ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷದ ಹಿಂದೆ ಈ ದಿನ | ಅಧಿಕಾರಕ್ಕೆ ಕಚ್ಚಾಟ: ‍ಪಟೇಲ್ ಎಚ್ಚರಿಕೆ

ಶುಕ್ರವಾರ 24, ಜುಲೈ 1998
Published 23 ಜುಲೈ 2023, 19:30 IST
Last Updated 23 ಜುಲೈ 2023, 19:30 IST
ಅಕ್ಷರ ಗಾತ್ರ

ಅಧಿಕಾರಕ್ಕೆ ಕಚ್ಚಾಟ: ‍ಪಟೇಲ್ ಎಚ್ಚರಿಕೆ

ಬೆಂಗಳೂರು, ಜುಲೈ 23– ಪಂಚಾಯತ್‌ ರಾಜ್ ಸಂಸ್ಥೆಗಳನ್ನು ಪ್ರವೇಶಿಸಿದವರಿ ಅಧಿಕಾರಶಾಹಿಯೊಂದಿಗೆ ಜಗಳ ಕಚ್ಚಾಟದಲ್ಲಿ ತೊಡಗದೆ ಸಹಕಾರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್ ಅವರು ಇಂದು ಸೂಚಿಸಿದರು.

ಪಂಚಾಯತ್ ರಾಜ್‌ ಸಂಸ್ಥೆಗಳಲ್ಲಿರುವವರು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದಾದರೆ ಅವುಗಳ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಪಂಚಾಯತ್‌ ಪರಿಷತ್‌ ಎರಡನೇ ಸಭೆಯ ಅಧ್ಯಕ್ಷತೆ ವಹಿಸಿ ಅವರು ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾಗದದ ಮೇಲೆಯೇ ಉಳಿದ ತನಿಖೆ

ಬೆಂಗಳೂರು, ಜುಲೈ 23– ಆರೋಪ ಹೊತ್ತ ಐಎಎಸ್‌ ಅಧಿಕಾರಿಗಳ ವಿರುದ್ಧ ತನಿಖೆ ಅಥವಾ ಕ್ರಮಕ್ಕೆ ‘ಐಎಎಸ್‌ ಲಾಬಿ’ ತಡೆಯೊಡ್ಡುತ್ತದೆಯೇ?

ದೆಹಲಿ ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಪ್ರಯದರ್ಶಿನಿ ಮಳಿಗೆಗಳನ್ನು ತೆರೆಯುವ ಹಾಗೂ ಮಳಿಗೆಗಳ ನವೀಕರಣದ ಹೆಸರಿನಲ್ಲಿ ನಡೆದಿರುವ ಲಕ್ಷಾಂತರ ರೂಪಾಯಿಗಳ ಭಾರಿ ಪ್ರಮಾಣದ ಅವ್ಯವಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ನಿಜ ಎಂದು ಅಧಿಕಾರದ ಸೂತ್ರ ಹಿಡಿದಿರುವವರೇ ಆತಂಕ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವಿಸಿದೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಡೆಸಬೇಕಾದ ತನಿಖೆಯನ್ನು ಮೂಲೆಗುಂಪು ಮಾಡಿ ಇಡೀ ಪ್ರಕರಣದ ಸದ್ದಡಗಿಸುವ ಪ್ರಕ್ರಿಯೆಯಲ್ಲಿ ‘ಐಎಎಸ್‌ ಲಾಬಿ’ ಭಾರಿ ಪ್ರಭಾವ ಬೀರಿದೆ ಎನ್ನುವ ಆರೋಪಕ್ಕೆ ಈಗ ಕೊರತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT