ಮಂಗಳವಾರ, ಜನವರಿ 31, 2023
26 °C

25 ವರ್ಷಗಳ ಹಿಂದೆ: ಮಂಗಳವಾರ, 4–11–1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಟ್ರಾಯ್‌ ಪದ್ಧತಿ ಮರು ಜಾರಿಗೆ ಬಹುತೇಕ ಪೌರ ಸಂಸ್ಥೆಗಳ ಒಲವು 

ಬೆಂಗಳೂರು, ನ. 3– ಅಕ್ಟ್ರಾಯ್‌ ಪದ್ಧತಿ ಪುನರ್‌ ಜಾರಿಗೆ ರಾಜ್ಯದ ಬಹುತೇಕ ಪೌರ ಸಂಸ್ಥೆಗಳು ಒಲವು ವ್ಯಕ್ತಪಡಿಸಿವೆ. ಈ ವಿಚಾರದಲ್ಲಿ ಉದ್ಯಮ– ವ್ಯಾಪಾರಿ ಸಮುದಾಯದ ಪ್ರತಿನಿಧಿಗಳು ಹಾಗೂ ವಿರೋಧ ಪಕ್ಷಗಳ ಜೊತೆಗೆ ಜತೆಗೆ ಚರ್ಚೆ ನಡೆಸಿ ಎರಡು ಮೂರು ತಿಂಗಳಲ್ಲಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. 

ಅಭಿವೃದ್ಧಿ ಕಾರ್ಯಗಳು ಹಾಗೂ ವೇತನ ನೀಡಲು ಹಣಕಾಸು ಕೊರತೆ ಎದುರಿಸುತ್ತಿರುವ ಪೌರ ಸಂಸ್ಥೆಗಳ ಸಮಸ್ಯೆ ಕುರಿತು ಚರ್ಚಿಸಲು ಇಂದು ಕರೆದಿದ್ದ ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಮೇಯರ್‌, ಅಧ್ಯಕ್ಷರು, ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳ ಸಭೆಯಲ್ಲಿ ಅಕ್ಟ್ರಾಯ್‌ ಪದ್ಧತಿ ಪುನರ್‌ ಜಾರಿಗೆ ಒಲವು ವ್ಯಕ್ತವಾಯಿತು. 

ಕಾಂಗ್ರೆಸ್‌ನಲ್ಲಿ ಒಡಕಿನ ಭೀತಿ: 9ರಂದು ಕಾರ್ಯಕಾರಿ ಸಭೆ

ನವದೆಹಲಿ, ನ.3 (ಪಿಟಿಐ): ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಆದ ಒಡಕಿನಿಂದ ತಲ್ಲಣಗೊಂಡಿರುವ ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗಲಿ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆ ಈ ತಿಂಗಳ 9ರಂದು ನಡೆಯಲಿದೆ.

ಉತ್ತರ ಪ್ರದೇಶದಲ್ಲಿ ರಾಜಕೀಯ ಬೆಳವಣಿಗೆಯಿಂದಾಗಿ ಪಕ್ಷಕ್ಕೆ ಉಂಟಾದ ಹಿನ್ನಡೆಯ ಬಗ್ಗೆ ಪಕ್ಷದ ನಾಯಕರು ಚಿಂತೆಗೊಳಗಾಗಿದ್ದಾರೆ.

ಕೇಂದ್ರದಲ್ಲಿ ಪಕ್ಷ ಇಬ್ಬಾಗವಾಗಿ ಹೊಸ ಸಮ್ಮಿಶ್ರ ಸರ್ಕಾರ ಅಧಿಕಾರವನ್ನು ವಹಿಸಿಕೊಳ್ಳಲಿದೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು