ಕಳಪೆ ಗುಣಮಟ್ಟದ ಔಷಧಗಳಿಂದ ದೇಶದಾದ್ಯಂತ ದುರ್ಘಟನೆಗಳು ಸಂಭವಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅದರಂತೆ, ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬಾಣಂತಿಯರ ಸರಣಿ ಸಾವಿಗೆ ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾದ ಕಳಪೆ ಗುಣಮಟ್ಟದ ಔಷಧ ಕಾರಣ ಎಂಬ ಪ್ರಾಥಮಿಕ ವರದಿಯು ಗಾಢ ವಿಷಾದಕ್ಕೆ ಕಾರಣವಾಗಿದೆ.

‘ಹರ ಕೊಲ್ಲಲ್ ಪರ ಕಾಯ್ವನೇ’ ಎಂಬ ಮಾತಿದೆ. ಆದರೆ ರೋಗರುಜಿನ ಗಳಿಂದ ನಮ್ಮನ್ನು ಕಾಯಲು ಇರುವ ಔಷಧಗಳಿಂದಲೇ ನಾವು ಸಂಕಷ್ಟಕ್ಕೀಡಾದಾಗ ‘ನೀವು ಅದನ್ನು ತಡೆಯುತ್ತಿಲ್ಲವೇಕೆ?’
ಎಂಬ ಪ್ರಶ್ನೆ ಕೇಳಿಬರುತ್ತದೆ. ಆದರೆ ಇದಕ್ಕೆ ಉತ್ತರ ಸರಳವಲ್ಲ. ಭಾರತದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ– 1940ರ ವಿಶಿಷ್ಟ ನಿಯಮಗಳ ಅನುಸಾರ, ಒಂದು ಸಂಸ್ಥೆ ತಯಾರಿಸುವ ಔಷಧಗಳ ಗುಣಮಟ್ಟದ ತಪಾಸಣೆಯನ್ನು ಅದರ ಉತ್ಪಾದನಾ ಘಟಕ ಇರುವ ರಾಜ್ಯದ ಔಷಧ ಪರಿವೀಕ್ಷಕರು ಮಾತ್ರ ನಡೆಸಬೇಕಾಗುತ್ತದೆ. ಆದರೆ ಆ ಸಂಸ್ಥೆಯು ದೇಶದಾದ್ಯಂತ ಯಾವುದೇ ರಾಜ್ಯದಲ್ಲಿ ತನ್ನ ಔಷಧಗಳನ್ನು ಮಾರಾಟ ಮಾಡಬಹುದು. ಹೀಗಾಗಿ, ಹೊರ ರಾಜ್ಯಗಳಿಂದ ಬರುವ ಕಳಪೆ ಗುಣಮಟ್ಟದ ಔಷಧಗಳ ಮಾರಾಟವನ್ನು ತಡೆಯಲು ಕರ್ನಾಟಕದಂತಹ ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ. ಹಿಂದಿನ ಮೂರು ವರ್ಷಗಳಲ್ಲಿ ನಮ್ಮ ರಾಜ್ಯದ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ಹೊರರಾಜ್ಯಗಳ 894 ಮಾದರಿಗಳಲ್ಲಿ 601 ಔಷಧದ ಮಾದರಿಗಳು ಪರೀಕ್ಷೆಯಲ್ಲಿ ವಿಫಲವಾಗಿವೆ.

ಇಂತಹ ಔಷಧಗಳನ್ನು ತಡೆಯಲು ನಮಗಿರುವ ಏಕೈಕ ನಿಯಂತ್ರಣಾ ಸಾಧನವೆಂದರೆ, ಸಂಬಂಧಿಸಿದ ಫಾರ್ಮಾ ಕಂಪನಿಯನ್ನು ಕಾನೂನು ವಿಚಾರಣೆಗೆ ಒಳಪಡಿಸುವುದು. ಆದರೆ ಕಾನೂನು ಪ್ರಕ್ರಿಯೆಯ ಕಾಲವ್ಯಾಪ್ತಿ ಎಲ್ಲರಿಗೂ ತಿಳಿದಿರುವಂತಹದ್ದೇ. ಫಾರ್ಮಾ ಕಂಪನಿಯ ಮೇಲೆ ಪ್ರಕರಣ ದಾಖಲಿಸಿದರೂ ವಿಚಾರಣೆ ಬಾಕಿಯಿರುವಾಗ, ಆ ಕಂಪನಿಯು ರಾಜ್ಯದೊಳಗೆ ತನ್ನ ಔಷಧಗಳ ತಯಾರಿಕೆ ಮತ್ತು ಮಾರಾಟವನ್ನು ಮುಂದುವರಿಸಬಹುದಾಗಿದೆ.

