ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ, 2–2–1996

Last Updated 1 ಫೆಬ್ರುವರಿ 2021, 18:02 IST
ಅಕ್ಷರ ಗಾತ್ರ

ಶ್ರೀಕೃಷ್ಣ ಆಯೋಗ ರದ್ದು ವಾಜಪೇಯಿ ಅಸಮಾಧಾನ

ಬೆಂಗಳೂರು, ಫೆ. 1– ಮುಂಬೈನಲ್ಲಿ 1994ರಲ್ಲಿ ನಡೆದ ಗಲಭೆ, ಸಾವು ನೋವು ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿದ್ದ ಶ್ರೀಕೃಷ್ಣ ಆಯೋಗವನ್ನು ಸ್ಥಗಿತಗೊಳಿಸುವ ಮಹಾರಾಷ್ಟ್ರ ಸರ್ಕಾರದ ತೀರ್ಮಾನಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಬಿಜೆಪಿಯ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಇಂದು ಇಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಇರುವುದು ಶಿವಸೇನಾ– ಬಿಜೆಪಿ ಸಮ್ಮಿಶ್ರ ಸರ್ಕಾರ ವಾದರೂ ಈ ಕ್ರಮ ಸರಿಯಾದುದಲ್ಲ. ನಿನ್ನೆ ಹೈದರಾಬಾದಿನಲ್ಲಿ ಭೇಟಿಯಾಗಿದ್ದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಗೋಪಿನಾಥ ಮುಂಡೆ ಜತೆ ತಾವು ಈ ವಿಚಾರವನ್ನು ಚರ್ಚಿಸಿದ್ದಾಗಿಯೂ ಅವರು ತಮ್ಮದೇ ಆದ ರೀತಿಯಲ್ಲಿ ಸಮರ್ಥಿಸಿಕೊಂಡರಾದರೂ ತಮಗೆ ಅದರಿಂದ ಸಮಾಧಾನವಾಗಿಲ್ಲ ಎಂದು ವಾಜಪೇಯಿ ವಿವರಿಸಿದರು.

‘ಬೃಹತ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಖಾಸಗಿ ಕ್ಷೇತ್ರಕ್ಕೆ’

ಬೆಂಗಳೂರು, ಫೆ. 1– ಖಾಸಗಿ ಕ್ಷೇತ್ರದ ಸಹಕಾರದೊಂದಿಗೆ 13 ಸಾವಿರ ಕಿಲೊ ಮೀಟರ್ ‘ಬೃಹತ್ ರಾಷ್ಟ್ರೀಯ ಹೆದ್ದಾರಿ’ಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಒಟ್ಟು 22 ಉದ್ಯಮಗಳು ಕಾರ್ಯಸಾಧ್ಯತೆ ಸಮೀಕ್ಷೆಗೆ ಮುಂದೆ ಬಂದಿವೆ ಎಂದು ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವ ಎಂ.ರಾಜಶೇಖರಮೂರ್ತಿ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT