ಜನರ ಜೊತೆಗೆ ಮನೆ ಹಾಗೂ ಜಾತಿ ಮಾಹಿತಿ ಸಂಗ್ರಹ ಮುಂಬರುವ ಗಣತಿಯಲ್ಲಿ ನಡೆಯಲಿದೆ. ಹೊಸ ಧರ್ಮ–ಬುಡಕಟ್ಟನ್ನು ದಾಖಲಿಸುವ ಗಣತಿಯೂ ಆಗಲಿದೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ‘ಸೆಕ್ಯುಲರ್’ ಶಬ್ದಕ್ಕೆ ಧರ್ಮನಿರಪೇಕ್ಷತೆ ಎಂದರ್ಥ. ಇದು ಸಾರ್ವಜನಿಕ ಆಡಳಿತದಲ್ಲಿ ಇರಬೇಕು ಎನ್ನುವುದು ಆಶಯ. ಅದನ್ನು ‘ಜಾತಿ’ (ಕಾಸ್ಟ್) ಎನ್ನುವ ದೃಷ್ಟಿಯಲ್ಲಿ ನೋಡುವುದಲ್ಲದೆ, ಇದಕ್ಕೆಲ್ಲ ಬ್ರಿಟಿಷರೇ ಕಾರಣ ಎನ್ನುವ ವಾಟ್ಸ್ಆ್ಯಪ್ ನಿರೂಪಣೆ ಸದ್ಯ ಚಾಲ್ತಿಯಲ್ಲಿದೆ. ಭಾರತದ ಜಾತಿ ವ್ಯವಸ್ಥೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಾತಿಗಳನ್ನು ನಿಂದಿಸುವ ಮತ್ತು ಪ್ರಶಂಸಿಸುವ ನೂರಾರು ಗಾದೆಗಳು ನಮ್ಮಲ್ಲಿ ಇವೆ.

ರಾಮಾಯಣದಲ್ಲಿ ಶೂದ್ರ ಶಂಬೂಕ ತಪಸ್ಸು ಮಾಡಿ ಯುಗಧರ್ಮ ಮೀರಿದ್ದಕ್ಕೆ ರಾಮನಿಂದ ಹತನಾಗುತ್ತಾನೆ. ಮಹಾಭಾರತದಲ್ಲಿ ಗುರು ದ್ರೋಣನಿಗೆ ಏಕಲವ್ಯ ಹೆಬ್ಬೆರಳನ್ನು ದಕ್ಷಿಣೆಯಾಗಿ ನೀಡುತ್ತಾನೆ. ಪರಶುರಾಮನಿಂದ ಕರ್ಣ ಶಾಪಕ್ಕೆ ತುತ್ತಾಗುತ್ತಾನೆ. ಅನೇಕ ಬಾರಿ ಆತ ಜಾತಿನಿಂದನೆಗೆ ಒಳಗಾಗುತ್ತಾನೆ. ‘ಮೀಂಗುಲಿಗ’ ಎನ್ನುವ ಹೀಯಾಳಿಕೆಗೆ ಕರ್ಣ ಮತ್ತೆ ಮತ್ತೆ ಗುರಿಯಾಗುತ್ತಾನೆ. ಅಂದರೆ, ನಮ್ಮದು ಮೂಲದಲ್ಲಿಯೇ ಜಾತಿ ಆಧಾರಿತ ಸಮಾಜ. ಬಸವಣ್ಣನ ಕಾಲದಲ್ಲಿ ವರ್ಣಸಂಕರವೇ ಕಲ್ಯಾಣದ ಕ್ರಾಂತಿಗೆ ಕಾರಣವಾಗುತ್ತದೆ. ಜಾತಿವಿನಾಶ ಪ್ರಯತ್ನಕ್ಕೆ ಜಾತಿವಾದಿಗಳು ಆಗ ಬಹುದೊಡ್ಡ ಪೆಟ್ಟು ಕೊಟ್ಟರು. ಒಟ್ಟಾರೆ ದೇಶ ಎಂದರೆ ಜನ. ಜನ ಅಂದರೆ ಜಾತಿ. ಹಾಗಾಗಿ ಇಲ್ಲಿ ಜಾತಿಯೇ ವಾರಸುದಾರ, ಜಾತಿಯೇ ಪಾಲುದಾರ. ಜಾತಿ ಜನಸಂಖ್ಯೆಗೆ ಅನುಸಾರ ಅವಕಾಶದ ಪಾಲು ಹಂಚಿಕೆ ಆಗಬೇಕು. ಅಂದರೆ, ಜಾತಿವಾರು ಲೆಕ್ಕ ಪಕ್ಕಾ ಆಗಬೇಕು.