ಫಾರ್ಮಾ ಕಂಪನಿಗಳ ತವರು ರಾಜ್ಯಗಳಲ್ಲಿರುವ ಡ್ರಗ್ ಇನ್ಸ್ಪೆಕ್ಟರ್ಗಳು ಮಾತ್ರ ಉತ್ಪಾದನಾ ಪರವಾನಗಿ
ಗಳನ್ನು ರದ್ದು ಮಾಡಬಹುದು ಅಥವಾ ಅಮಾನತು ಗೊಳಿಸಬಹುದು. ಪ್ರಸ್ತುತ, ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಅಥವಾ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮಕ್ಕೂ (ಕೆಎಸ್ಎಂಎಸ್ಸಿಎಲ್) ಹೊರರಾಜ್ಯಗಳ ಔಷಧ ತಯಾರಕರ ಪೂರ್ವಾಪರ ಗಳನ್ನು ಪರಿಶೀಲಿಸಲು ಯಾವುದೇ ಮಾರ್ಗವಿಲ್ಲ.

ಆದಕಾರಣ, ಕೇಂದ್ರ ಮತ್ತು ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು ತಮ್ಮ ತಮ್ಮ ಪರೀಕ್ಷಾ ಫಲಿತಾಂಶ ಗಳನ್ನು ಕೇಂದ್ರೀಕೃತ ಡೇಟಾಬೇಸ್ನಲ್ಲಿ ಎಲ್ಲರಿಗೂ ಲಭ್ಯವಾಗಿಸಬೇಕು. ಆಗ, ಯಾವುದೇ ರಾಜ್ಯದ ಡ್ರಗ್ ಇನ್ಸ್ಪೆಕ್ಟರ್ ಅಥವಾ ಖರೀದಿ ಅಧಿಕಾರಿಗೆ ಫಾರ್ಮಾ ಕಂಪನಿಯ ಯಾವುದೇ ಒಂದು ಔಷಧಿ ದೇಶದಾದ್ಯಂತ ಸರ್ಕಾರಿ ಪ್ರಯೋಗಾಲಯಗಳ ಔಷಧ ಪರೀಕ್ಷೆಯಲ್ಲಿ ಎಷ್ಟು ಬಾರಿ ವಿಫಲವಾಗಿದೆ ಎಂಬುದನ್ನು ತಕ್ಷಣ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದಲ್ಲದೆ, ಎಲ್ಲಾ ರಾಜ್ಯಗಳ ಡ್ರಗ್ ಇನ್ಸ್ಪೆಕ್ಟರ್ಗಳು ತಮ್ಮ ರಾಜ್ಯಗಳ ಔಷಧ ತಯಾರಕರ ಪರೀಕ್ಷಾ ವರದಿಗಳು ಮತ್ತು ಪರವಾನಗಿ ಮಾಹಿತಿಯನ್ನು ಒಂದು ಕೇಂದ್ರೀಕೃತ ಡೇಟಾಬೇಸ್ನಲ್ಲಿ ಒದಗಿಸುವುದು ತುಂಬಾ ಅಗತ್ಯ. ಈ ಮೂಲಕ, ನಮ್ಮ ನಿಗಮದಂತಹ ಖರೀದಿ ಏಜೆನ್ಸಿಗಳು ಔಷಧಗಳನ್ನು ಖರೀದಿಸುವ ಮೊದಲು ಔಷಧ ಕಂಪನಿಗಳ ಪೂರ್ವಾಪರ ಪರಿಶೀಲಿಸಲು ಮತ್ತು ಮಹಾರಾಷ್ಟ್ರದಲ್ಲಿ ಸಂಶಯಾಸ್ಪದ ಪೂರೈಕೆದಾರರು ನಕಲಿ ಆ್ಯಂಟಿಬಯೊಟಿಕ್ಗಳನ್ನು ಪೂರೈಸಿದಂತಹ ಸನ್ನಿವೇಶಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ತಮ್ಮ ಉತ್ಪಾದನಾ ಘಟಕಗಳನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸುವ ರಾಜ್ಯಗಳ ತಯಾರಕರಿಗೆ ಖರೀದಿ ಅಧಿಕಾರಿಗಳು ಆದ್ಯತೆ ನೀಡಲು ಸಹ ಅವಕಾಶ ದೊರೆಯುತ್ತದೆ.

