ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಅತಿಕ್ರಮಣಕಾರರಿಗೆ ತಕ್ಕ ಪಾಠ: 4 ನೆಲೆ ನಾಶ

Published 30 ಜೂನ್ 2024, 22:35 IST
Last Updated 30 ಜೂನ್ 2024, 22:35 IST
ಅಕ್ಷರ ಗಾತ್ರ

ಅತಿಕ್ರಮಣಕಾರರಿಗೆ ತಕ್ಕ ಪಾಠ: 4 ನೆಲೆ ನಾಶ

ನವದೆಹಲಿ, ಜೂನ್‌ 30– ಭಾರತೀಯ ಸೇನೆ ಮತ್ತು ವಾಯುಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಬಟಾಲಿಕ್‌ ಮತ್ತು ಡ್ರಾಸ್‌ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳನ್ನು ಸದೆಬಡಿಯಲಾಗಿದೆ ಹಾಗೂ ನಾಲ್ಕು ಪ್ರಮುಖ ನೆಲೆಗಳನ್ನು ಪುನಃ ವಶಕ್ಕೆ ಪಡೆಯಲಾಗಿದೆ.

ಪಾಕಿಸ್ತಾನದ ಕಡೆ 40 ಮಂದಿ ಸತ್ತಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆಯು ಮೂವರು ಅಧಿಕಾರಿಗಳು ಸೇರಿ 23 ಯೋಧರನ್ನು ಕಳೆದುಕೊಂಡಿದೆ.

ಅಣ್ವಸ್ತ್ರ ಪ್ರಯೋಗ: ಪಾಕ್‌ ಬೆದರಿಕೆ

ಇಸ್ಲಾಮಾಬಾದ್‌, ಜೂನ್‌ 30 (ಪಿಟಿಐ)– ಅಣ್ವಸ್ತ್ರ ಬಳಸುವುದಕ್ಕೆ ಸಹ ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನ ಇಂದು ಮತ್ತೊಮ್ಮೆ ಬೆದರಿಕೆ ಹಾಕಿದೆ. ಇದೇ ವೇಳೆ, ತಾನು ಕಾಶ್ಮೀರಿ ಭಯೋತ್ಪಾದಕರಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿ ಅದು ಸ್ಪಷ್ಟಪಡಿಸಿದೆ. ಕಾರ್ಗಿಲ್‌ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸೆನೆಟ್‌ ಸಭೆಯ ಮುಕ್ತಾಯಕ್ಕೆ ಈ ಹೇಳಿಕೆ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT