ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ
ನವದೆಹಲಿ, ಮಾರ್ಚ್ 14– ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ಇಂದು ಆ ಸ್ಥಾನದಿಂದ ತೆಗೆದುಹಾಕಿದ ಪಕ್ಷದ ಕಾರ್ಯಕಾರಿಣಿ, ನೂತನ ಅಧ್ಯಕ್ಷೆಯನ್ನಾಗಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲೇ ಇದುವರೆಗೆ ಕಂಡರಿಯದ ಇತಿಹಾಸ ಸೃಷ್ಟಿಸಿತು.
ಈ ನೇಮಕವನ್ನು ಒಪ್ಪಿಕೊಂಡು ಸೋನಿಯಾ ಅವರು ಪಕ್ಷದ ಅಧ್ಯಕ್ಷೆ ಸ್ಥಾನ ವನ್ನು ವಹಿಸಿಕೊಂಡರು. ನಂತರ ಸಂಜೆ ನಡೆದ ಪಕ್ಷದ ಉನ್ನತ ನಿರ್ಣಯಗಳ ಸಮಿತಿಯಾದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಸೋನಿಯಾ ಅವರು ಕಾಂಗ್ರೆಸ್ ಅಧ್ಯಕ್ಷೆಯಾಗುವ ಮೂಲಕ ಪಕ್ಷದ ನಾಯಕತ್ವ ಏಳು ವರ್ಷಗಳ ನಂತರ ಮತ್ತೆ ಇಂದಿರಾ ಗಾಂಧಿ ಮನೆತನದ ನಿಯಂತ್ರಣಕ್ಕೆ ಹೋಯಿತು.
***
ಬಿಜೆಪಿಗೆ ಬೆಂಬಲ: ರಾಷ್ಟ್ರಪತಿಗೆ ಜಯಲಲಿತಾ ಪತ್ರ
ನವದೆಹಲಿ, ಮಾರ್ಚ್ 14 (ಪಿಟಿಐ)– ಕೊನೆಗೂ ಬಿಜೆಪಿ ಪಕ್ಷಕ್ಕೆ ಹೊರಗಿನಿಂದ ಬೆಂಬಲ ನೀಡುವ ತಮ್ಮ ಹಾಗೂ ಎಲ್ಲ ಮಿತ್ರಪಕ್ಷಗಳ ಬೆಂಬಲ ಪತ್ರಗಳನ್ನು ಎಐಎಡಿಎಂಕೆ ಇಂದು ರಾಷ್ಟ್ರಪತಿ ಅವರಿಗೆ ತಲುಪಿಸಿತು.
ಇದರೊಂದಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಪ್ರಕ್ರಿಯೆಯಲ್ಲಿ ಬಿಜೆಪಿ ಮತ್ತೊಂದು ಹೆಜ್ಜೆ ಮುಂದೆ ಸಾಗಿದಂತಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.