತಿಯಿಂದ ಭಜಿಸುವ, ತನ್ಮೂಲಕ ಆತ್ಮವಿಶ್ವಾಸ ಮತ್ತು ತೃಪ್ತಿಯನ್ನು ಹೊಂದುವ ಆಚರಣೆಯ ಮೂಲ ಉದ್ದೇಶ ಮರೆಯಾಗಿದೆ. ಪ್ರಸ್ತುತ, ಈ ಹಬ್ಬವು ಯುವಪೀಳಿಗೆಯ ಸ್ವೇಚ್ಛಾಚಾರಕ್ಕೆ ಮತ್ತು ರಾಜಕಾರಣಿಗಳ ದ್ವೇಷ ಸಾಧನೆಗೆ ಹೇತುವಾಗಿ ಪರಿಣಮಿಸಿರುವಂತಿದೆ.

‘ಇನ್ನೊಬ್ಬರ ಮೇಲೆ ದ್ವೇಷ ಸಾಧಿಸುವುದು, ನಾವು ವಿಷ ಕುಡಿದು ಅವರು ಸಾಯಲಿ ಎಂದು ಕಾಯುತ್ತಾ ಕುಳಿತಂತೆ’ ಎಂಬ ಬುದ್ಧನ ಸತ್ಯವಚನವನ್ನು ಈ ಜನರಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಅಲ್ಲಮಪ್ರಭುವಿನ, ‘ಭಕ್ತಿ ಎಂಬುದು ತೋರಿ ಉಂಬುವ ಲಾಭ, ಗುಹೇಶ್ವರನೆಂಬುದು ಮೀರಿದ ಘನವು’ ಎಂಬ ಮಾತು ಇಂದಿನ ಈ ಕ್ಷುಲ್ಲಕ ರಾಜಕೀಯವನ್ನು ಮನಗಾಣಿಸುವಂತಿದೆ. ಇದನ್ನು ಹಿಂದೂ ಧರ್ಮವನ್ನು ಕಾಪಾಡುವ ಕಾಯಕ ಎಂದಾಗಲೀ, ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಉಜ್ಜುಗ ಎಂದಾಗಲೀ, ಕರ್ನಾಟಕದಲ್ಲಿ ಸೌಹಾರ್ದತೆಯನ್ನು ನೆಲೆಗೊಳಿಸುವ ಸದುದ್ದೇಶದ ಆಯೋಜನೆ ಎಂದಾಗಲೀ ಸಮಾಜದ ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಯಾರಾದರೂ ಹೇಳಲು ಸಾಧ್ಯವೆ?

‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆಯಂತೆ ಸಮಾಜದ ಶಾಂತಿಯನ್ನು ಕದಡಿ ಹಿಂಸಾಕಾಂಡದ ಸೃಷ್ಟಿಗೆ ಕಾರಣವಾಗುವ ವಿವಿಧ ಹೆಸರುಗಳಲ್ಲಿ ನಡೆಯುವ ‘ಚಲೊ’ ಕಾರ್ಯಕ್ರಮಗಳು ಅನಪೇಕ್ಷಣೀಯ. ‘ನೇಪಾಳದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು
ಅಲ್ಲಿನ ಯುವಜನ ಯತ್ನಿಸಿದಂತೆ ನೀವೂ ನಿಮಗೆ ಬೇಕಾದ ಸರ್ಕಾರವನ್ನು ಆಡಳಿತಕ್ಕೆ ತರಬಹುದು’ ಎಂಬ ಮಾಜಿ ಸಂಸದರೊಬ್ಬರ ಅಪ್ರಬುದ್ಧ ಕರೆಯಂತೂ ಶೋಚನೀಯ.

ಯಾರೋ ಅರಿವುಗೇಡಿಗಳು, ನೀಚರು, ದ್ವೇಷಾಸೂಯ ಗುಣವುಳ್ಳವರು ಕಲ್ಲೆಸೆದರು ಎಂದಮಾತ್ರಕ್ಕೆ ಇಷ್ಟೊಂದು ರಣರಂಗವನ್ನು ಉಂಟು ಮಾಡುವುದು ಸಮರ್ಥನೀಯವಲ್ಲ. ಪುಂಡರನ್ನು ಬಂಧಿಸಿ, ಸೂಕ್ತ ಶಿಕ್ಷೆಗೆ ಗುರಿಪಡಿಸುವುದು ಪ್ರಜಾಸತ್ತಾತ್ಮಕ ಕ್ರಮ. ಆ ಕ್ರಮಕ್ಕೆ ಒತ್ತಾಯಿಸುವುದು ಪ್ರಜ್ಞಾವಂತರ ಕರ್ತವ್ಯ. ಸಮುದಾಯಗಳ ನಡುವೆ ಸಾಮರಸ್ಯ ಕಾಪಾಡುವುದು ರಾಜಕಾರಣಿಗಳ ಹೊಣೆಗಾರಿಕೆ. ‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು’ ಎನ್ನುವಂತೆ, ದ್ವೇಷದ ಪ್ರಚೋದನೆಗಳು ಖಂಡನೀಯ.

ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಪೊಲೀಸ್ ಇಲಾಖೆ ಇದೆ, ಹಲವು ರೀತಿಯ ತನಿಖಾ ಸಂಸ್ಥೆಗಳಿವೆ, ಕಾನೂನು ಇದೆ, ನ್ಯಾಯಾಂಗವಿದೆ. ನ್ಯಾಯಾಂಗವಲ್ಲದೆ ಬೇರೆ ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದೆಂದು ಹೇಳಬೇಕಾದವರೇ ಅರಾಜಕತೆಗೆ ಆಮಂತ್ರಣ ಕೊಟ್ಟರೆ, ದ್ವೇಷದ ಕಾಳ್ಗಿಚ್ಚನ್ನು ನಂದಿಸಲಾದೀತೆ? ಜಾತ್ಯತೀತ ನೀತಿಯನ್ನು ಬದಿಗೊತ್ತಿ ಮತೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಅಸಾಂವಿಧಾನಿಕ ಎನ್ನುವುದನ್ನು ಜನಪ್ರತಿನಿಧಿಗಳು ಮರೆತಿರುವಂತಿದೆ.

ಹಸಿವು, ಅಪೌಷ್ಟಿಕತೆ, ಮಹಿಳೆಯರ ಮೇಲಿನ ದೌರ್ಜನ್ಯ, ನಿರುದ್ಯೋಗ, ಶೈಕ್ಷಣಿಕ ಅಸಮಾನತೆ, ದುಬಾರಿ ವೈದ್ಯಕೀಯ ವ್ಯವಸ್ಥೆ, ಔಷಧಗಳ ಮಾಫಿಯಾ, ರೈತರ ನೂರಾರು ಸಮಸ್ಯೆಗಳು, ಮೂಢನಂಬಿಕೆಗಳ ಆರ್ಭಟ, ವಿರಾಟ್ ಸ್ವರೂಪದ ಭ್ರಷ್ಟಾಚಾರ, ಅರಣ್ಯವಾಸಿಗಳ ಬಗೆಗಿನ ಅನಾದರ, ಸಾಮಾನ್ಯನ ಪಾಲಿಗೆ ಉರುಳಾಗಿರುವ ಬೆಲೆಯೇರಿಕೆ, ಬಡತನ, ಆಹಾರ–ಔಷಧಗಳ ಅಪಾಯಕಾರಿ ಕಲಬೆರಕೆ ಸೇರಿದಂತೆ ನೂರಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಆ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕಾದವರು, ಸಮಸ್ಯೆಗಳೇ ಅಲ್ಲದವುಗಳನ್ನು ಸಮಸ್ಯೆಗಳನ್ನಾಗಿ ಸೃಷ್ಟಿಸಿ ಸಮಾಜವನ್ನು ರೋಗಗ್ರಸ್ತವನ್ನಾಗಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.