ಮಂಗಳವಾರ, ಅಕ್ಟೋಬರ್ 26, 2021
23 °C

25 ವರ್ಷಗಳ ಹಿಂದೆ: ಭಾನುವಾರ 13.10.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಂಗದ ಅತಿಕ್ರಮಣಕ್ಕೆ ಕಳವಳ

ನವದೆಹಲಿ, ಅ. 12 (ಯುಎನ್‌ಐ, ಪಿಟಿಐ)– ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಹಕ್ಕುಗಳನ್ನು ಅತಿಕ್ರಮಿಸುತ್ತಿರುವ ಕುರಿತು ಅಧಿಕಾರಿಗಳು, ಸಂಸತ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕರ್ತವ್ಯದಲ್ಲಿನ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ.

ವಿಚಾರಸಂಕಿರಣದಲ್ಲಿ ಮಂಡಿಸಲಾದ ಅಭಿಪ್ರಾಯಗಳ ಕುರಿತ ಸಮಗ್ರ ಚಿಂತನೆ ಪ್ರತಿ ಫಲಿಸಿದ ಲೋಕಸಭಾ ಅಧ್ಯಕ್ಷ ಪಿ.ಎ. ಸಂಗ್ಮಾ ಅವರು ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವು ಕಾರ್ಯಾಂಗದ ಕೆಲಸಗಳನ್ನು ವಹಿಸಿಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್– ಸಂಯುಕ್ತ ರಂಗಕ್ಕೆ ಕಾನ್ಷಿರಾಂ ಅಂತಿಮ ಗಡುವು

ನವದೆಹಲಿ, ಅ. 12 (ಪಿಟಿಐ)– ಮಾಯಾವತಿ ಮುಖ್ಯಮಂತ್ರಿಯಾಗಲು ಸಂಯುಕ್ತರಂಗವು ಭಾನುವಾರದೊಳಗೆ ಬೇಷರತ್ ಬೆಂಬಲ ಪ್ರಕಟಿಸಬೇಕು. ರಂಗವು ಇದಕ್ಕೆ ಒಪ್ಪದಿದ್ದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಳ್ಳಬೇಕು ಎಂದು ಬಿಎಸ್‌ಪಿ ನಾಯಕ ಕಾನ್ಷಿರಾಂ ಅವರು ಗಡುವು ನೀಡುವುದರೊಂದಿಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಇನ್ನಷ್ಟು ಗೊಂದಲಕ್ಕೀಡಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು