ಮಂಗಳವಾರ, ಜೂನ್ 15, 2021
27 °C

25 ವರ್ಷಗಳ ಹಿಂದೆ: ಬುಧವಾರ 5.6.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜಗಾತ್ರ ರಾಜ್ಯ ಸಂಪುಟ ಇಂದು ಅಸ್ತಿತ್ವಕ್ಕೆ

ಬೆಂಗಳೂರು,  ಜೂನ್ 4– ಜಾತಿ ಹಾಗೂ ಪ್ರಭಾವಕ್ಕೆ ಮಣಿಯದೆ ದಕ್ಷ ಮತ್ತು ಇದ್ದುದರಲ್ಲಿ ಪ್ರಾಮಾಣಿಕರಿಗೆ ಆದ್ಯತೆ ನೀಡಿ ಸಂಪುಟ ರಚನೆಯಲ್ಲಿ ತಮ್ಮತನ ತೋರಿಸಲು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಣಗಾಡುತ್ತಿದ್ದಾರೆ; ಗಜಗಾತ್ರದ ಸಂಪುಟ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

ಒತ್ತಡ ಹೆಚ್ಚುತ್ತಿರುವ ಕಾರಣ ಸಂಪುಟ ರಚನೆ ಕಾರ್ಯ ತೊಡಕಿನಲ್ಲಿ ಸಿಲುಕಿದೆ. ಇಂದು ರಾತ್ರಿ ದೆಹಲಿಯಿಂದ ನಗರಕ್ಕೆ ಮರಳಬೇಕಾಗಿದ್ದ ಪಟೇಲ್ ಮತ್ತು ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ ಬರಲಿದ್ದಾರೆ. ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಬುಧವಾರ ಬೆಳಗಿನ ಬದಲು ಸಂಜೆ ನಡೆಯುವ ನಿರೀಕ್ಷೆ ಇದೆ.

‘ವಿಶ್ವಾಸಮತಕ್ಕೆ ಮುನ್ನ ಹೊಸ ನೀತಿ ಇಲ್ಲ’

ನವದೆಹಲಿ, ಜೂನ್ 4 (ಪಿಟಿಐ)– ಸಂಯುಕ್ತ ರಂಗ ಸರ್ಕಾರ ವಿಶ್ವಾಸಮತ ಗಳಿಸುವ ತನಕ ಹೊಸ ನೀತಿ–ಕಾರ್ಯಕ್ರಮಗಳ ಘೋಷಣೆ ಹಾಗೂ ಹೆಚ್ಚಿನ ವೆಚ್ಚ ಬೇಡ ಎಂದು ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಸೂಚನೆ ಮೇರೆಗೆ ಸಂಪುಟ ಕಾರ್ಯದರ್ಶಿ ಸುರೇಂದ್ರ ಸಿಂಗ್, ವಿವಿಧ ಇಲಾಖೆಗಳ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು