ಸದ್ದಿಲ್ಲದೆ ರಾಜ್ಯಕ್ಕೆ ಬಂದ ಸೀಸರಹಿತ ಪೆಟ್ರೋಲ್
ಬೆಂಗಳೂರು, ಸೆ. 8– ಪೆಟ್ರೋಲ್ ಕುರಿತು ಏನೇ ಸಂಭವಿಸಿದರೂ ದೊಡ್ಡ ಸುದ್ದಿಯಾಗುವ ಈ ದಿನಗಳಲ್ಲಿ, ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹೆಚ್ಚು ಸದ್ದುಗದ್ದಲ ಇಲ್ಲದೆ ರಾಜ್ಯದ ರಾಜಧಾನಿಯಲ್ಲಿ ಜಾರಿಗೆ ಬಂದಿದೆ; ಜತೆಗೆ ಕೆಲವು ಆರಂಭಿಕ ಸಮಸ್ಯೆಗಳನ್ನೂ ತನ್ನೊಡನೆ ಹೊತ್ತು ತಂದಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಆರಂಭವಾಗಿರುವ ಸೀಸರಹಿತ ಪೆಟ್ರೋಲ್ ಮಾರಾಟ ವ್ಯವಸ್ಥೆ ಹಂತಹಂತವಾಗಿ ಇಡೀ ರಾಜ್ಯದಲ್ಲಿ ಜಾರಿಯಾಗಲಿದೆ.
ಬರುವಾ ವರ್ಗಾವಣೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ
ನವದೆಹಲಿ, ಸೆ. 8 (ಪಿಟಿಐ): ಜಾರಿ ನಿರ್ದೇಶನಾಲಯದ ನಿರ್ದೇಶಕ ಎಂ.ಕೆ.ಬೆಜ್‌ಬರುವಾ ಅವರ ವರ್ಗಾವಣೆಯನ್ನು ಸಮರ್ಥಿಸಿ ನೀಡಿದ ಪ್ರಮಾಣಪತ್ರ, ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.
ಸೂಕ್ಷ್ಮ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಆಗಾಗ್ಗೆ ವರ್ಗಾವಣೆ ಮಾಡುವ ಕುರಿತ ತನ್ನ ತೀರ್ಪನ್ನು ‘ಸಂಪೂರ್ಣವಾಗಿ ತಿರುಚಲಾಗಿದೆ’ ಎಂದು ಕೋರ್ಟ್ ಹೇಳಿದೆ.