ಒಬ್ಬ ವ್ಯಕ್ತಿಯ ನಿಗೂಢ ಸಾವಿನ ಕಾರಣವನ್ನು ತಿಳಿಯಲು ಪಂಚನಾಮೆ ಜರುಗಿಸಲಾಗುತ್ತದೆ. ಇದನ್ನು ‘ಶವ ತನಿಖಾ ಪಂಚನಾಮೆ’ ಎನ್ನಲಾಗುತ್ತದೆ. ಸಾಮಾನ್ಯ ಕಾನೂನು ಅರ್ಥದಲ್ಲಿ ಇದು ಶವದ ಮೇಲೆ ಪಂಚರ ಸಮಕ್ಷಮ ನಡೆಸಲಾಗುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆ, ಪೊಲೀಸ್ ತನಿಖಾಧಿಕಾರಿ ಅಥವಾ ಕಾರ್ಯನಿರ್ವಾಹಕ ದಂಡಾಧಿಕಾರಿ ಅಥವಾ ಮ್ಯಾಜಿಸ್ಟ್ರೇಟರು ಜರುಗಿಸುವ ತನಿಖೆಯ ಭಾಗವಾಗಿರುತ್ತದೆ.

ಶವ ತನಿಖಾ ಪ್ರಕ್ರಿಯೆಗಳಲ್ಲಿ ಮೂರು ವಿಧಗಳಿರುತ್ತವೆ. ಮೊದಲನೆಯದು, ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಯೇ ಪಂಚರ ಸಮಕ್ಷಮ ಜರುಗಿಸುವುದು. ಪಂಚರು ಎಂದರೆ, ಶವದ ಮಹಜರು ಜರುಗಿದ್ದನ್ನು ಖುದ್ದು ಹಾಜರಿದ್ದು ಎಲ್ಲವನ್ನೂ ಗಮನಿಸುವ ವ್ಯಕ್ತಿ ಅಥವಾ ಮಹಜರು ಪಂಚ ಸಾಕ್ಷಿ. ಇವರಲ್ಲಿ ಸ್ಥಳೀಯವಾದ ಇಬ್ಬರು ಗೌರವಾನ್ವಿತ ವ್ಯಕ್ತಿಗಳು ಇರುತ್ತಾರೆ.

ಶವ ತನಿಖಾ ಪ್ರಕ್ರಿಯೆಯ ಎರಡನೆಯ ವಿಧ: ಕಾರ್ಯನಿರ್ವಾಹಕ ದಂಡಾಧಿಕಾರಿ ತನಿಖೆಯನ್ನು ನಡೆಸುವುದು. ವ್ಯಕ್ತಿಯು ಅಪಘಾತದಲ್ಲಿ ಮರಣ ಹೊಂದಿದರೆ, ಅದು ಅಸಹಜವಾದ ಸಾವಾಗಿದ್ದರೆ, ಆತ್ಮಹತ್ಯೆಯಂತಹ ಪ್ರಕರಣವಾಗಿದ್ದಲ್ಲಿ, ಇತರೆ ಯಾರೋ ಕೊಲೆಯನ್ನು ಮಾಡಿರಬಹುದು ಎನ್ನುವ ಅನುಮಾನ ಇದ್ದಲ್ಲಿ, ಪ್ರಾಣಿಯಿಂದ ಸಾವು ಸಂಭವಿಸಿದ್ದಲ್ಲಿ, ಅಥವಾ ಯಂತ್ರದಿಂದ ಮರಣ ಹೊಂದಿರಬಹುದಾದ ಸಂದರ್ಭದಲ್ಲಿ ವಿಷಯ ತಿಳಿದ ತನಿಖಾಧಿಕಾರಿ, ಆ ಸಾವಿಗೆ ಮೇಲ್ನೋಟಕ್ಕೆ ಕಂಡುಬರಬಹುದಾದ ಕಾರಣವನ್ನು ತಿಳಿಯಲು ಸ್ಥಳೀಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಪ್ರಕರಣದ ಬಗ್ಗೆ ತಿಳಿಸಬೇಕಾಗುತ್ತದೆ. ಆಗ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 194ರ ಅಡಿಯಲ್ಲಿ ಶವದ ಮೇಲೆ ಪಂಚನಾಮೆ ಜರುಗಿಸಲಾಗುತ್ತದೆ.

ಮೂರನೆಯದು, ನ್ಯಾಯಿಕ ದಂಡಾಧಿಕಾರಿ (ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್) ನಡೆಸುವ ಪಂಚನಾಮೆ. ಪೊಲೀಸ್ ವಶದಲ್ಲಿದ್ದ ಸಂದರ್ಭದಲ್ಲಿ ಮೃತಪಟ್ಟಿದ್ದರೆ ಅಥವಾ ಅತ್ಯಾಚಾರಕ್ಕೆ ತುತ್ತಾಗಿ ಮರಣ ಹೊಂದಿದ್ದರೆ, ಕಡ್ಡಾಯವಾಗಿ ನ್ಯಾಯಿಕ ದಂಡಾಧಿಕಾರಿ, ಪೊಲೀಸ್ ತನಿಖಾಧಿಕಾರಿ ಮತ್ತು ಪಂಚರ ಸಮಕ್ಷಮದಲ್ಲಿ ಬಿಎನ್ಎಸ್ಎಸ್ ಕಲಂ 196ರ ಅಡಿಯಲ್ಲಿ ಪಂಚನಾಮೆ ಜರುಗಿಸಿ ವರದಿ ಸಿದ್ಧಪಡಿಸಬೇಕಾಗಿರುತ್ತದೆ.

ಈ ಪಂಚನಾಮೆಯನ್ನು ನಡೆಸುವಾಗ ಪಂಚರು, ಶವದ ಸಂಬಂಧಿಗಳಿಂದಾಗಲೀ, ತಿಳಿವಳಿಕೆ ಇರುವವರಾಗಲೀ ಲಭ್ಯವಿದ್ದಲ್ಲಿ ಅವರ ಹೇಳಿಕೆ ಪಡೆಯುವುದು ಕಡ್ಡಾಯ. ಶವದ ಮೇಲಿರುವ ಬಟ್ಟೆ, ಗಾಯದ ಗುರುತುಗಳು, ಯಾವುದಾದರೂ ಆಯುಧ ಉಪಯೋಗಿಸಿರುವ ಬಗ್ಗೆ ದೊರೆಯಬಹುದಾದ ಸುಳಿವುಗಳನ್ನು ಪತ್ತೆ ಹಚ್ಚಿ ಪಂಚನಾಮೆ ವರದಿಯನ್ನು ಸಿದ್ಧಪಡಿಸಬೇಕು. ಸಾವಿನ ಬಗ್ಗೆ ಮೇಲ್ನೋಟಕ್ಕೆ ತಮಗೆ ಕಂಡುಬರುವ ಅಭಿಪ್ರಾಯವನ್ನು ಪಂಚರು ದಾಖಲಿಸಬೇಕು. ಈ ಸಮಯದಲ್ಲಿ ಪಂಚರ ಸಹಿ ಪಡೆಯುವುದು ಕಡ್ಡಾಯ.

ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಪೊಲೀಸ್ ವಶದಲ್ಲಿದ್ದಾಗ ಸಂಭವಿಸಿದ ಸಾವಿನ ಪ್ರಕರಣಗಳಲ್ಲಿ ಕಡ್ಡಾಯವಾಗಿ ಶವ ತನಿಖೆಯನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್, ಪಂಚರ ಸಮಕ್ಷಮದಲ್ಲಿ ಬಿಎನ್ಎಸ್ಎಸ್ ಕಾಯ್ದೆಯ ಕಲಂ 196ರ ಅಡಿಯಲ್ಲಿ ನಡೆಸಿ ವರದಿ ಸಿದ್ಧಪಡಿಸಬೇಕಾಗಿರುತ್ತದೆ.