ಟೆಂಡರ್ಗಳಲ್ಲಿ ಭಾಗವಹಿಸುವವರೇನಾದರೂ ಕಪ್ಪುಪಟ್ಟಿಗೆ ಸೇರಿದ್ದರೆ, ಆ ಮಾಹಿತಿ ಯನ್ನು ಸ್ವತಃ ಅವರು ನೀಡದ ವಿನಾ ಆ ಬಗ್ಗೆ ಪರಾಮರ್ಶಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಈಗ ಇದೆ. ವಿವಿಧ ಖರೀದಿ ಏಜೆನ್ಸಿಗಳು ಕಪ್ಪುಪಟ್ಟಿಗೆ ಸೇರಿಸಿದ ಔಷಧ ತಯಾರಕರ ಕೇಂದ್ರೀಕೃತ ರಿಜಿಸ್ಟರ್ ಒಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ರಚಿಸಿದರೆ, ಅಂತಹ ತಯಾರಕರನ್ನು ಮಾರುಕಟ್ಟೆಯಿಂದ ಹೊರಹಾಕಲು ಸಾಧ್ಯವಾಗುತ್ತದೆ.

ಸಾವು ಅಥವಾ ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಔಷಧಗಳಿಗೆ ಸಂಬಂಧಿಸಿ
ದಂತೆ ತನಿಖೆ ಎದುರಿಸುತ್ತಿರುವ ತಯಾರಕರು, ತಮ್ಮ ಔಷಧಗಳಲ್ಲಿರುವ ಸಮಸ್ಯೆಯನ್ನು ಸಮರ್ಪಕವಾಗಿ ನಿವಾರಿಸಿರುವುದನ್ನು ಸಾಬೀತು ಮಾಡುವವರೆಗೆ, ಆ ಕಂಪನಿಗಳು ಔಷಧ ಮಾರಾಟ ಮಾಡುವುದನ್ನು ನಿರ್ಬಂಧಿಸಲು ಅನುವಾಗುವಂತೆ ಆಯಾ ರಾಜ್ಯಗಳಿಗೆ ಕಾನೂನು ಬಲ ನೀಡಬೇಕು. ಹಾಗಾದರೆ, ಅದು
ಅತ್ಯಗತ್ಯವಾದ ಸುಧಾರಣೆಯೇ ಹೌದು.

ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಕಾಯ್ದೆಯು ಕೇಂದ್ರದ ವ್ಯಾಪ್ತಿಗೆ ಬರುವುದರಿಂದ, ಈ ಶಾಸನದಲ್ಲಿ ತುರ್ತಾಗಿ
ಸುಧಾರಣೆ ತರುವ ದಿಸೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಜೊತೆಗೆ ಅವರನ್ನು ಸದ್ಯದಲ್ಲೇ ಮುಖತಃ ಭೇಟಿ ಮಾಡಿ, ಆಗಬೇಕಿರುವ ಸುಧಾರಣೆ ಗಳ ಬಗ್ಗೆ ಗಮನ ಸೆಳೆಯಲು ನಿರ್ಧರಿಸಲಾಗಿದೆ. ದೇಶದಾದ್ಯಂತ ಔಷಧಗಳ ಗುಣಮಟ್ಟ ಸುಧಾರಿಸಲು ಅನುವಾಗುವ ಯಾವುದೇ ಸುಧಾರಣೆಗಳನ್ನು ಬೆಂಬಲಿಸಲು ಕರ್ನಾಟಕ ಸದಾ ಸಿದ್ಧ ಮತ್ತು ಬದ್ಧ.

ಲೇಖಕ: ರಾಜ್ಯದ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.