ಭಿನ್ನಮತೀಯರ ಸವಾಲು ಎದುರಿಸಲು ರಾವ್ ಕ್ರಮ

ನವದೆಹಲಿ, ಏ. 13 (ಯುಎನ್‌ಐ)– ಕಾಂಗೈ ಅಧ್ಯಕ್ಷ ಹಾಗೂ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಏಪ್ರಿಲ್ 24ರಂದು ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾಗುವ ಮೊದಲು, ತಮ್ಮ ನಾಯಕತ್ವಕ್ಕೆ ಸವಾಲು ಹಾಕುತ್ತಿರುವ ಭಿನ್ನಮತೀಯರ ಯತ್ನಗಳನ್ನು ವಿಫಲಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.

ಹೆಚ್ಚು ರಜೆ– ‘ಮರುಚಿಂತನೆ ಅಗತ್ಯ’

ಬೆಂಗಳೂರು, ಏ. 13– ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ನಿಧನರಾದಾಗ ಎರಡು ಅಥವಾ ಅದಕ್ಕಿಂತ ಹೆಚ್ಚು ದಿನ ರಜೆ ಘೋಷಿಸುವ ಬಗ್ಗೆ ಸರ್ಕಾರ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕಂಡುಬಂದಿದೆ.

ಸೋಮವಾರ ನಿಧನರಾದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಗೌರವಾರ್ಥ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಂಗಳವಾರ, ಬುಧವಾರ ರಜೆ ಪ್ರಕಟಿಸಿದವು. ಗುರುವಾರ ಮಹಾವೀರ ಜಯಂತಿ, ಶುಕ್ರವಾರ ಡಾ. ಅಂಬೇಡ್ಕರ್ ಜಯಂತಿಗೆ ಮೊದಲೇ ರಜೆ ನಿಗದಿಯಾಗಿತ್ತು.

ನಾಲ್ಕು ದಿನ ಸತತವಾಗಿ ರಜೆ ಬಂದಿದ್ದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಅರ್ಥ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.