ಕೊಲೆ ಅಥವಾ ಅಸಹಜ ಸಾವಿನ ನಂತರ ಶವವನ್ನು ಹೂತು ಹಾಕಿದ್ದು, ಅದರ ಕುರಿತು ಅನುಮಾನವಿದ್ದರೆ, ಸರಿಯಾದ ಕಾರಣವನ್ನು ತಿಳಿಯುವ ಸಲುವಾಗಿ ಶವವನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ತನಿಖಾಧಿಕಾರಿಯೂ ಆದ ಕಾರ್ಯನಿರ್ವಾಹಕ ದಂಡಾಧಿಕಾರಿ (ಎಕ್ಸಿಕ್ಯುಟೀವ್ ಮ್ಯಾಜಿಸ್ಟ್ರೇಟ್–ತಹಶೀಲ್ದಾರ್, ಕಂದಾಯ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ) ಅಥವಾ ಮ್ಯಾಜಿಸ್ಟ್ರೇಟ್ ಅನುಮತಿಯ ಮೇರೆಗೆ ಜರುಗಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹೂತಿರುವ ಶವವನ್ನು ಹೊರ ತೆಗೆದಾಗ ಶವದ ಪಂಚನಾಮೆಯನ್ನು ಕಡ್ಡಾಯವಾಗಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ಸ್ಥಳೀಯ ಮ್ಯಾಜಿಸ್ಟ್ರೇಟರೇ ಬಿಎನ್ಎಸ್ಎಸ್ ಕಲಂ 196 ಹಾಗೂ ಕರ್ನಾಟಕ ಪೊಲೀಸ್ ಕೈಪಿಡಿ–1965ರ ಆರ್ಡರ್ 1396 ಉಪ ನಿಯಮ (29) ಮತ್ತು (30)ರ ಅಡಿಯಲ್ಲಿ ಪಂಚರು, ವೈದ್ಯರು ಹಾಗೂ ಸಂಬಂಧಿಕರ ಸಮಕ್ಷಮ ಜರುಗಿಸಬೇಕಾಗಿರುತ್ತದೆ.

ಈ ಎಲ್ಲ ಸಂದರ್ಭಗಳಲ್ಲಿಯೂ ಸಾವಿನ ಖಚಿತ ಕಾರಣವನ್ನು ತಿಳಿಯಲು ವಿಧಿ ವಿಜ್ಞಾನ ವೈದ್ಯರಿಂದ ಶವವನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಬೋನ್ ಮ್ಯಾರೊ ಇರುವಂತಹ ಮೂಳೆಗಳನ್ನು ಆಯ್ಕೆ ಮಾಡಿಕೊಂಡಾಗ ಅದರ ಮೂಲಕ ರಕ್ತದಲ್ಲಿನ ಕಣಗಳನ್ನು ಬೇರ್ಪಡಿಸಿ ಮುಂದಿನ ತನಿಖೆಯನ್ನು ಶವದ ಗುರುತು ಅಂದರೆ ಯಾವ ವ್ಯಕ್ತಿಯದ್ದು ಎಂದು ಖಚಿತಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಆ ತಜ್ಞರಿಂದ ಹೊರಬೀಳುವ ಸಾವಿನ ಕಾರಣವು ನಂಬಲು ಅರ್ಹವಾದದ್ದು ಎಂದು ಕಾನೂನು ಚೌಕಟ್ಟಿನಲ್ಲಿ ಭಾವಿಸಬಹುದಾಗಿದೆ.

ಕೆಲವು ಪ್ರಕರಣಗಳಲ್ಲಿ ಶವ ತನಿಖೆಯನ್ನು ಪೊಲೀಸ್ ತನಿಖಾಧಿಕಾರಿಯ ಬದಲಿಗೆ ಎಕ್ಸಿಕ್ಯುಟೀವ್ ಮ್ಯಾಜಿಸ್ಟ್ರೇಟ್–ತಹಶೀಲ್ದಾರ್, ಕಂದಾಯ ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿ ಅಥವಾ ನ್ಯಾಯಿಕ ದಂಡಾಧಿಕಾರಿ– ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟರ ಉಪಸ್ಥಿತಿಯನ್ನು ಕಡ್ಡಾಯಗೊಳಿಸಲಾಗುತ್ತದೆ. ಇದಕ್ಕೆ ಕಾರಣ, ಪೊಲೀಸ್ ತನಿಖೆಯ ಬಗ್ಗೆ ಇರುವ ಅನುಮಾನ ಅಥವಾ ತನಿಖೆಯನ್ನು ಯಾವುದೇ ಲೋಪವಿಲ್ಲದೆ ಜರುಗಿಸಬೇಕು ಎನ್ನುವುದೇ ಆಗಿರುತ್ತದೆ.

⇒(ಲೇಖಕ: ಹೈಕೋರ್ಟ್ನ ಹಿರಿಯ ವಕೀಲರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.