ಜಾತಿಗಣತಿಯನ್ನು 1931ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿತು. ಅದೇ ಅಂಕಿಅಂಶದ ಆಧಾರದ ಮೇಲೆ ಈಗಲೂ ಜಾತಿ ಲೆಕ್ಕಾಚಾರವನ್ನು ಮಾಡುತ್ತಿದ್ದೇವೆ. ಆ ತಪ್ಪನ್ನು ತಪ್ಪಿಸಲು ಪ್ರಸಕ್ತ ಗಣತಿ ಮುಖ್ಯ ಆಗಬಹುದು ಎನ್ನುವ ನಿರೀಕ್ಷೆ ಇದೆ. ಭಾರತದ ವೈಸರಾಯ್ ಲಾರ್ಡ್ ಮೇಯೊ ಜಾರಿ ಮಾಡಿದ ಅನೇಕ ಆಡಳಿತಾತ್ಮಕ ಸುಧಾರಣೆಗಳಲ್ಲಿ ಜನಗಣತಿಯೂ ಒಂದು. ಆತ 1872ರಲ್ಲಿ ಮೊದಲ ಬಾರಿಗೆ ಜನಗಣತಿ ಮಾಡಿಸಿದ. ನಂತರ ಲಾರ್ಡ್ ರಿಪ್ಪನ್ 1881ರಲ್ಲಿ ಜನಗಣತಿ ಮಾಡಿಸಿದ. ದಶಕಕ್ಕೊಮ್ಮೆ ಗಣತಿಯನ್ನು ಮಾಡಬೇಕು ಎನ್ನುವ ನಿಯಮವನ್ನೂ ರಿಪ್ಪನ್ ರೂಪಿಸಿದ. ಆ ಪದ್ಧತಿ 2011ರವರೆಗೂ ನಡೆದುಕೊಂಡು ಬಂದಿತ್ತು. 2021ರಲ್ಲಿ ಕೋವಿಡ್ ಕಾರಣಕ್ಕೆ ಗಣತಿ ಮಾಡಲು ಆಗಲಿಲ್ಲ. ಈ ವರ್ಷ ಜನಗಣತಿ ಜೊತೆಗೆ ಜಾತಿ ಮತ್ತು ಮನೆ ಗಣತಿ ನಡೆಸಲೂ ಸರ್ಕಾರ ಮುಂದಾಗಿದೆ.

ವೃತ್ತಿಯಾಧಾರಿತ ಜಾತಿ ಇಂದೂ ಅನೇಕ ಉದ್ಯೋಗ ಗಳಿಗೆ ಕಾರಣವಾಗಿದೆ. ಸರ್ಕಾರದ ಯೋಜನೆಯನ್ನು ಪರಿಣಾಮಕಾರಿ ಯಾಗಿ ರೂಪಿಸಲು ಈ ವಿವರವೇ ಆಧಾರ. ಮಾತ್ರವಲ್ಲದೆ, ಒಂದು ಜಾತಿ, ಉಪಜಾತಿ, ಲಿಂಗ, ಆರ್ಥಿಕ ಸ್ಥಿತಿಗತಿ, ಧರ್ಮಗಳ ದತ್ತಾಂಶವು ಕಲ್ಯಾಣ ಕಾರ್ಯಗಳ ಅನುಷ್ಠಾನಕ್ಕೆ ಬೇಕಾಗುತ್ತದೆ. ಈ ಕಾರಣಕ್ಕೆ ‘ಜಾತಿ ಣತಿ’ ತಮ್ಮ ಮೊದಲ ಆದ್ಯತೆ ಎಂದು ವಿರೋಧ ಪಕ್ಷ ಆಂದೋಲನವನ್ನೇ ನಡೆಸಿತ್ತು. ಅದನ್ನು ಕೇಂದ್ರ ಸರ್ಕಾರ ಸವಾಲಾಗಿ ತೆಗೆದುಕೊಂಡು ‘ಜಾತಿ ಜನ ಗಣತಿ’ಯನ್ನು ಮಾಡುತ್ತಿದೆ. ಅದಕ್ಕೆ ಏಪ್ರಿಲ್ 1, 2026ರಿಂದ ಮಾರ್ಚ್ 31, 2027ರ ಗಡುವು ನೀಡಿದೆ. ಈ ಬಾರಿ ಡಿಜಿಟಲ್ ರೂಪದಲ್ಲೂ ಜಾತಿ–ಜನ ಎಣಿಕೆಯನ್ನು ಮಾಡಲಾಗುತ್ತದೆ. ಎರಡು ಹಂತದಲ್ಲಿ ಎಣಿಕೆ ಕಾರ್ಯ ಕೈಗೊಳ್ಳುವ ಸರ್ಕಾರ ಮೊದಲು ಗೃಹ ಘಟಕಗಳನ್ನು ಎಣಿಸಿ, ನಂತರ ಜನರ ಎಣಿಕೆಯನ್ನು ಮಾಡುತ್ತಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಸುತ್ತಿನ ಎಣಿಕೆ ಕಾರ್ಯ ನಡೆಯಲಿದೆ. ಸ್ವಯಂ ಪ್ರೇರಿತವಾಗಿಯೂ ಜಾತಿಗಣತಿ ಪ್ರಕ್ರಿಯೆಯಲ್ಲಿ ಜನ ಭಾಗಿಯಾಗುವ ಅವಕಾಶವನ್ನೂ ಕೊಟ್ಟಿದೆ. ಇದರ ಉಸ್ತುವಾರಿಯನ್ನು ಕೇಂದ್ರ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ನೋಡಿಕೊಳ್ಳಲಿದೆ. ಗಣತಿ ಕಾರ್ಯಕ್ಕೆ ರೂಪಿಸಲಾಗಿರುವ ಪ್ರಶ್ನಾವಳಿಯಲ್ಲಿ ದೋಷಗಳಿವೆ. ಅದನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ಮಾಡಿಲ್ಲ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಜಾತಿಗಣತಿ ಸಂವಿಧಾನ ಬದ್ಧವಾಗಿದ್ದು, ಜಾತಿ ಆಧಾರಿತ ಸಮಾಜದಲ್ಲಿ ಆಗಬೇಕಾದ ಮೂಲ ಕಾರ್ಯದಲ್ಲಿ ಒಂದಾಗಿದೆ. 1948ರ ಜನಗಣತಿ ಕಾಯ್ದೆಗೆ 1994ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ಅದರ ಅನುಸಾರ ಮೊದಲ ಜಾತಿಗಣತಿ ಪ್ರಕ್ರಿಯೆ ಈಗ ನಡೆಯಲಿದೆ.

ಪ್ರಸಕ್ತ ‘ಜಾತಿ ಜನಗಣತಿ’ಯಲ್ಲಿ ಅಸ್ಸಾಂನ ಬೋಡೊ ಸಮುದಾಯದ ಬಾಥೌಯಿಸಂ ಧರ್ಮದ ಗಣನೆಗೆ ಮನ್ನಣೆ ಸಿಕ್ಕಿದೆ. ಕರ್ನಾಟಕದಲ್ಲಿ ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಮನ್ನಣೆ ನೀಡಬೇಕೆಂಬ ಬೇಡಿಕೆ ಇದ್ದರೂ, ಅದಕ್ಕೆ ಮನ್ನಣೆ ನೀಡಿಲ್ಲ. ಆ ಸಮುದಾಯ ‘ಇತರೆ’ ವಿಭಾಗದಲ್ಲಿ ಲಿಂಗಾಯತ ಧರ್ಮವನ್ನು ನಮೂದಿಸಬೇಕು ಎಂದು ಜಾಗೃತಿ ಮೂಡಿಸು ತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೆಲಸಿರುವ ಶೋಪೇನ್ ಎನ್ನುವ ಬುಡಕಟ್ಟು ಇದೇ ಮೊದಲ ಬಾರಿಗೆ ಸರ್ಕಾರಿ ಅಂಕಿಅಂಶಕ್ಕೆ ಸೇರುತ್ತಿದೆ. ಇದರ ಹೊರತಾಗಿ ಇನ್ನಷ್ಟು ಹೊಸ ಜಾತಿ–ಮತಗಳು ಮುನ್ನೆಲೆಗೆ ಬರಬಹುದು. ಈ ಎಲ್ಲ ಕಾರಣಕ್ಕೆ ಜಾತಿಗಣತಿ ಅತ್ಯಂತ ಮಹತ್ವ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.