‘ನನ್ನ ಮತ್ತು ನನ್ನ ಕುಟುಂಬದವರ ಚಾರಿತ್ರ್ಯ ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುತ್ತಿರುವುದರಿಂದ ಮನಸ್ಸಿಗೆ ಬೇಸರವಾಗಿದೆ’ ಎಂದು ಜಾವೆಲಿನ್ ತಾರೆ ನೀರಜ್ ಚೋಪ್ರಾ ಇತ್ತೀಚೆಗೆ ಅಳಲು ತೋಡಿಕೊಂಡಿದ್ದರು. ಅದಾದ ಕೆಲವೇ ದಿನಗಳಲ್ಲಿ, ‘ನಿಮ್ಮ ಮನರಂಜನೆಗೆ ನಮ್ಮ ಪುತ್ರ ವಸ್ತುವಾಗುವುದು ಬೇಡ. ಆನ್ಲೈನ್ ಒಂದು ಕೊಳಕು ತಾಣ. ನಮ್ಮ ಮಗು ವೈರಲ್ ಆಗುವುದು ನಮಗೆ ಬೇಕಿಲ್ಲ’ ಎಂದು ಕ್ರಿಕೆಟಿಗ ಜಸ್ಪ್ರೀತ್ ಬೂಮ್ರಾ ಅವರ ಪತ್ನಿ ಬೇಸರ ಹೊರಹಾಕಿದ ಸುದ್ದಿಯೂ ವರದಿಯಾಗಿದೆ.

ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಜಾಲತಾಣಗಳಿಂದ ಬಹಳಷ್ಟು ಉಪಯೋಗ ಪಡೆದಿರುವಂತೆಯೇ ನಿಂದನೆಗೆ ಒಳಗಾಗಿ ನೊಂದುಕೊಳ್ಳುತ್ತಿರುವುದು ಸಹ ಸತ್ಯ. ದಿನಬೆಳಗಾಗುವವಷ್ಟರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬನನ್ನು ವಿಶ್ವಕ್ಕೇ ಪರಿಚಯಿಸುವಷ್ಟು ಶಕ್ತಿಶಾಲಿಯಾಗಿರುವ ಜಾಲತಾಣಗಳು ಎಂತಹ ಮಹಾತ್ಮನನ್ನು ಕೂಡ ಕ್ಷಣಾರ್ಧದಲ್ಲಿ ಟೀಕಿಸಿ ಕೆಸರು ಮೆತ್ತುವಂತೆ ಮಾಡುತ್ತಿರುವುದು ವಿಪರ್ಯಾಸ. ಆಧುನಿಕ ಯುಗದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿ, ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಜಾಲತಾಣಗಳು, ಪ್ರೀತಿ, ಸ್ನೇಹ, ಕರುಣೆಯ ಸಂಬಂಧಗಳ ಬೆಸುಗೆಯಾಗುವ ಬದಲು ದ್ವೇಷದ ಬಜಾರುಗಳನ್ನೇ ಸೃಷ್ಟಿಸುತ್ತಿರುವ ಬಗ್ಗೆ ನಾವೆಲ್ಲಾ ಚಿಂತಿಸಬೇಕಾಗಿದೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಇದು ಒಬ್ಬ ವ್ಯಕ್ತಿಯ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಮತ್ತು ಮತಧಾರ್ಮಿಕ ಸ್ವಾತಂತ್ರ್ಯದ ಚಲಾವಣೆಗೆ ಅಡಿಗಲ್ಲು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಹಾಗೆಂದು ಇದು ಸರ್ವತಂತ್ರ ಸ್ವತಂತ್ರವಾದ ಹಕ್ಕಲ್ಲ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಈ ಹಕ್ಕನ್ನು ಚಲಾಯಿಸುವಾಗ ನಮಗಿರುವ ವಿಶೇಷ ಕರ್ತವ್ಯವನ್ನು ನಿಭಾಯಿಸುವ ಮೂಲಕ ಎಲ್ಲರ ಘನತೆ, ಗೌರವವನ್ನು ಕಾಪಿಟ್ಟು ಸಾರ್ವಜನಿಕ ಸುವ್ಯವಸ್ಥೆಗೆ ಸಹಕಾರಿಯಾಗಬೇಕಾದುದು ನಮ್ಮ ಜವಾಬ್ದಾರಿಯೂ ಹೌದಲ್ಲವೇ?

ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಬಗ್ಗೆ ಇತ್ತೀಚೆಗೆ ನಾಗರಿಕ ಸೇವೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ ಹೊರಡಿಸಿರುವ ಮಾರ್ಗಸೂಚಿಯು ಪ್ರತಿಯೊಬ್ಬ ಜಾಲತಾಣ ಬಳಕೆದಾರನಿಗೂ ದಿಕ್ಸೂಚಿಯಂತೆ ಆಗಬೇಕು. ಯಾರು ಯಾವ ವಿಚಾರಗಳನ್ನು ಹೇಳುತ್ತಿದ್ದಾರೆ, ಆ ವಿಚಾರಗಳ ಸತ್ಯಾಸತ್ಯತೆಗಳೇನು ಎಂಬುದನ್ನು ಅರಿತು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. ಪ್ರಚೋದನಕಾರಿ, ಅಪಾಯಕಾರಿ, ನಿಂದನಾತ್ಮಕ ಪ್ರತಿಕ್ರಿಯೆಗಳನ್ನು ಮಾಡುವುದನ್ನು ಬಿಡಬೇಕು.

ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಬಳಸುವವರು, ‘...ಹುಸಿಯ ನುಡಿಯಲುಬೇಡ..., ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ... ಬಯಿದವವರೆನ್ನ ಬಂಧುಗಳೆಂಬೆ, ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ..., ಜರಿದವರೆನ್ನ ಜನ್ಮಬಂಧುಗಳೆಂಬೆ, ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ...’ ಎಂಬ ಬಸವಣ್ಣನ ಮಾತುಗಳನ್ನು ಮನನ ಮಾಡಿಕೊಂಡು ಎಚ್ಚರಿಕೆ ಮತ್ತು ವಿವೇಚನೆಯಿಂದ ಬಳಸುವಂತೆ ಆಗಬೇಕು. ಆಗ ಜಾಲತಾಣಗಳು ನಿಸ್ಸಂಶಯವಾಗಿ ಜಾಣತಾಣಗಳಾಗಿ ಬದಲಾಗುತ್ತವೆ.

ನಮ್ಮ ಅಭಿಪ್ರಾಯಕ್ಕಿಂತ ಭಿನ್ನವಾದ ಅಭಿಪ್ರಾಯವನ್ನು ಕೇಳಿಸಿಕೊಳ್ಳುವ ತಾಳ್ಮೆ ನಮಗೆ ಮುಖ್ಯವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಬಾಳ್ವೆಯನ್ನು ಸಾಧ್ಯವಾಗಿಸಿರುವುದು ಇದೇ ಸಹನೆಯೆಂಬ ಅಸ್ತ್ರ ಅಲ್ಲವೇ? ಗಾಂಧೀಜಿ ಹೇಳಿದ್ದೂ ಈ ಸಹಿಷ್ಣುತೆಯನ್ನೇ ಅಲ್ಲವೇ? ಸತ್ಯವನ್ನು ಅರಸುವ, ಸತ್ಯವನ್ನು ಎದುರಿಸುವ ಪ್ರಜ್ಞೆಯನ್ನು ಬಸವಣ್ಣ ನಮಗೆ ಬಳುವಳಿಯಾಗಿ ಕೊಟ್ಟಿರುವಾಗ ಡಿಜಿಟಲ್ ಸಂಯಮ ಬೆಳೆಸಿಕೊಳ್ಳುವುದು ನಮಗೆ ಅಸಾಧ್ಯವಾದುದೇನೂ ಅಲ್ಲ!

ಡಿಜಿಟಲ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡುವ ಜೊತೆಗೆ ಡಿಜಿಟಲ್ ದೂರುಗಳನ್ನು ತ್ವರಿತವಾಗಿ ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮುಖ್ಯವಾಗಿ ನಕಲಿ ಅಕೌಂಟ್ಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಬೇಕು. 2000ನೇ ಇಸವಿಯಲ್ಲಿ ಜಾರಿಯಾದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾನೂನಿಗೆ 2008ರಲ್ಲಿ ತಿದ್ದುಪಡಿ ತಂದು ಸೇರ್ಪಡೆಗೊಳಿಸಿರುವ 66ಎ, ಸಂಪರ್ಕ ಜಾಲ ಅಥವಾ ಇತರ ಯಾವುದಾದರೂ ಜಾಲದ ಮುಖಾಂತರ ಆಕ್ಷೇಪಾರ್ಹ ಸಂದೇಶಗಳನ್ನು ಕಳಿಸಿದ್ದಕ್ಕೆ ಶಿಕ್ಷೆ ಎಂಬ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ಹಾಗಂತ ಎಲ್ಲವನ್ನೂ ಕಾನೂನಿನಿಂದಲೇ ಸರಿಪಡಿಸಲಾಗದು. ವಯಸ್ಸು ಮತ್ತು ವೃತ್ತಿಗಳ ಭೇದವಿಲ್ಲದೆ ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳು ವಿದ್ಯಾಭ್ಯಾಸವನ್ನು, ದೊಡ್ಡವರು ವೃತ್ತಿಜೀವನದ ಧ್ಯೇಯಗಳನ್ನು ಮರೆಯುತ್ತಿರುವಾಗ, ಮುಂದಿನ ಪೀಳಿಗೆ ಡಿಜಿಟಲ್ ವ್ಯಸನಕ್ಕೆ ಬಲಿಯಾಗುವುದನ್ನು ತಡೆದು ಅವರಿಗೆ ಡಿಜಿಟಲ್ ಸಾಕ್ಷರತೆ ನೀಡಬೇಕಾಗಿದೆ. ಬ್ರಿಟನ್ನ ಸಾಮಾಜಿಕ ಸಂಸ್ಥೆಯೊಂದು 14ರಿಂದ 24 ವರ್ಷ ವಯಸ್ಸಿನ ಮಕ್ಕಳನ್ನೊಳಗೊಂಡ ಸಮೀಕ್ಷೆಯೊಂದನ್ನು ಮಾಡಿದೆ. ಜಾಲತಾಣಗಳು ಯುವಪೀಳಿಗೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅದು ವರದಿ ನೀಡಿರುವುದನ್ನು ನಾವು ಎಚ್ಚರಿಕೆಯ ಗಂಟೆಯಾಗಿ ಭಾವಿಸಬೇಕಿದೆ.

ಶಾಲಾ ಕಾಲೇಜುಗಳಲ್ಲಿ ಜಾಲತಾಣಗಳ ಬಗ್ಗೆ ಪಠ್ಯಕ್ರಮ ರೂಪಿಸುವುದರ ಜೊತೆಗೆ, ಇವುಗಳಿಂದ ಆಗುವ ಅಪಾಯಗಳ ಕುರಿತ ‘ಸೋಷಿಯಲ್ ಡೈಲಮ’ದಂತಹ ಕಿರುಚಿತ್ರಗಳನ್ನು ಮಕ್ಕಳಿಗೆ ತೋರಿಸಿ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಕಂಟೆಂಟ್ಗಳನ್ನು ನಿಯಂತ್ರಿಸುವ ಬಗ್ಗೆ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಮತ್ತು ‘ಒಟಿಟಿ ಪ್ರತಿನಿಧಿಗಳೂ ನ್ಯಾಯಾಲಯದ ಮುಂದೆ ಬರಲಿ, ಅವರಿಗೂ ಸ್ವಲ್ಪ ಸಾಮಾಜಿಕ ಜವಾಬ್ದಾರಿ ಇರಲಿ’ ಎಂಬ ನ್ಯಾಯಮೂರ್ತಿಗಳ ಮಾತು ಈ ದಿಸೆಯಲ್ಲಿ ನಮಗೆ ಭರವಸೆಯ ಬೆಳಕನ್ನು ಚೆಲ್ಲುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.