ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 18 ಫೆಬ್ರುವರಿ 1996

Last Updated 17 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಚಲನಚಿತ್ರ ವಾಣಿಜ್ಯಮಂಡಳಿ ಹೋಳು?
ಬೆಂಗಳೂರು, ಫೆ. 17–
ರಾಜ್ಯದಲ್ಲಿ ಪರಭಾಷಾ ಚಲನಚಿತ್ರಗಳ ಪ್ರದರ್ಶ ನಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೈಗೊಂಡಿರುವ ‘ಏಕಪಕ್ಷೀಯ’ ತೀರ್ಮಾನದಿಂದ ಸಿಡಿದೆದ್ದಿರುವ ಪ್ರದರ್ಶಕರು ಮತ್ತು ವಿತರಕರು ಮಂಡಳಿ ಯಿಂದ ‘ಬೇಸತ್ತು’ ಹೊರಬರುವ ಪ್ರಕ್ರಿಯೆ ಆರಂಭವಾಗಿದ್ದು, ಇದರ ಪರಿಣಾಮವಾಗಿ ಐದು ದಶಕಗಳ ಹಿನ್ನೆಲೆಯ ಮಂಡಳಿ ಅಕ್ಷರಶಃ ಎರಡಾಗಿ ಹೋಳಾಗುವ ಘಟ್ಟಕ್ಕೆ ಬಂದಿದೆ.

ಬಿಜೆಪಿಯಿಂದ ಆಳ್ವ ಹೊರಕ್ಕೆ; ಶಾಸಕ ಸ್ಥಾನಕ್ಕೆ ರಾಜೀನಾಮೆ– ದಳಕ್ಕೆ ಅರ್ಜಿ
ಬೆಂಗಳೂರು, ಫೆ. 17–
ಡಾ. ಜೀವರಾಜ ಆಳ್ವ ಅವರು ಭಾರತೀಯ ಜನತಾ ಪಕ್ಷಕ್ಕೆ ಮತ್ತು ವಿಧಾನಸಭೆಯ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಿದರು.

ಬಹುದಿನಗಳ ವದಂತಿಯಂತೆ ಅವರು ಕೊನೆಗೂ ಈ ನಿರ್ಧಾರಕ್ಕೆ ಬಂದಿರುವುದು ಮತ್ತು ಮರಳಿ ಜನತಾದಳ ಸೇರಲು ನಿರ್ಧರಿಸಿರುವುದರ ಹಿಂದೆ ದೊಡ್ಡ ರಾಜಕೀಯ ತಂತ್ರ ಅಡಗಿದ್ದರೂ ಅವರ ಈ ತೀರ್ಮಾನ ಬಿಜೆಪಿಗೆ ಅನಿರೀಕ್ಷಿತವೇನಲ್ಲ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯ ಗೆಲುವಿಗೆ ಅಗತ್ಯ ವಾದ 5 ಮತಗಳಿಗಾಗಿ ಒಂದೊಂದಕ್ಕೂ ಹೆಣಗುತ್ತಿರುವಾಗ, ಸಮಯ ನೋಡಿ ‘ರಾಜಕೀಯ ಟೈಂ ಬಾಂಬ್‌’ ಸಿಡಿಸಿದಡಾ. ಆಳ್ವ ಅವರ ನಿಲುವನ್ನು ‘ಅನುಕೂಲ ಸಿಂಧು ರಾಜಕಾರಣ’ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT